ಉಪ್ಪಳ/ಮಧೂರು/ಮುಳ್ಳೇರಿಯ: ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ಹೊಳೆ, ತೋಡು ಉಕ್ಕಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದೆ. ಹಲವು ಮನೆಗಳು ಜಲಾವೃತಗೊಂಡಿದ್ದು, ಹಲವು ಕುಟುಂಬಗಳನ್ನು ಸುರಕ್ಷಿತ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮಳೆಯಿಂದ ಭಾರೀ ಪ್ರಮಾಣದಲ್ಲಿ ಕೃಷಿ ನಾಶನಷ್ಟ ಸಂಭವಿಸಿದೆ.
ಮಧೂರು ಅರಂತೋಡಿನ ಮೊಹಮ್ಮದ್ ಇಸಾಕ್ ಅವರ ಮನೆ ಆಂಶಿಕವಾಗಿ ಕುಸಿದು ಬಿದ್ದಿದೆ. ಚೆಂಗಳ ಬೇವಿಂಜೆ ಮುಂಡಕೈ ಹೊಳೆ ಉಕ್ಕಿ ಹರಿಯುತ್ತಿದ್ದು, ಜಲೀಲ್ ಅವರ ಮನೆ ಜಲಾವೃತಗೊಂಡಿದೆ.
ಶನಿವಾರ ಬೆಳಿಗ್ಗೆ ಮಧೂರು ಶ್ರೀಮಹಾಗಣಪತಿ ಸಿದ್ದಿವಿನಾಯಕ ದೇವಾಲಯದೊಳಗೆ ನೀರು ನುಗ್ಗಿದ್ದು, ಶಿವ ದೇವರ ಗುಡಿಯ ತೀರ್ಥ ದ್ವಾರದ ಮೂಲಕ ಶಿವಗುಡಿಯೊಳಗೆ ನೀರು ನುಗ್ಗಿತು. ಕಳೆದ 45 ವರ್ಷಗಳಿಂದ ಮೊದಲ ಬಾರಿ ಈ ರೀತಿ ನೀರು ಗುಡಿಯೊಳಗೆ ಪ್ರವೇಶಿಸಿದೆಯೆಂದು ದೇವಾಲಯ ಅಧಿಕೃತರು ತಿಳಿಸಿರುವರು. ಮಹಾಗಣಪತಿ ಗುಡಿಯೊಳಗೆ ನೀರು ನುಗ್ಗಿಲ್ಲ. ಕ್ಷೇತ್ರದ ದೈನಂದಿನ ಪೂಜಾ ಸೇವೆಗಳಿಗೆ ತೊಂದರೆಯಾಗಿದೆ.ಅಪ್ಪ ಪ್ರಸಾದ ತಯಾರಿಸುವಲ್ಲಿ ನೀರು ನುಗ್ಗಿ ತೊಂದರೆಯಾಗಿದೆ.
ಚೆಂಗಳ ನಾಲ್ಕನೇ ಮೈಲ್ ಪಾಣಾರ್‍ಕುಳಂನಲ್ಲಿ ಬೃಹತ್ ಗೋಡೆಯೊಂದು ಕುಸಿದು ಪಕ್ಕದ ತೋಡಿಗೆ ಬಿದ್ದು ನೀರಿನ ಹರಿಯುವ ಗತಿ ಬದಲಿಸಿ ಹತ್ತರಷ್ಟು ಮನೆಗಳು ಜಲಾವೃತಗೊಂಡಿದೆ. ಅವರನ್ನು ಅಗ್ನಿಶಾಮಕ ದಳ ರಕ್ಷಿಸಿದೆ. ಚೆಂಗಳ ಸಿಟಿಜನ್ ನಗರದ ಶಾಲೆ ಬಳಿಯ ತಗ್ಗು ಪ್ರದೇಶದ ಕಾಲನಿಯೊಂದರಲ್ಲಿ ಮಳೆ ನೀರು ಕಟ್ಟಿ ನಿಂತು 12 ಮನೆಗಳು ಜಲಾವೃತಗೊಂಡಿದೆ. ಮಧೂರು ಪಟ್ಲದಲ್ಲಿ ಮಧುವಾಹಿನಿ ಹೊಳೆಯನ್ನು ಸಂಪರ್ಕಿಸುವ ತೋಡಿನಲ್ಲಿ ನೀರು ಹರಿದು ಆ ಪ್ರದೇಶ ಜಲಾವೃತಗೊಂಡಿದೆ. ವಿಷಯ ತಿಳಿದು ಜು.19 ರಂದು ರಾತ್ರಿ 10.30 ಕ್ಕೆ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ನೀರಿನಲ್ಲಿ ಸಿಲುಕಿದ್ದ 33 ಮಂದಿಯನ್ನು ರಬ್ಬರ್ ಡಿಂಕಿ ಬಳಸಿ ಬದಿಗೆ ಸಾಗಿಸಿ ರಕ್ಷಿಸಿದರು. ಹಲವರು ಸ್ವತಃ ಮನೆ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಹಲವರನ್ನು ಅಲ್ಲೇ ಪಕ್ಕದ ಶಾಲೆಗೆ ಸ್ಥಳಾಂತರಿಸಲಾಗಿದೆ. ಈ ಪ್ರದೇಶದಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಮಧೂರು ಮಧುವಾಹಿನಿ ಹೊಳೆ ಉಕ್ಕಿ ಹರಿದು ಹತ್ತು ಮನೆಗಳು ಜಲಾವೃತಗೊಂಡಿದೆ. ಈ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಚೆಂಗಳ ಚೇರೂರಿನ ನಬೀಸಾ ಅವರ ಮನೆ ನೀರಿನಲ್ಲಿ ಮುಳುಗಿ ಸಾಮಾಗ್ರಿಗಳೆಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿದೆ. ಬೆದ್ರಡ್ಕ ಮಡತ್ತಿಲ್‍ನ ವಿಮಲ ಅವರ ಮನೆ ಪಕ್ಕದ ಗುಡ್ಡೆ ಕುಸಿದು ಮನೆ ಹಾನಿಗೀಡಾಗಿದೆ. ಕೂಡ್ಲು ಎರಿಯಾಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ತೋಡಿನಲ್ಲಿ ನೀರು ಉಕ್ಕಿ ಹರಿದು ಆ ಪ್ರದೇಶದ ಹಲವು ಮನೆಗಳು ಜಲಾವೃತಗೊಂಡಿದೆ.
ಕುಂಬಳೆ ರೈಲು ಹಳಿಗಳೂ ನೀರಿನಲ್ಲಿ ಮುಳುಗಿ ಮಳೆ ನೀರು ರೈಲು ನಿಲ್ದಾಣದೊಳಗೆ ಪ್ರವೇಶಿಸಿದೆ. ಇದರಿಂದಾಗಿ ರೈಲುಗಾಡಿಗಳು ಅತೀ ನಿಧಾನವಾಗಿ ಹಾದುಹೋಗುವಂತೆ ಮಾಡಲಾಗಿದೆ. ವಿಷಯ ತಿಳಿದು ಶುಕ್ರವಾರ ರಾತ್ರಿ ಜಿಲ್ಲಾಧಿಕಾರಿ ಸ್ಥಳಕ್ಕೆ ತೆರಳಿ ಸ್ಥಿತಿಗತಿ ಅವಲೋಕಿಸಿದರು. ಕುಂಬಳೆ ಕೊಡ್ಯಮ್ಮೆ ಶಾಲೆ ಬಳಿಯ ಸೇತುವೆ ಕುಸಿದು ಬಿದ್ದಿದ್ದು ಅದರಿಂದಾಗಿ ಸಾರಿಗೆ ಸಂಚಾರ ನಿಲುಗಡೆಗೊಂಡಿದೆ. ಕೊಯಿಪ್ಪಾಡಿ-ಕುಂಬಳೆ ರೈಲ್ವೇ ಸುರಂಗ ರಸ್ತೆಯಲ್ಲಿ ನೀರು ತುಂಬಿಕೊಂಡು ಸಾರಿಗೆ ಸಂಚಾರಕ್ಕೆ ಅಡ್ಡಿಯಾಗಿದೆ. ಕಂಚಿಕಟ್ಟೆಯ ಮೊಹಮ್ಮದ್ ರಿಫಾೈ ಅವರ ಮನೆ ಕುಸಿದು ಬಿದ್ದಿದೆ. ಶಿರಿಯ ಮತ್ತು ಪರಿಸರ ಪ್ರದೇಶಗಳ ತಗ್ಗು ಪ್ರದೇಶಗಳು ನೀರಿನಿಂದ ಆವೃತ್ತವಾಗಿದೆ. ಉಪ್ಪಳ, ಶಿರಿಯ ಹೊಳೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗತೊಡಗಿದೆ. ಶಿರಿಯ ವಾನಂದೆಯಲ್ಲಿ 30 ಎಕರೆ ಬಯಲು ಪ್ರದೇಶದಲ್ಲಿ ನೀರು ತುಂಬಿ ಕೊಂಡಿದೆ. ಮೂಸೋಡಿ ಒಳ ರಸ್ತೆಯಲ್ಲಿ ನೀರು ತುಂಬಿಕೊಂಡಿದೆ. ಕುಬಣೂರು ಶ್ರೀರಾಮ ಶಾಲೆಯ ಗೋಡೆ ಕುಸಿದು ರಸ್ತೆಗೆ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ. ನೀಲೇಶ್ವರ ಕಾರ್ಯಂಗೋಡು ನದಿ ಉಕ್ಕಿ ಹರಿಯತೊಡಗಿದೆ. ತೃಕ್ಕರಿಪುರ ಪಡನ್ನ, ವಲಿಯಪರಂಬ ಹೊಳೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗತೊಡಗಿದೆ. ಮಲೆನಾಡ ಪ್ರದೇಶಗಳಲ್ಲಿ ಹಲವೆಡೆ ಭೂಕುಸಿತು ಭೀತಿ ಆವರಿಸಿದೆ.
ಬಂದ್ಯೋಡು ಅಡ್ಕ ಎಂಬಲ್ಲಿಯ ಆಯಿಷಮ್ಮ ಎಂಬವರ ಮನೆಯ ಸಮೀಪದ ಅಂಗಳ ಭಾಗಶಃ ಶನಿವಾರ ಮಧ್ಯಾಹ್ನ ಕುಸಿದಿದೆ. ಉಪ್ಪಳ ಮಣಿಮುಮಡ ಕಡಲ ತೀರದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಜೊತೆಗೆ ಈ ಪರಿಸರದ ಒಳಚರಂಡಿ ವ್ಯವಸ್ಥೆ ಸಂಪೂರ್ಣ ಹಾನಿಗೊಂಡು ವ್ಯಾಪಕ ಪ್ರಮಾಣದ ನೀರು ಕಟ್ಟಿನಿಂತಿದೆ.
ಮನೆ ಮೇಲೆ ಗುಡ್ಡೆ ಕುಸಿತ : ಧಾರಾಕಾರ ಮಳೆಯಿಂದಾಗಿ ಕುಂಡಂಕುಳಿಯ ಕಂಗಿನ ತೋಟದಲ್ಲಿ ಬೃಹತ್ ಹೊಂಡ ಸೃಷ್ಟಿಯಾಗಿದೆ. ಕುಂಡಂಕುಳಿ ಪಾಂಡಿಕಂಡಂ ನಿವಾಸಿ ರಾಘವನ್ ನಾಯರ್ ಅವರ ತೋಟದಲ್ಲಿ ಹೊಂಡ ಸೃಷ್ಟಿಯಾಗಿದೆ. ಇದರಿಂದ ಹಲವು ಅಡಿಕೆ ಮರಗಳು ನಾಶವಾಗಿದೆ. ಬೋವಿಕ್ಕಾನ ಮುಂಡಕೈಯಲ್ಲಿ ಎಂ.ಜೆ.ಸುಕುಮಾರನ್ ಅವರ ಮನೆ ಮೇಲೆ ಗುಡ್ಡೆ ಕುಸಿದು ಬಿದ್ದು ಅಡುಗೆ ಕೋಣೆಯ ಗೋಡೆ ಬಿರುಕು ಬಿಟ್ಟಿದೆ.
ಮೀಂಜದಲ್ಲಿ ಗುಡ್ಡೆ ಕುಸಿತ : ಮೀಂಜ ಪಂಚಾಯತ್‍ನ 6 ನೇ ವಾರ್ಡ್ ದೇರಂಬಳ ಮಿತ್ತಾಳದಲ್ಲಿ ಗುಡ್ಡೆ ಕುಸಿದು ಕಮಲ ಅವರ ಮನೆ ಹಿಂಭಾಗಕ್ಕೆ ಬಿದ್ದಿದೆ. ಶುಕ್ರವಾರ ರಾತ್ರಿ ಘಟನೆ ಸಂಭವಿಸಿದ್ದು, ಮನೆಯಲ್ಲಿದ್ದ ಕಮಲ ಮತ್ತು ಪುತ್ರ, ಪುತ್ರಿ ಅಪಾಯದಿಂದ ಪಾರಾಗಿದ್ದಾರೆ.
ಮಾಯಿಪ್ಪಾಡಿಯಲ್ಲಿ ಹೊಳೆ ಉಕ್ಕಿಹರಿಯುತ್ತಿದ್ದು, ಬಹುತೇಕ ಪ್ರದೇಶ ನೀರಿನಿಂದ ಆವೃತಗೊಂಡಿದೆ.
ಜಿಲ್ಲೆಯಲ್ಲಿ ಬಿರ ಧಾರಾಕಾರ ಮಳೆ : ಉಕ್ಕಿ ಹರಿದ ಹೊಳೆ, ಹಲವು ಮನೆಗಳು ಜಲಾವೃತ, ಕುಟುಂಬಗಳ ಸ್ಥಳಾಂತರ, ಭಾರೀ ನಾಶನಷ್ಟ

ಜಿಲ್ಲೆಯಲ್ಲಿ ಬಿರುಸಿನ ಮಳೆ : ಮುಂದಿನ 24 ತಾಸುಗಳಲ್ಲಿ 204 ಮಿ.ಮೀ. ಗಿಂತಲೂ ಅ„ಕ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಘೋಷಿಸಲಾಗಿದೆ. ಸರಕಾರಿ ವ್ಯವಸ್ಥೆ ಮತ್ತು ಸಾರ್ವಜನಿಕರು ಜಾಗರೂಕತೆ ಪಾಲಿಸುವಂತೆ ಮತ್ತು ಪುನರ್ವಸತಿ ಕೇಂದ್ರಗಳನ್ನು ಸಜ್ಜುಗೊಳಿಸುವಂತೆ ತಿಳಿಸಲಾಗಿದೆ. ರೆಡ್ ಅಲೆರ್ಟ್ ಘೋಷಣೆಯೂ ಇದೇ ಉದ್ದೇಶವನ್ನು ಹೊಂದಿದೆ.
ಮುಂದಿನ ದಿನಗಳಲ್ಲೂ ಬಿರುಸಿನ ಮಳೆಯ ಸಾಧ್ಯತೆಗಳಿದ್ದು, ನೆರೆ ಸಹಿತ ಪ್ರಕೃತಿ ವಿಕೋಪಗಳು ತಲೆದೋರುವ ಭೀತಿಯಿದೆ. ಸಂಬಂಧಪಟ್ಟ ಇಲಾಖೆಗಳು, ಸಿಬ್ಬಂದಿ ಬೇಕಾದ ಸಿದ್ಧತೆ ನಡೆಸುವಂತೆ, ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿ ಆರಂಭಿಸುವಂತೆ ರಾಜ್ಯ ದುರಂತ ನಿವಾರಣೆ ಪ್ರಾ„ಕಾರ ಆದೇಶ ನೀಡಿದೆ.
ಜಿಲ್ಲೆಯಲ್ಲಿ 996.4625 ಮಿ.ಮೀ. ಮಳೆ : ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡ ನಂತರ ಈ ವರೆಗೆ 996.4625 ಮಿ.ಮೀ. ಮಳೆ ಲಭಿಸಿದೆ. ಕಳೆದ 24 ತಾಸುಗಳಲ್ಲಿ 46.4625 ಮಿ.ಮೀ. ಮಳೆ ಸುರಿದಿದೆ. ಈ ವರೆಗೆ ಒಂದು ಮನೆ ಪೂರ್ಣ ರೂಪದಲ್ಲಿ, 70 ಮನೆಗಳು ಭಾಗಶ: ಹಾನಿಗೀಡಾಗಿವೆ. 60 ಹೆಕ್ಟೇರ್ ಕೃಷಿ ಹಾನಿಗೀಡಾಗಿದೆ. ುಸಿನ ಮಳೆ : ಮುಂದಿನ 24 ತಾಸುಗಳಲ್ಲಿ 204 ಮಿ.ಮೀ. ಗಿಂತಲೂ ಅ„ಕ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಘೋಷಿಸಲಾಗಿದೆ. ಸರಕಾರಿ ವ್ಯವಸ್ಥೆ ಮತ್ತು ಸಾರ್ವಜನಿಕರು ಜಾಗರೂಕತೆ ಪಾಲಿಸುವಂತೆ ಮತ್ತು ಪುನರ್ವಸತಿ ಕೇಂದ್ರಗಳನ್ನು ಸಜ್ಜುಗೊಳಿಸುವಂತೆ ತಿಳಿಸಲಾಗಿದೆ. ರೆಡ್ ಅಲೆರ್ಟ್ ಘೋಷಣೆಯೂ ಇದೇ ಉದ್ದೇಶವನ್ನು ಹೊಂದಿದೆ.
ಮುಂದಿನ ದಿನಗಳಲ್ಲೂ ಬಿರುಸಿನ ಮಳೆಯ ಸಾಧ್ಯತೆಗಳಿದ್ದು, ನೆರೆ ಸಹಿತ ಪ್ರಕೃತಿ ವಿಕೋಪಗಳು ತಲೆದೋರುವ ಭೀತಿಯಿದೆ. ಸಂಬಂಧಪಟ್ಟ ಇಲಾಖೆಗಳು, ಸಿಬ್ಬಂದಿ ಬೇಕಾದ ಸಿದ್ಧತೆ ನಡೆಸುವಂತೆ, ತಾಲೂಕು ಮಟ್ಟದಲ್ಲಿ ನಿಯಂತ್ರಣ ಕೊಠಡಿ ಆರಂಭಿಸುವಂತೆ ರಾಜ್ಯ ದುರಂತ ನಿವಾರಣೆ ಪ್ರಾ„ಕಾರ ಆದೇಶ ನೀಡಿದೆ.
ಜಿಲ್ಲೆಯಲ್ಲಿ 996.4625 ಮಿ.ಮೀ. ಮಳೆ : ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡ ನಂತರ ಈ ವರೆಗೆ 996.4625 ಮಿ.ಮೀ. ಮಳೆ ಲಭಿಸಿದೆ. ಕಳೆದ 24 ತಾಸುಗಳಲ್ಲಿ 46.4625 ಮಿ.ಮೀ. ಮಳೆ ಸುರಿದಿದೆ. ಈ ವರೆಗೆ ಒಂದು ಮನೆ ಪೂರ್ಣ ರೂಪದಲ್ಲಿ, 70 ಮನೆಗಳು ಭಾಗಶ: ಹಾನಿಗೀಡಾಗಿವೆ. 60 ಹೆಕ್ಟೇರ್ ಕೃಷಿ ಹಾನಿಗೀಡಾಗಿದೆ.