ಕುಂಬಳೆ: ಮಾರಾಟಕ್ಕಾಗಿ ಹೋಟೆಲೊಂದರಲ್ಲಿ ಇರಿಸಿದ್ದ ಪೆಪ್ಸಿ ಕಂಪೆನಿಯ ತಂಪುಪಾನೀಯದ ಬಾಟಲಿ ಭೀಕರವಾಗಿ ಸ್ಪೋಟಿಸಿ ಜನರು ಭೀತಿಗೊಳಗಾದ ಘಟನೆ ಶುಕ್ರವಾರ ಸಂಜೆ ಕುಂಬಳೆಯಲ್ಲಿ ಆತಂಕಕ್ಕೆ ಕಾರಣವಾಯಿತು.
ಕುಂಬಳೆಯ ತಾಜ್ ರೆಸ್ಟೋರೆಂಟ್ ನಲ್ಲಿ ಮಾರಾಟಕ್ಕಾಗಿ ಇರಿಸಲಾದ ಪೆಪ್ಸೀ ತಂಪುಪಾನೀಯ ಪ್ಯಾಮಿಲಿ ಬಾಟಲಿ ಹಠಾತ್ತನೆ ಸ್ಪೋಟಿಸಿದ್ದು, ಶಬ್ದ ತೀವ್ರಗತಿಯಲ್ಲಿದ್ದುದರಿಂದಜನರು ಮೊದಲು ಭಯಬೀತರಾದರು.ಅಲ್ಪಹೊತ್ತು ಗಾಬರಿಗೊಂಡ ಜನ ಅತ್ತಿತ್ತ ಓಡಾಡುವುದು ಕಂಡುಬಂತು. ಹಳೆಯ ದಾಸ್ತಾನಿನ ಪೆಪ್ಸಿ ಸ್ಪೋಟಕ್ಕೊಳಗಾಗಿದೆಯೆಂದು ಪರಿಶೀಲನೆಯ ವೇಳೆ ಗುರುತಿಸಲಾಗಿದೆ.ಸ್ಪೋಟದ ರಭಸಕ್ಕೆ ಹೋಟೆಲ್ ಒಳಗಿನ ಹಲವು ಬಲ್ಬ್ ಗಳು ಹಾನಿಗೊಳಗಾಗಿವೆ.
ಬಾಟಲಿಯ ಸ್ಪೋಟದಿಂದ ಜೀವಹಾನಿ ಸಂಭವಿಸಿಲ್ಲ.ಆದರೆ ತಂಪುಪಾನೀಯ ಹೋಟೆಲಲ್ಲಿ ಆಹಾರ ಸೇವಿಸುತ್ತಿದ್ದವರ ಮೇಲೆ ಎರಚಲ್ಪಟ್ಟಿದೆ. ಬಾಟಲಿಯಲ್ಲಿ ಗಾಳಿಸೇರಿಕೊಂಡಿರುವುದು ಸ್ಪೋಟಕ್ಕೆಕಾರಣವಾಗಿರಬಹುದೆಮದು ಹೋಟೆಲ್ ಮಾಲಕ ಅಬ್ದುಲ್ಲ ತಾಜ್ ತಿಳಿಸಿರುವರು.


