ಕಾಸರಗೋಡು: ರಾಷ್ಟ್ರೀಯ ವಾಚನಾ ಮಾಸಾಚರಣೆಯ ಜಿಲ್ಲಾ ಮಟ್ಟದ ಸಮಾರಂಭಗಳು ಗುರುವಾರ ಸಮಾರೋಪಗೊಂಡಿವೆ.
ಪಿ.ಎನ್.ಪಣಿಕ್ಕರ್ ಫೌಂಡೇಷನ್, ಕೇಂದ್ರ ನೀತಿ ಆಯೋಗ ಜಂಟಿ ವತಿಯಿಂದ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮಗಳು ನಡೆದುವು. ಪೆರಿಯ ಕೇಂದ್ರೀಯ ವಿವಿ ಕ್ಯಾಂಪಸ್ ನಲ್ಲಿ ಸಮಾರೋಪ ಸಮಾರಂಭ ಜರುಗಿತು. ವಿವಿ ಉಪಕುಲಪತಿ ಡಾ.ಜಿ.ಗೋಪಕುಮಾರ್ ಉದ್ಘಾಟಿಸಿದರು. ಪಿ.ಎನ್.ಪಣೀಕ್ಕರ್ ಫೌಂಡೇಷನ್ ಉಪಾಧ್ಯಕ್ಷ ಕೆ.ವಿ.ರಾಘವನ್ ಅಧ್ಯಕ್ಷತೆ ವಹಿಸಿದ್ದರು. ಡೀನ್ ಡಾ.ಎನ್.ಅಜಿತ್ ಕುಮಾರ್,ಪಿ.ಕೆ.ಕುಮಾರನ್ ಮಾಸ್ಟರ್, ಕಾವುಂಗಾಲ್ ನಾರಾಯಣನ್ ಮಾಸ್ಟರ್, ಇ.ರಾಘವನ್, ಆಯಿಷಾ ಮಹಮ್ಮದ್, ಚಂದ್ರಿಕಾ ಮೋನಚ್ಚ,ಪಿ.ವಿ.ಬೇಬಿ ಚಂದ್ರಿಕಾ ಮೊದಲಾದವರು ಉಪಸ್ಥಿತರಿದ್ದರು. ಡಾ.ವಿ.ರಾಜೀವ್ ಸ್ವಾಗತಿಸಿದರು. ಸಿ.ಸುಕುಮಾರನ್ ವಂದಿಸಿದರು.


