HEALTH TIPS

ಪ್ರಕೃತಿ ದುರಂತಗಳಿಂದ ಕಂಗೆಟ್ಟ ಕೃಷಿಕರಿಗೆ ಸಾಂತ್ವನನೀಡುವ ಬೆಳೆ ವಿಮೆ

           
      ಕಾಸರಗೋಡು:  ಬರಗಾಲ, ನೆರೆ, ಗಾಳಿಮಳೆ ಸಹಿತ ಪ್ರಕೃತಿ ದುರಂತಗಳ ಪರಿಣಾಮ ಸಂಕಷ್ಟ ಅನುಭವಿಸುತ್ತಿರುವ ಕೃಷಿಕರಿಗೆ ಸಾಂತ್ವ ನೀಡುವ ಯೋಜನೆಬೆಳೆ ವಿಮೆ. 
            ಕಾಡುಮೃಗಗಳ ಹಾವಳಿ, ಗುಡ್ಡದ ಮಣ್ಣುಕುಸಿತ, ಕಡಲ್ಕೊರತೆ, ಸಿಡಿಲು, ಭೂಕಂಪ, ಕಾಡುಬೆಂಕಿ ಸಹಿತ ಪ್ರಕರಣಗಳಲ್ಲಿ ನಡೆಯಬಹುದಾದ ನಾಶನಷ್ಟಗಳೂ ಈ ವಿಮೆಯ ವ್ಯಾಪ್ತಿಯಲ್ಲಿ ಬರುತ್ತವೆ ಎಂಬುದು ಗಮನಾರ್ಹ. 
    ಕಾಯಿಬಿಡುವ ತೆಂಗಿನ ಮರವೊಂದಕ್ಕೆ ವರ್ಷಕ್ಕೆ ಎರಡು ರೂ., ಕಾಯಿಬಿಡುವ ಅಡಕೆ ಮರ ಒಂದಕ್ಕೆ 1.50 ರೂ., ಟ್ಯಾಪ್ ನಡೆಸುವ ರಬ್ಬರ್ಮರವೊಂದಕ್ಕೆ 3 ರೂ.ನಂತೆ ಪರೀಮಿಯ ಕಟ್ಟಬೇಕು. ನಷ್ಟಪರಿಹಾರ ಮೊಬಲಗು ತೆಮಗಿನ ಮರವೊಂದಕ್ಕೆ 2 ಸಾವಿರ ರೂ., ಅಡಕೆಗೆ 200 ರೂ. ರಬ್ಬರ್ ಗೆ ಒಂದು ಸಾವಿರ ರೂ. ಇದೆ. ವಿಮೆನಡೆಸುವಲ್ಲಿ ಕನಿಷ್ಠ 10 ತೆಂಗಿನ ಮರಗಳು/ಅಡಕೆ ಮರಗಳು, 25 ರಬ್ಬರ್ ಮರಗಳು ಇರಬೇಕು.                     
   ಬಾಳೆ ಸಸಿ ಇದ್ದಲ್ಲಿ ನೆಟ್ಟ ನಂತರ ಒಂದರಿಂದ 5 ತಿಂಗಳವರೆಗೆ ವಿಮೆ ನಡೆಸಬಹುದು. 3 ರೂ. ಪ್ರೀಮಿಯಂ ಇರುವುದು. ಗೊನೆಬಿಟ್ಟ ನಂತರ ನಷ್ಟ ಸಂಭವಿಸುವುದಿದ್ದಲ್ಲಿ ನೇಂದ್ರಕ್ಕೆ 300 ರೂ. ನಷ್ಟ ಪರಿಹಾರ ಲಭಿಸಲಿದೆ. ಗೊನೆ ಬಿಡದ ಬಾಲೆಗೂ ನಷ್ಟಪರಿಹಾರ ಸೌಲಭ್ಯಗಳಿವೆ.
     25 ಸೆಂಟ್ಸ್ ಜಾಗದಲ್ಲಿ ನಡೆಸಲಾದ ಭತ್ತದ ಕೃಷಿಗೆ ಕೇವಲ 25 ರೂ.ಪ್ರೀಮಿಯಂ ಇರುವುದು. ನೆಟ್ಟು 15 ದಿನಗಳ ನಂತರ 45 ದಿನದ ಒಳಗೆ  ವಿಮೆ ನಡೆಸಬಹುಉ. ಒಂದೂವರೆ ತಿಂಗಳಲ್ಲಿ ನಷ್ಟ ಸಂಭವಿಸಿದಲ್ಲಿ 25 ಸೆಂಟ್ಸ್ ಭತ್ತದ ಕೃಷಿಗೆ 1500 ರೂ. , 45 ದಿನಗಳ ನಂತರ ನಷ್ಟ ಸಂಭವಿಸಿದಲ್ಲಿ 3500 ರೂ. ನಷ್ಟ ಪರಿಹಾರ ಲಭಿಸಲಿದೆ.
     ಜಿಲ್ಲೆಯ ಎಲ್ಲ ಕೃಷಿಭವನಗಳಲ್ಲಿ ಬೆಳೆ ವಿಮೆ ದಿನಾಚರಣೆ ಜರುಗಿತು. ಜಿಲ್ಲೆಯ ಎಲ್ಲ ಕೃಷಿಕರನ್ನು ವಿಮೆ ಯೋಜನೆಯ ವ್ಯಾಪ್ತಿಗೆ ಕರೆತರುವಲ್ಲಿ ಈ ತಿಂಗಳಲ್ಲಿ ಎರಡು ವಾರಗಳ ಕಾಲ ವಿಮೆ ಪಕ್ಷಾಚರಣೆ ನಡೆಸಲಾಗುವುದು. ಈ ತೀವ್ರಯ ಜ್ಞ  ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಕೃಷಿಕರು ಭಾಗಿಗಳಾಗುವಂತೆ ಕೃಷಿ ಅಧಿಕಾರಿ ಮಧು ಜೋರ್ಜ್ ಮತ್ತಾಯಿ ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries