HEALTH TIPS

ಕಾರುಣ್ಯ ಕೊನೆ: ಇನ್ನು ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆ


      ಕಾಸರಗೋಡು: ಕೇಂದ್ರ, ರಾಜ್ಯ ಸರಕಾರಗಳಿಗೆ ಸಹಭಾಗಿತ್ವ ಇರುವ ನೂತನ ಆರೋಗ್ಯ ಸುರಕ್ಷಾ ಯೋಜನೆಯನ್ನು ಜಾರಿಗೊಳಿಸುವುದರ ಅಂಗವಾಗಿ ಕಾರುಣ್ಯ ಯೋಜನೆಯನ್ನು ರಾಜ್ಯದಲ್ಲಿ ಕೊನೆಗೊಳಿಸಲಾಗಿದೆ.
   ಕಾರುಣ್ಯ ಲಾಟರಿಯಿಂದ ಆದಾಯ ಉಪಯೋಗಿಸಿ ರೋಗಿಗಳಿಗೆ ಚಿಕಿತ್ಸಾ ಸಹಾಯ ನೀಡುವ ಕಾರುಣ್ಯ ಬೆನಾವಲೆಂಟ್ ಫಂಡ್‍ಗೆ ಇನ್ನು ಅರ್ಜಿ ಸಲ್ಲಿಸಲಾಗದು. ಬದಲಿಗೆ ಬರುವ ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆ ಸಂಬಂಧಿಸಿ ಅಸ್ಪಷ್ಟತೆಗಳು ಹೆಚ್ಚಿರುವುದರಿಂದ ರೋಗಿಗಳು ಆತಂಕಕ್ಕೊಳಗಾಗಿದ್ದಾರೆ.
      ಏಪ್ರಿಲ್‍ನಿಂದ ಕಾರುಣ್ಯ ಯೋಜನೆಗೆ ಅರ್ಜಿ ಸ್ವೀಕರಿಸುವುದನ್ನು ಕೊನೆಗೊಳಿಸಲು ಈ ಹಿಂದೆಯೇ ತೀರ್ಮಾನಿಸಲಾಗಿತ್ತು. ಪ್ರಕ್ರಿಯೆಗಳನ್ನು ಪೂರ್ತಿಗೊಳಿಸದ ಹಿನ್ನಲೆಯಲ್ಲಿ ಜೂ.30ರವರೆಗೆ ಮುಂದೂಡಲಾಗಿತ್ತು. ಮಂಗಳವಾರ ವರೆಗೆ ಲಭಿಸಿದ ಅರ್ಜಿಗಳು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಿ ಜು. 20ರ ಮೊದಲು ಆಡಳಿತಾಧಿಕಾರಿ ಕಚೇರಿಗೆ ಕಳುಹಿಸಬೇಕು ಎಂದು ಪ್ರಸ್ತುತ ಸರಕಾರದ ಆದೇಶಿಸಿದೆ. 
       ರಾಜ್ಯದ ಆರೋಗ್ಯ ಇನ್ಶೂರೆನ್ಸ್ ಯೋಜನೆಗಳನ್ನು ಒಂದೇ ಸೂರಿನಡಿಗೆ ತಂದು ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆಗೆ ರೂಪು ನೀಡಲಾಗಿದೆ. ರಿಲಯನ್ಸ್ ಇನ್ಶೂರೆನ್ಸ್‍ಗೆ ಸಂಬಂಧಿಸಿ ಒಂದು ಕುಟುಂಬಕ್ಕೆ ವರ್ಷದಲ್ಲಿ ಐದು ಲಕ್ಷ ರೂ.ನ ಚಿಕಿತ್ಸಾ ಲಭ್ಯಗೊಳಿಸುವುದಾಗಿದೆ ಈ ಯೋಜನೆ. ಪ್ರಸ್ತುತ 25 ಲಕ್ಷ ಕುಟುಂಬಗಳಿಗೆ ಮಾತ್ರ ಯೋಜನೆಯ ಇನ್ಶೂರೆನ್ಸ್ ಕಾರ್ಡ್ ನೀಡಲಾಗಿದೆ. 41 ಲಕ್ಷ ಕುಟುಂಬಗಳನ್ನು ಯೋಜನೆಯಲ್ಲಿ ಸೇರ್ಪಡಿಸಬೇಕಿದೆ. ಇದಕ್ಕೆ ಇನ್ನು ಒಂದು ತಿಂಗಳು ಬೇಕಾಗಲಿದೆ ಎಂದು ಸೂಚಿಸಲಾಗಿದೆ. ನೂತನ ಯೋಜನೆಯನ್ನು ಅನುಸರಿಸಿ ಒಳರೋಗಿ ಚಿಕಿತ್ಸೆಗೆ ಮಾತ್ರ ಸಹಾಯ ಲಭಿಸುವುದು ಎಂಬುದು ರೋಗಿಗಳಿಗೆ ತಿರುಗೇಟಾಗಿ ಪರಿಣಮಿಸಿದೆ. ಭಾರೀ ಮೊತ್ತ ಖರ್ಚಾಗುವ ತಪಾಸಣೆಗಳಿಗೆ ಹಾಗೂ ಔಷಧಿಗೆ ಇರುವ ಮೊತ್ತವನ್ನು ರೊಗಿಗಳು ಸಮಯ ಗುರುತಿಸಬೇಕು.
      ಇದರ ಹೊರತು ತಿರುವನಂತಪುರ ಶ್ರೀಚಿತ್ರ, ಆರ್‍ಸಿಸಿ, ಮಲಬಾರ್ ಕ್ಯಾನ್ಸರ್ ಸೆಂಟರ್, ಕೊಚ್ಚಿನ್ ಕ್ಯಾನ್ಸರ್ ಸೆಂಟರ್ ಮೊದಲಾದ ಆಸ್ಪತ್ರೆಗಳ ಚಿಕಿತ್ಸಾ ದರಕ್ಕಿಂತ ಕನಿಷ್ಠ ದರದಲ್ಲಿ ಇನ್ಶೂರೆನ್ಸ್ ಮೊತ್ತ ನಿಗದಿಪಡಿಸಿರುವುದರಿಂದ ಇಲ್ಲೆಲ್ಲ ರೋಗಿಗಳ ಕೈಯಿಂದ ಬಾಕಿ ಮೊತ್ತ ವಸೂಲು ಮಾಡಲಾಗುವುದು. ಸಾವಿರಾರು ರೋಗಿಗಳು ಇದರಿಂದ ಸಂದಿಗ್ಧತೆಗೆ ಒಳಗಾಗುವರು. ಈ ಹಿಂದೆ ಆರ್‍ಎಸ್‍ಬಿವೈ ಚಿಸ್ ಪ್ಲಸ್ ಯೋಜನೆಗಳಲ್ಲಿ ಸದಸ್ಯರಾಗದವರಿಗೂ ಕಾರುಣ್ಯ ಬೆನಾವಲೆಂಟ್ ಅನುದಾನ ಮೂಲಕ ಉಚಿತ ಚಿಕಿತ್ಸೆ ಲಭಿಸಿತ್ತು. ವೈದ್ಯರು ದೃಢೀಕರಣ ಪತ್ರ ನೀಡಿದರೆ ಮಾತ್ರವೇ ಸಾಕಾಗುತ್ತಿತ್ತು. ಇನ್ನು ಅದಕ್ಕೂ ಅಡ್ಡಿಯಾಗಲಿದೆ. ಪ್ರಸ್ತುತ ವ್ಯವಸ್ಥೆಯನ್ನು ಅನುಸರಿಸಿ ಆರ್‍ಎಸ್‍ಬಿವೈ ಚಿಸ್ ಪ್ಲಸ್ ಯೋಜನೆಗಳಲ್ಲಿ ಒಳಗೊಂಡವರಿಗೆ ಮಾತ್ರ ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆಯಲ್ಲಿ ಸೇರ್ಪಡೆಗೊಳ್ಳಬಹುದಾಗಿದೆ.
      ಯೋಜನೆಗಳಲ್ಲಿ ಯಾವುದರಲ್ಲೂ ಒಳಗೊಳ್ಳದ ಗಂಭೀರ ರೋಗ ಬಾಧಿಸಿದ ಸಾಮಾನ್ಯರಿಗೆ ಹೇಗೆ ಚಿಕಿತ್ಸಾ ಸಹಾಯ ಲಭ್ಯಗೊಳಿಸುವುದು ಎಂಬುದು ಆತಂಕಕ್ಕೀಡು ಮಾಡುತ್ತಿದೆ.
     ಇದೇ ಸಂದರ್ಭ ರೋಗಿಗಳಿಗೆ ಅಗತ್ಯ ಚಿಕಿತ್ಸಾ ಸಹಾಯ ಲಭ್ಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹಣಕಾಸು ಇಲಾಖೆ, ಉಚಿತ ಚಿಕಿತ್ಸಾ ಯೋಜನೆಯಿಂದ ಹಲವಾರು ಹೊರತಾಗುವ ಸ್ಥಿತಿಯನ್ನು ಪರಿಹರಿಸಲಿರುವ ಕ್ರಮಗಳ ಕುರಿತು ಆಲೋಚಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries