ಕಾಸರಗೋಡು: ಜಿಲ್ಲೆಯ ಎಲ್ಲ ಸಂಸ್ಥೆಗಳಲ್ಲಿ, ಶಿಕ್ಷಣಾಲಯಗಳಲ್ಲಿ ಬಳಕೆಯಿಲ್ಲದ ಪೆನ್ ಗಳನ್ನು ಸಂಗ್ರಹಿಸಿ ಪುನರ್ ನಿರ್ಮಾಣ ನಡೆಸುವ ಯೋಜನೆ "ಪೆನ್ ಫ್ರೆಂಡ್" ಯೋಜನೆಗೆ ಕಾ ಞÂ್ಞಂ ಗಾಡಿನ ಮಿನಿ ಸಿವಿಲ್ ಸ್ಟೇಷನ್ ನಲ್ಲಿ ಚಾಲನೆ ಲಭಿಸಿದೆ.
ಸಮಾಜವನ್ನು ತ್ಯಾಜ್ಯ ಮುಕ್ತಗೊಳಸುವ, ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವ ಇತ್ಯಾದಿ ಉದ್ದೇಶಗಳೊಂದಿಗೆ ಹರಿತ ಕೇರಳಂ ಮಿಷನ್ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಕಾ ಞÂ್ಞಂ ಗಾಡ್ ಮಿನಿ ಸಿವಿಲ್ ಸ್ಟೇಷನ್ ನಲ್ಲಿ ಆರಂಭಗೊಂಡ ಯೋಜನೆಯನ್ನು ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಉದ್ಘಾಟಿಸಿದರು. ಹೊಸದುರ್ಗ ತಹಸೀಲ್ದಾರ್ ಶಶಿಧರನ್ ಪಿಳೈ ಅಧ್ಯಕ್ಷತೆ ವಹಿಸಿದ್ದರು. ಹರಿತ ಕೇರಳಂ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್, ಕೆ.ಎಸ್.ಎಂ.ಎ.ರಾಜ್ಯ ಉಪಾಧ್ಯಕ್ಷ ಕೆ.ಹನೀಫ, ಅಶ್ವಿನಿ ಕೆ. ಮೊದಲಾದವರು ಉಪಸ್ಥಿತರಿದ್ದರು.


