HEALTH TIPS

ವಾಚನ ಸಪ್ತಾಹ ಸಮಾರೋಪ

       
      ಕಾಸರಗೋಡು: ವಾಚನ ಸಪ್ತಾಹದ ಸಮಾರೋಪ ದಿನಾಚರಣೆ ರಾವಣೇಶ್ವರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿತು.
        ಸಮಾರಂಭದ ಅಂಗವಾಗಿ ಮಕ್ಕಳ ಉದ್ಯಾನ(ಚಿಲ್ಡ್ರನ್ ಪಾರ್ಕ್) ಲೋಕಾರ್ಪಣೆಯೂ, ವಾಚನಾ ಬೋಧಿ ವೃಕ್ಷ ನಿರ್ಮಾಣ ನಡೆಯಿತು. ರಾಜ್ಯ ಸರಕಾರದ ಸಂಪೂರ್ಣ ಶಿಕ್ಷಣ ಸಂರಕ್ಷಣೆ ಯಜ್ಞ ಯೋಜನೆ ಅಂಗವಾಗಿ ಶಿಕ್ಷಕ-ರಕ್ಷಕ ಸಂಘ, ಸಾರ್ವಜನಿಕರ ಸಹಕಾರದೊಂದಿಗೆ 2 ಲಕ್ಷ ರೂ.ವೆಚ್ಚದಲ್ಲಿ ಮಕ್ಕಳ ಉದ್ಯಾನ ಮತ್ತು ವಾಚನ ಬೋಧಿ ವೃಕ್ಷ ನಿರ್ಮಿಸಲಾಗಿದೆ.
     ನಿವೃತ್ತ ಮುಖ್ಯ ಶಿಕ್ಷಕ ಟಿ.ಕೆ.ಸುರೇಶ್ ಉದ್ಘಾಟಿಸಿದರು. ಗ್ರಾ.ಪಂ. ಸದಸ್ಯೆ ಶಾಂತಾ ಕುಮಾರಿ, ಮುಖ್ಯ ಶಿಕ್ಷಕಿ ಶಾರ್ಲಿ ಜೋರ್ಜ್, ಪ್ರಾಂಶುಪಾಲೆ ದೀಪಾ ಎಂ.ಕೆ., ರಕ್ಷಕ-ಶಿಕ್ಷಕ ಸಂಘ ಅಧ್ಯಕ್ಷ ಎಂ.ಕೆ.ರವೀಂದ್ರನ್, ಉಪಾಧ್ಯಕ್ಷ ಕೆ.ಶಶಿ, ಮಾಜಿ ಅಧ್ಯಕ್ಷ ಕೆ.ಬಾಲಕೃಷ್ಣನ್, ನೌಕರ ಸಂಘದ ಕಾರ್ಯದರ್ಶಿ ಕೆ.ಶೈಲಜಾ, ವಿದ್ಯಾರಂಗಂ ಸಂಚಾಲಕಿ ದೀಪಾ ಎಂ. ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries