HEALTH TIPS

ಹಬ್ಬ, ಆಚರಣೆಗಳ ಋತುವನ್ನು ನೀರಿನ ಸಂರಕ್ಷಣೆ ಮಹತ್ವ ಸಾರಲು ಏಕೆ ಬಳಸಿಕೊಳ್ಳಬಾರದು: ಪಿಎಂ ನರೇಂದ್ರ ಮೋದಿ

   
        ನವದೆಹಲಿ: ಮುಂದಿನ ದಿನಗಳು ಹಬ್ಬಗಳ ಸಮಯ. ಭಾರತದ ಹಲವು ಹಬ್ಬ ಹರಿದಿನಗಳನ್ನು, ರಾಷ್ಟ್ರೀಯ ಆಚರಣೆಗಳನ್ನು ಈ ಋತುವಿನಲ್ಲಿ ಶ್ರಾವಣ ಮಾಸದಲ್ಲಿ ಆಚರಣೆ ಮಾಡಲಾಗುತ್ತದೆ. ಈ ಹಬ್ಬಗಳ ಋತುವನ್ನು ನೀರಿನ ಸಂರಕ್ಷಣೆಯ ಸಂದೇಶವನ್ನು ಸಾರಲು ಏಕೆ ಬಳಸಿಕೊಳ್ಳಬಾರದು ಎಂದು ಮಹತ್ವವಾದ ವಿಚಾರವನ್ನು ಪ್ರಧಾನ ಮಂತ್ರಿ ದೇಶದ ಜನತೆ ಮುಂದಿಟ್ಟಿದ್ದಾರೆ.
       ತಮ್ಮ ಜನಪ್ರಿಯ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ನಿನ್ನೆ ಮಾತನಾಡಿದ ಪ್ರಧಾನಿ, ಜಲ ನೀತಿಯನ್ನು ರೂಪಿಸಿದ ಮೊದಲ ರಾಜ್ಯ ಮೇಘಾಲಯ. ಇದಕ್ಕಾಗಿ ನಾನು ಮೇಘಾಲಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನೀರಿನ ಸಮಸ್ಯೆಯಿರುವ ಹರ್ಯಾಣದಂತಹ ರಾಜ್ಯಗಳಲ್ಲಿ ಅಲ್ಪ ನೀರಿನ ಅವಶ್ಯಕತೆಯಿರುವ ಬೆಳೆ ಬೆಳೆಯಲು ಜನರನ್ನು ಉತ್ತೇಜಿಸಲಾಗುತ್ತದೆ. ಈ ಮೂಲಕ ರೈತರು ನೀರಿನ ಕೊರತೆಯಿಂದ ಬೆಳೆ ನಷ್ಟ ಹೊಂದುವುದನ್ನು ತಪ್ಪಿಸಬಹುದು ಎಂದರು.
     ಅಂತರಿಕ್ಷ ಯಾನದಲ್ಲಿ ಆಕಾಶಕ್ಕಿಂತ ಮಿಗಿಲಾಗಿ ಭಾರತ ಸಾಧನೆ ಮಾಡುತ್ತಿದ್ದು ಈ ವಿಚಾರದಲ್ಲಿ ಭಾರತೀಯರೆಲ್ಲರೂ ಹೆಮ್ಮೆ ಪಡುತ್ತಾರೆ ಎಂಬ ಬಲವಾದ ನಂಬಿಕೆ ನನಗಿದೆ ಎಂದರು.
     ಮೊದಲ ಬಾರಿಗೆ ಹಿನ್ನಡೆ ಕಂಡುಬಂದರೂ ಕೂಡ ನಂತರ ಚಂದ್ರಯಾನ-2ನ್ನು ಯಶಸ್ವಿಯಾಗಿ ಉಡಾಯಿಸಿದ್ದು ಇಸ್ರೊ ವಿ ಜ್ಞಾ ನಿಗಳ ಅಭೂತಪೂರ್ವ ಸಾಧನೆಯಾಗಿದೆ ಎಂದು ಪ್ರಧಾನಿ ಮೋದಿ ಮನ್ ಕಿ ಬಾತ್ ನಲ್ಲಿ ಕೊಂಡಾಡಿದರು.
   ಚಂದ್ರಯಾನ-2 ಸಂಪೂರ್ಣ ಸ್ವದೇಶಿ ನಿರ್ಮಿತ ಬಾಹ್ಯಾಕಾಶ ಯೋಜನೆ. ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರ ಜ್ಞಾ ನ್ ಸೆಪ್ಟೆಂಬರ್ ನಲ್ಲಿ ಚಂದ್ರನ ಮೇಲ್ಮೈ ಮೇಲೆ ಸುಗಮವಾಗಿ ಇಳಿಯುವುದನ್ನು ನೋಡಲು ನಾವೆಲ್ಲರೂ ಕಾತರರಾಗಿದ್ದೇವೆ ಎಂದರು.
     ದೇಶದ ವಿವಿಧ ಭಾಗಗಳಲ್ಲಿ ಸಾಕಷ್ಟು ಮಳೆಯಾಗಿದ್ದು, ಇನ್ನು ಹಲವೆಡೆ ಪ್ರವಾಹ ಉಂಟಾಗಿದೆ. ಪ್ರವಾಹ ಪೀಡಿತರ ರಕ್ಷಣೆ ಮತ್ತು ಪರಿಹಾರವನ್ನು ತ್ವರಿತವಾಗಿ ಒದಗಿಸಲು ರಾಜ್ಯ ಸರ್ಕಾರಗಳೊಂದಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
               ಶಾಲಾ ಮಕ್ಕಳಿಗಾಗಿ ಬಾಹ್ಯಾಕಾಶ ವಿ ಜ್ಞಾ ನ ಕುರಿತ ಕ್ವಿಜ್:
    ಬಾಹ್ಯಾಕಾಶ ವಿ ಜ್ಞಾ ನ ಕುರಿತು ಶಾಲಾ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.  mygov.in  ವೆಬ್ ಸೈಟ್ ಮೂಲಕ ಈ ಕ್ವಿಜ್ ಅನ್ನು ನಡೆಸಲಾಗುತ್ತದೆ. ಈ ಕ್ವಿಜ್ ನಲ್ಲಿ ಗರಿಷ್ಠ ಅಂಕಗಳಿಸುವ ಶಾಲಾ ಮಕ್ಕಳಿಗೆ ಸೆಪ್ಟೆಂಬರ್ ನಲ್ಲಿ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಮತ್ತು ಪ್ರ ಜ್ಞಾ ನ್  ರೋವರ್  ಇಳಿಯುವ ಸಂದರ್ಭದಲ್ಲಿ ಶ್ರೀಹರಿಕೋಟಕ್ಕೆ ಕರೆದೊಯ್ದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿಸಲಾಗುವುದು ಎಂದು ಹೇಳಿದರು.
       ಕ್ಯಾನ್ಸರ್  ಗೆದ್ದು, ಕ್ರೀಡಾ ಕೂಟದಲ್ಲಿ ಪದಕಕ್ಕೆ ಕೊರಳೊಡ್ಡಿದ ಪುಟಾಣಿಗಳಿಗೆ ಅಭಿನಂದನೆ:
    ಎಳೆಯ ವಯಸ್ಸಿನಲ್ಲೇ ಕ್ಯಾನ್ಸರ್ ಗೆ ತುತ್ತಾಗಿ, ಅದರ ವಿರುದ್ಧ ಹೋರಾಡಿ ಗೆದ್ದ ಭಾರತದ 10 ಮಕ್ಕಳನ್ನು ಪ್ರಧಾನಿ ನರೇಂದ್ರ ಮೋದಿ ಮನಃಪೂರ್ವಕವಾಗಿ ಅಭಿನಂದಿಸಿದರು. ರಷ್ಯಾದ ಮಾಸ್ಕೋದಲ್ಲಿ ಇಂತಹ ಮಕ್ಕಳಿಗಾಗಿ ನಡೆದ ಜಾಗತಿಕ ಕ್ರೀಡಾಕೂಟದಲ್ಲಿ ಪದಕಗಳನ್ನು ಗೆದ್ದು ರಾಷ್ಟ್ರದ ಕೀರ್ತಿಪತಾಕೆಯನ್ನು ಎತ್ತಿಹಿಡಿದಿರುವುದಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries