ಕಾಸರಗೋಡು: ದಿನನಿತ್ಯದ ಕಚೇರಿ ವ್ಯವಹಾರಗಳ ನಡುವೆ ಕಡತಗಳನ್ನು , ದಾಖಲೆಗಳನ್ನು ಸಂರಕ್ಷಿಸಿಡುವ ಹೊಣೆಗಾರಿಕೆ ಆಯಾ ಸರಕಾರಿ ಕಚೇರಿಗಳ ಸಿಬ್ಬಂದಿಯದು ಎಂದು ರಾಜ್ಯ ಮಹಿತಿ ಹಕ್ಕು ಆಯೋಗದ ಕಮೀಷನರ್ ಸೋಮನಾಥನ್ ಪಿಳೈ ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಆಯೋಗದ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.
ಕಡತಗಳನ್ನು ಸುರಕ್ಷಿತವಾಗಿ ಇರುಸವ ಹೊಣೆಗಾರಿಕೆಯೂ ಕಚೇರಿ ಯಾ ಇಲಖೆಯ ಮುಖ್ಯಸ್ಥರ ಜವಾಬ್ದಾರಿ. ಕಚೇರಿ ದಾಲೆಪತ್ರಗಳು ಕಳೆದುಹೋಗಿರುವ ಕಾರಣ ಅರ್ಜಿದಾರರಿಗೆ ಸಂಬವಿಸಬಹುದಾದ ನಷ್ಟ, ಸಂಕಷ್ಟಗಳಿಗೆ ಮಾಹಿತಿಹಕ್ಕುಕಾನೂನು ಕಾಯಿದೆ 19(8) ಬಿ.ಪಟ್ಟ ಪ್ರಕಾರ ಸಂಬಂಧ ಅಧಿಕಾರಿಗಳು ನಷ್ಟಪರಿಹಾರ ನೀಡಲು ಹೊನೆಗಾರರಾಗಿದ್ದಾರೆ. ರ್ಯಾಕ್,ಕಪಾಟು ಸಹಿತ ಸೌಲಭ್ಯ ಒದಗಿಸಿ ಕಡತಗಳನ್ನು ಸಂರಕ್ಷಿಸಬೆಕು. ಜೊತೆಗೆ ಕಚೇರಿಯ ಕಟ್ಟಡದಲ್ಲಿಸೋರಿಕೆ ಇತ್ಯಾದಿ ಸಂಭವಿಸಿ ಕಡತಗಳು ಹಾಳಾಗದಂತೆ ಮುಂಜಾಗರೂಕತೆ ನಡೆಸಬೇಕು ಎಂದವರು ತಿಳಿಸಿದರು.
ಕಾಸರಗೋಡು ನಗರಸಭೆ ಕಚೇರಿಯ ಕಟ್ಟಡ ನಿರ್ಮಾಣ ಸಂಬಂಧ ಕೆಲವು ಕಡತಗಳು ಕಾಣೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟು ಸಲ್ಲಿಕೆಯಾಗಿರುವ ದೂರಿನ ಪರಿಶೀಲನೆ ನಡೆಸಿ ಅರು ಮಾತನಾಡುತ್ತಿದ್ದಾರೆ. 30 ದಿನಗಳಲ್ಲಿ ದೂರುದಾತರಿಗೆ ಸಂಬಂಧಪಟ್ಟ ದಾಖಲೆ ಪತ್ರ ಹಸ್ತಾಂತರಿಸುವಂತೆ ಕಮೀಷನರ್ ಆದೇಶಿಸಿದರು.
ಬಿರುಸಿನ ಗಾಳಿಗೆ ಕಚೇರಿಯಿಂದ ಕೆಲವು ದಾಖಲೆಗಳು ನಾಪತ್ತೆಯಾಗಿದ್ದುವು ಎಂದು ನಗರಸಭೆ ಅಧಿಕಾರಿಗಳು ಸಭೆಯಲ್ಲಿ ವಾದಿಸಿದ್ದರತು. ದಾಖಲೆತ್ರಗಳು ದೂರುದಾತರಿಗೆ ಲಭಿಸದೇ ಇದ್ದಲ್ಲಿ, ಆ ಮೂಲಕ ಸಂಭವಿಸುವ ನಷ್ಟಗಳಿಗೆ ನಗರಸಭೆ ದಂಡ ತೆರಬೇಕಾದೀತು ಎಂದು ಕಮೀಷನರ್ ಮುನ್ನೆಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಉದ್ದಿಮೆಘಟಕಗಳನ್ನು ನಡೆಸುತ್ತಿರುವ ಆನಿವಾಸಿ ಭಾರತೀಯರು ಮಾಹಿತಿ ಹಕ್ಕು ಕಾನೂನಿನ ಸೌಲಭ್ಯಗಳನ್ನು ಪ್ರಯೋಜನಪಡಿಸಕೊಳ್ಳಬೇಕು. ಸಾರ್ವಜನಿಕ ವಲಯದಲ್ಲೂ ಈ ಬಗ್ಗೆ ಜಾಗೃತಿ ಪೂರ್ಣವಾಗಿಲ್ಲ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಗಳನ್ನು ನಡೆಸಲು ಆಯೋಗ ಉದ್ದೇಶಿಸಿದೆ ಎಂದವರು ತಿಳಿಸಿದರು.
ಕೆಲವು ತಾಂತ್ರಿಕ ಕಾರಣಗಳ ಕಾರಣದಿಂದ ಕೆಲವೊಮ್ಮೆ ಉದ್ದಿಮೆ ಘಟಕಗಳಿಗೆ ಸಂಬಂಧಿಸಿದ ಕಡತಗಳು ತಡೆಹಿಡಿಯಲಾಗುತ್ತಿರುವುದು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಇಂಥಾ ವೇಳೆ ನಿಜಸ್ಥಿತಿ ತಿಳಿದುಕೊಳ್ಳುವ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾನೂನು ಪೂರಕವಾಗಿದೆ. ಮಾಹಿತಿಹಕ್ಕು ಕಾಯಿದೆಯ 18,19,20 ಸೆಕ್ಷನ್ ಪ್ರಕಾರ ಸರಕಾರಿ ಕಚೇಋಇಯೊಂದರಿಂದ ದಾಖಲೆಪತ್ರ ಪಡೆಯಲು, ನಂತರದ ಕ್ರಮಗಳ ಬಗ್ಗೆ ಕ್ರಮಕೈಗೊಳ್ಳಲು ಸಂವಿಧಾನ ಪ್ರಕಾರದ ಅಧಿಕಾರ ಮಹಿತಿ ಹಕ್ಕು ಆಯೋಗಕ್ಕಿದೆ. ಹುಸೂರ್ ಶಿರಸ್ತೇದಾರ್ ಕೆ.ನಾರಾಯಣನ್ ಉಪಸ್ಥಿತರಿದ್ದರು.


