ಮಂಜೇಶ್ವರ: ಒಡಿಯೂರು ಶ್ರೀಗಳ ಜನ್ಮ ದಿನೋತ್ಸವದ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ ಮತ್ತು ಭತ್ತದ ಕೃಷಿ ಉದ್ದೇಶದಿಂದ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಘಟಕ, ಗ್ರಾಮ ಸಮಿತಿ, ಸಾರ್ವಜನಿಕರ ಸಹಭಾಗಿತ್ವದಲ್ಲಿ ವರ್ಕಾಡಿ ಗ್ರಾಮೋತ್ಸವ ಇತ್ತೀಚೆಗೆ ವರ್ಕಾಡಿ ಕಾವೀಃ ಶ್ರೀಸುಬ್ರಹ್ಮಣ್ಯ ದೇವಸ್ಥಾನ ಸಮೀಪದ ಕಾಪ್ರಿಗದ್ದೆಯಲ್ಲಿ ನಡೆಯಿತು.
ಸಮಾರಂಭವನ್ನು ಒಡಿಯೂರು ಶ್ರೀಗುರುದೇವಾನಂದ ಶ್ರೀಗಳು ಗದ್ದೆಗೆ ಹಾಲು ಸುರಿದು ಉದ್ಘಾಟಿಸಿದರು. ಸಾದ್ವಿ ಶ್ರೀಅಮೃತಾನಂದಮಯೀ ಆಶೀರ್ವಚನ ನೀಡಿದರು. ಸಾಮಾಜಿಕ, ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನ್ಯಾಯವಾದಿ ಪ್ರಭಾಕರ ನಾಯ್ಕ, ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ರವೀಂದ್ರ ಶೆಟ್ಟಿ ಉಳಿದೊಟ್ಟು, ಹೇಮಲತಾ ನಾಯ್ಕ, ಶ್ರೀಧರ ಶೆಟ್ಟಿ ಮುಟ್ಟ, ವರ್ಕಾಡಿ ಗ್ರಾ.ಪಂ. ಕಾರ್ಯದರ್ಶಿ ರಾಜೇಶ್ವರಿ, ಸೇವಾ ಪ್ರತಿನಿಧಿ ಫ್ರಾನ್ಸಿಸ್ ಮೊಂತೇರೋ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಸಾರ್ವಜನಿಕರಿಗೆ, ಮಕ್ಕಳಿಗೆ ತ್ರೋಬಾಲ್, ವಾಲಿಬಾಲ್, ಓಟ, ಕಬಡ್ಡಿ, ಹಗ್ಗಜಗ್ಗಾಟ ಸಹಿತ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.


