ಮುಳ್ಳೇರಿಯ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕುಂಟಾರು ಇದರ ಆಶ್ರಯದಲ್ಲಿ 38ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಲ್ಲಿ ಸೆ.1ರಿಂದ 3ರ ತನಕ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಸೆ.1ರಂದು ಸಂಜೆ 5ಕ್ಕೆ ಉತ್ಸವ ಮೂರ್ತಿಯನ್ನು ಎಲಿಕ್ಕಳ ಶ್ರೀ ಅಶ್ವಾರೂಢ ದೇವರ ಮನೆಯಿಂದ ತರುವುದು, 6ರಿಂದ ಭಜನೆ, ರಾತ್ರಿ 9ಕ್ಕೆ ಕುಂಟಾರು ಶ್ರೀ ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾ ಸಂಘದವರಿಂದ ಯಕ್ಷಗಾನ ಕೂಟ ನಡೆಯಲಿದೆ.
ಸೆ.2ರಂದು ಬೆಳಿಗ್ಗೆ 6ಕ್ಕೆ ಕುಂಟಾರು ಶ್ರೀಧರ ತಂತ್ರಿಯವರಿಂದ ಗಣಪತಿ ಹವನ, ಪ್ರತಿಷ್ಠೆ, ಬ್ರಹ್ಮಶ್ರೀ ವಾಸುದೇವ ತಂತ್ರಿಯವರಿಂದ ಧ್ವಜಾರೋಹಣ, 8ರಿಂದ ಭಜನೆ, ವಿವಿಧ ಸ್ಪರ್ಧೆಗಳು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನದಾನ, 1ಕ್ಕೆ ಕಲಾರತ್ನ ಶಂ.ನಾ.ಅಡಿಗ ಇವರ ಶಿಷ್ಯಂದಿರಾದ ಕು.ಚೈತ್ರ.ಕೆ.ಟಿ ಮತ್ತು ಕು.ನಿಶ್ರಿತಾ ಭಟ್ ಇವರಿಂದ ಹರಿಕಥಾ ಸತ್ಸಂಗ, 3ರಿಂದ ಭಜನೆ, ಸಂಜೆ 6ಕ್ಕೆ ಧಾರ್ಮಿಕ ಸಭೆ, ಬ್ರಹ್ಮಶ್ರೀ ವಾಸುದೇವ ತಂತ್ರಿ ಆಶೀರ್ವಚನ ನೀಡುವರು, ಮುಖ್ಯ ಅತಿಥಿಗಳಾಗಿ ಪ್ರೇಮಾ ಬಾರಿತ್ತಾಯ ಅಡೂರು ಭಾಗವಹಿಸುವರು. ಶಿಕ್ಷಕಿ ಇಂದಿರಾ ಕುಟ್ಟಿ ಕುಂಡಂಗುಳಿ ಧಾರ್ಮಿಕ ಭಾಷಣ ಮಾಡುವರು. ಈ ಸಂದರ್ಭದಲ್ಲಿ ನಾಟಿ ವೈದ್ಯ ಕೆ.ವಿ.ಚಂದು ಅವರಿಗೆ ಸನ್ಮಾನ, ಗಣೇಶೋತ್ಸವ ಸಮಿತಿಯಲ್ಲಿ ದುಡಿದ ಹಿರಿಯರಿಗೆ ಗೌರವಾರ್ಪಣೆ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಅಭಿನಂದನೆ, ರಾತ್ರಿ 8.30ಕ್ಕೆ ಮಹಾಪೂಜೆ, ಅನ್ನದಾನ, 9ರಿಂದ ನಾಟ್ಯಗುರು ಜಯರಾಮ ಪಾಟಾಳಿ ಪಡುಮಲೆ ಇವರ ನಿರ್ದೇಶನದಲ್ಲಿ ಮಕ್ಕಳ ಯಕ್ಷಗಾನ ನಡೆಯಲಿದೆ.
ಸೆ.3ರಂದು ಬೆಳಿಗ್ಗೆ 8ಕ್ಕೆ ಮಹಾಪೂಜೆ, 8.30ರಿಂದ ಭಜನಾಮೃತ, 11ಕ್ಕೆ ಮಹಾಪೂಜೆ, ಅನ್ನದಾನ, ಜಲಸ್ತಂಭನಾ ಮೆರವಣಿಗೆ ಆರಂಭಗೊಳ್ಳಲಿದೆ.

