ಕಾಸರಗೋಡು: ಮತ್ತೆ ಬಿರುಸುಗೊಳ್ಳುತ್ತಿರುವ ಮಳೆಯ ಕಾರಣ ಇಂದು(ಬುಧವಾರ) ಕಾಸರಗೋಡು ಜಿಲ್ಲೆ ಸಹಿತ ಕಣ್ಣೂರು, ವಯನಾಡು, ಕೋಝಿಕ್ಕೋಡು, ಮಲಪ್ಪುರಂ, ತೃಶೂರ್, ಎರ್ನಾಕುಳಂ, ಆಲಪ್ಪುಳ, ಕೋಟ್ಟಯಂ, ಇಡುಕ್ಕಿ, ಪತ್ತನಂತಿಟ್ಟು ಜಿಲ್ಲೆಗಳ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಶಿಸಿಲಾಗಿದೆ. ಪ್ರೊಪೆಶನಲ್ ಕಾಲೇಜುಗಳು, ಕೇಂದ್ರೀಯ ವಿದ್ಯಾಲಯ, ಅಂಗನವಾಡಿಗಳಿಗೂ ರಜೆ ಅನ್ವಯವಾಗಲಿದೆ.
ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಲೋಕಸೇವಾ ಆಯೋಗದ ಪರೀಕ್ಷೆಗಳನ್ನು, ತಿರುವನಂತಪುರದಲ್ಲಿ ನಡೆಯುತ್ತಿರುವ ಬಿ.ಫಾರ್ಮ್ ನೋಂದಾವಣಾ ಪೂರ್ವ ಪರೀಕ್ಷೆಗಳನ್ನೂ ಮುಂದೂಡಲಾಗಿದೆ ಎಮದು ಅಧಿಕೃತರು ತಿಳಿಸಿರುವರು.


