ಕಾಸರಗೋಡು: ಬಿರುಸಿನ ಮಳೆಗೆ ತತ್ತರಿಸಿದ ಜನತೆಗೆ ಸಾಂತ್ವನ ನಿಡುವಲ್ಲಿ ವಯೋವೃದ್ಧ ಶ್ರೀಪತಿ ರಾವ್ ಮಾದರಿಯಾಗಿದ್ದಾರೆ.
ನೀಲೇಶ್ವರ ಪಡಿಂಷಾಟ್ಟರ್ ಕೊಳುವನ್ ರಸ್ತೆ ನಿವಾಸಿ, 73 ವರ್ಷ ಪ್ರಾಯದ ಶ್ರೀಪತಿ ರಾವ್ ಬಿರುಸಿನಮಳೆಯಲ್ಲಿ ಎಲ್ಲವನ್ನೂ ಕಳೆದುಕೊಂಡು ಅನಾಥ ಪ್ರ ಜ್ಞೆ ಅನುಭವಿಸುತ್ತಿರುವ ಸಂತ್ರಸ್ತರಿಗೆ ಭರಪೂರ ದೇಣಿಗೆ ನೀಡುವ ಮೂಲಕ ಸ್ನೇಹಸ್ಪರ್ಶ ನೀಡಿದ್ದಾರೆ. ಜಿಲ್ಲಾಡಳಿತೆಯ ನೇತೃತ್ವದಲ್ಲಿ ಪಡನ್ನಕ್ಕಾಡ್ ಕೃಷಿ ಕಾಲೇಜಿನಲ್ಲಿ ಚಟುವಟಿಕೆ ನಡೆಸುತ್ತಿರುವ ಕಲೆಕ್ಷನ್ ಸೆಂಟರ್ ಗೆ ತಲಪಿ ಇವರು ಅನಿವಾರ್ಯ ಸಾಮಾಗ್ರಿಗಳನ್ನು ಹಸ್ತಾಂತರಿಸಿದ್ದಾರೆ.
ಪತಿಯ ಸಾರ್ವಜನಿಕ ಸೇವೆಯ ಮನೋಧರ್ಮಕ್ಕೆ ಬೆಂಬಲವಾಗಿ ನಿಂತ ಇವರ ಸಹಧರ್ಮಿಣಿ ದೇವಕಿ, ಮಗಳು ಶಾಲಿನಿ, ಮೊಮ್ಮಕ್ಕಳ ಸಹಿತ ಸೆಂಟರ್ ಗೆ ಆಗಮಿಸಿದ ಇವರು ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್ ಅವರಿಗೆ ಬಟ್ಟೆಬರೆ, ಸಾಬೂನು, ಬಾಲ್ದಿ, ಶುಚೀಕರಣ ಸಾಮಾಗ್ರಿ ಇತ್ಯಾದಿ ನಿತ್ಯೋಪಯೋಗಿ ಬಳಕೆಯ ಸಾಮಾಗ್ರಿಗಳನ್ನು ಹಸ್ತಾಂತರಿಸಿದರು. ನೀಲೇಶ್ವರ ರಾಜಾಸ್ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯಶಿಕ್ಷಕರಾಗಿ ನಿವೃತ್ತರಾದವರು ಶ್ರೀಪತಿ ರಾವ್ ಅವರು. ಸಂತ್ರಸ್ತರ ಬಗ್ಗೆ ಮಾವೀಯ ಕಳಕಳಿ ನಮ್ಮೆಲ್ಲರ ಕರ್ತವ್ಯ. ಇದಕ್ಕೆ ಸಮಾಜ ಇನ್ನೂ ಮುಂದುವರಿದು ಬರಬೇಕು ಎಂದವರು ಆಗ್ರಹಿಸಿದ್ದಾರೆ.


