ಮಧೂರು: ಇಲ್ಲಿನ ಶ್ರೀ ಕಾಳಿಕಾಂಬಾ ಮಠದ ಆಡಳಿತ ಮಂಡಳಿಯ ಸಭೆ ಹಾಗೂ ಚಾತುರ್ಮಾಸ್ಯ ವ್ರತನಿರ್ವಹಣಾ ಸಮಿತಿಯ ವಿಶೇಷ ಸಭೆಯು ಆ. 18ರಂದು ಭಾನುವಾರ 10 ಕ್ಕೆ ಮಧೂರು ಶ್ರೀಮಠದಲ್ಲಿ ನಡೆಯಲಿದೆ. ಸಭೆಯ ಆಧÀ್ಯಕ್ಷತೆಯನ್ನು ಶ್ರೀಮಠದ ಅಧ್ಯಕ್ಷ ನೀರ್ಚಾಲು ಪರಮೇಶ್ವರ ಆಚಾರ್ಯ ಅವರು ವಹಿಸುವರು. 2020ರಲ್ಲಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರÀ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 16ನೇ ವರುಷದ ಶಾರ್ವರಿ ಸಂವತ್ಸÀರದ ಚಾತುರ್ಮಾಸ್ಯ ವ್ರತಾಚರಣೆಯು ಶ್ರೀಮಠದಲ್ಲಿ ನಡೆಯಲಿದೆ. ಈಚಾತುರ್ಮಾಸ್ಯ ವ್ರತಾಚರಣೆಯ ಪೂರ್ವ ತಯಾರಿ ಬಗ್ಗೆ, ಮಠದ ಅಭಿವೃದ್ಧಿಕಾರ್ಯಗಳ ಬಗ್ಗೆ , ವಿವಿಧ ಪ್ರಾಂತ್ಯ ಸಮಿತಿಗಳ ಕಾರ್ಯ ನಿರ್ವಹಣೆಯ ಬಗ್ಗೆ ಚಿಂತನೆ ನಡೆಸಿ ತೀರ್ಮಾನಗಳನ್ನು ಕೈಗೊಳ್ಳಲಾಗುವುದು. ಸಭೆಯಲ್ಲಿ ಆಡಳಿತ ಸಮಿತಿ ಮತ್ತು ಚಾತುರ್ಮಾಸ್ಯವ್ರತ ನಿರ್ವಹಣಾ ಸಮಿತಿಯ ಎಲ್ಲ ಪ್ರಾಂತ್ಯಗಳ ಪ್ರಮುಖರು, ಸದಸ್ಯರು ಹಾಗೂ ಮಹಿಳಾ ಸಮಿತಿ, ಯುವಕ ಸಂಘ, ಭಜನಾ ಸಂಘಗಳ ಪದಾಧಿಕಾರಿಗಳು ಹಾಜರಿದ್ದು ಸಹಕರಿಸಬೇಕೆಂದು ಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.

