HEALTH TIPS

ಸಮರಸ ಶಬ್ದಾಂತರಂಗ ಸೌರಭ-ಸಂಚಿಕೆ-21-ಬರಹ-ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

            ಇಂದಿನ ಮೂರು ಟಿಪ್ಪಣಿಗಳು:
೧. ಕೃತಜ್ಞರೂ ಕೃತಘ್ನರಾಗುವುದಕ್ಕೆ Gn ಕಾರಣ

ಪ್ರಜ್ಞಾ’ ಎಂಬ ಹೆಸರನ್ನು ಇಂಗ್ಲಿಷ್‌ನಲ್ಲಿ ಬರೆಯುವಾಗ Pragna ಎಂದು ಬರೆಯಬಹುದೇಬರೆಯಬಾರದು ಎಂದು ಹೇಳಲಾರೆವಾದರೂ ಹಾಗೆ ಬರೆಯದಿರುವುದು ಒಳ್ಳೆಯದು. Prajnaa ಸರಿಯಾದೀತುPrajnyaa ಎಂದು ಬರೆದರೆ ಮತ್ತೂ ಒಳ್ಳೆಯದು. ಆದರೂಎಷ್ಟೇ ಸರ್ಕಸ್ ಮಾಡಿದರೂಇಂಗ್ಲಿಷ್ ವರ್ಣಮಾಲೆಯಲ್ಲಿ ಇಪ್ಪತ್ತಾರೇ ಅಕ್ಷರಗಳು ಮತ್ತು ಹೆಚ್ಚಿನೆಲ್ಲ ಭಾರತೀಯ ಭಾಷೆಗಳಲ್ಲಿ ಐವತ್ತರಷ್ಟು ಅಕ್ಷರಗಳು ಇರುವುದರಿಂದ ಒಂದಕ್ಕೊಂದು ಸರಿಯಾಗಿ ಹೊಂದಿಸುವುದು ಕಷ್ಟ. ಪ್ರಜ್ಞಾ ಎಂಬ ಹೆಸರಿನ ಸ್ಪೆಲ್ಲಿಂಗ್ Pragna ಎಂದು ಬರೆದರೆ ಆಗುವ ತೊಂದರೆ ಏನೆಂದರೆ- ಆಗ ಜ್ಞಾಪಕ Gnapaka ಆಗುತ್ತದೆವಿಜ್ಞಾನ Vignana ಆಗುತ್ತದೆಕೃತಜ್ಞತೆ Krutagnateಆಗುತ್ತದೆ. ಬರೆಯುವಾಗ ಮಾತ್ರವಲ್ಲಕೆಲವರು ಉಚ್ಚರಿಸುವಾಗಲೂ ಗ್ನಾಪಕವಿಗ್ನಾನಕೃತಗ್ನತೆ ಅಂತಲೇ ಅನ್ನುತ್ತಾರೆ. ಅದೇ ಸರಿ ಅಂದುಕೊಳ್ಳುತ್ತಾರೆ. ಆಮೇಲೆ ಕೃತಜ್ಞರೂ ಕೃತಘ್ನರಾಗುತ್ತಾರೆ!


ಬಾರೇ ನನ್ನ ದೀಪಿಕಾ ಮಧುರ ಕಾವ್ಯ ರೂಪಕ... ಕಣ್ಣ ಮುಂದೆ ಸುಳಿಯೆ ನೀನು ಕಾಲದ ತೆರೆ ಸರಿದು ತಾನು... ಜನುಮ ಜನುಮ ಜ್ಞಾಪಕ..." ಡಾಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರ ಭಾವಗೀತೆಯ ಗಾಯನದಲ್ಲಿಸಿ.ಅಶ್ವತ್ಥರೇ ‘ಗ್ನಾಪಕ’ ಎಂದು ಉಚ್ಚರಿಸಿದ್ದಾರೆಂಬುದನ್ನು ಗಮನಿಸಿದಾಗ ಸ್ವಲ್ಪ ಕಸಿವಿಸಿಯೆನಿಸುತ್ತದೆ.

ಕಂಪ್ಯೂಟರ್‌ನಲ್ಲಿ ಕನ್ನಡ ಲಿಪಿಯನ್ನು ಮೂಡಿಸಲಿಕ್ಕೆ ಬಹಳ ವರ್ಷಗಳಿಂದಲೂ ಬಳಕೆಯಾಗುತ್ತಿರುವ ಜನಪ್ರಿಯ ‘ಬರಹ’ ತಂತ್ರಾಂಶದಲ್ಲಿ ‘ಜ್ಞ’ ಅಕ್ಷರವನ್ನು ಮೂಡಿಸಲಿಕ್ಕೆ  j~ja ಈ ನಾಲ್ಕು ಕೀಲಿಗಳನ್ನು ಅನುಕ್ರಮವಾಗಿ ಒತ್ತಬೇಕು. ಬೇರೆ ತಂತ್ರಾಂಶಗಳಲ್ಲಿ ಮತ್ತು ಸ್ಮಾರ್ಟ್‌ಫೋನ್‌‌ಗಳಲ್ಲಿ ಕನ್ನಡ ಲಿಪಿಯಲ್ಲಿ ‘ಜ್ಞ’ ಅಕ್ಷರಕ್ಕೆ ಬೇರೆ ಕೀಲಿಗಳ ಬಳಕೆ ಇರಬಹುದು. ಐಫೋನ್‌ಗಿರುವ ಒಂದು ಕನ್ನಡ ಎಡಿಟಿಂಗ್ ಆಪ್‌ನಲ್ಲಿ jna ಕೀಲಿಗಳನ್ನು ಬಳಸಿದರ ಜ್ಞ ಅಕ್ಷರ ಮೂಡುತ್ತದೆ.

ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ... ಜ್ಞ ಅಕ್ಷರ ಕಲಿಯಲು ನೆರವಾಗು ಬಾ!

===
೨. ಹ್ರಸ್ವ ರೂಪಗಳನ್ನು ಒಮ್ಮೆಯಾದರೂ ವಿಸ್ತರಿಸಿ ಬರೆದರೆ ಒಳ್ಳೆಯದು

ಅಮೆರಿಕದಲ್ಲಿ ಶಿಕಾಗೊ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸೇರಿ ಕಟ್ಟಿಕೊಂಡಿರುವ ಸಂಸ್ಥೆ ‘ವಿದ್ಯಾರಣ್ಯ ಕನ್ನಡ ಕೂಟ’. 14ನೆಯ ಶತಮಾನದಲ್ಲಿ ಹರಿಹರ ರಾಯ ಮತ್ತು ಬುಕ್ಕ ರಾಯರಮಾರ್ಗದರ್ಶಕರಾಗಿ ವಿಜಯನಗರ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದವರೆಂದು ಐತಿಹ್ಯಗಳಲ್ಲಿ ಪ್ರಸಿದ್ಧರಾಗಿರುವಅದ್ವೈತ ಪಂಥದ ಯತಿಯ ಹೆಸರು ‘ವಿದ್ಯಾರಣ್ಯ’. (“ಕಡಿದು ಸುತ್ತಮುತ್ತಲಿದ್ದ ಗೊಂಡಾರಣ್ಯ... ಸ್ಥಾಪಿಸಿದರು ವಿಜಯನಗರ ವಿದ್ಯಾರಣ್ಯ..."). ಆ ಹೆಸರು ಕೇಳಿದರೇನೇ ಮೈಮನವೆಲ್ಲ ರೋಮಾಂಚನಗೊಳ್ಳುವಂತೆ ಇದೆ. ಆದರೆಶಿಕಾಗೊ ಕನ್ನಡಿಗರು ‘ವಿದ್ಯಾರಣ್ಯ ಕನ್ನಡ ಕೂಟ’ದ ಹೆಸರನ್ನು ಹ್ರಸ್ವಗೊಳಿಸಿ ಆಡುಮಾತಿನಲ್ಲಿ,ಸಂಭಾಷಣೆಯಲ್ಲಿ ‘ವಿಕೆಕೆ’ ಎಂದೇ ಹೇಳುತ್ತಾರೆ. ಸಂಭಾಷಣೆಯ ಮಟ್ಟಿಗೆ ವಿಕೆಕೆ ಓಕೆ. ಆದರೆ ಕನ್ನಡ ಕೂಟದ ಪ್ರಕಟಣೆಗಳುಸುದ್ದಿಪತ್ರಸ್ಮರಣಸಂಚಿಕೆಗಳಲ್ಲಿನ ಶಿಷ್ಟ ಬರಹಗಳುಇವುಗಳಲ್ಲೆಲ್ಲ ‘ವಿಕೆಕೆ’ ಎಂದು ಬರೆಯುವುದಕ್ಕಿಂತ ‘ವಿದ್ಯಾರಣ್ಯ ಕನ್ನಡ ಕೂಟ’ ಎಂದು ಬರೆಯುವುದು ಒಳ್ಳೆಯದಲ್ಲವೇಲಘು ಧಾಟಿಯ ಹರಟೆ ಬರಹ ಅಂತಾದರೂತೀರ ಫಾರ್ಮಲ್ ಅಂತ ಅನಿಸಬಾರದೆಂದಿದ್ದರೂಬರಹದಲ್ಲಿ ಮೊದಲ ಬಾರಿ ವಿದ್ಯಾರಣ್ಯ ಕನ್ನಡ ಕೂಟ (ವಿಕೆಕೆ) ಎಂದು ಬರೆದು ಆಮೇಲೆ ಎಲ್ಲ ಕಡೆ ‘ವಿಕೆಕೆ’ ಅಂತ ಬರೆದರೂ ಪರವಾಇಲ್ಲ. ಒಟ್ಟಿನಲ್ಲಿ, ‘ವಿಕೆಕೆ ಎಂದರೇನು?’ ಎಂಬ ಪ್ರಶ್ನೆಗೆ ಉತ್ತರ ಸಿಗುವಂತೆ ಇರಬೇಕುಮತ್ತು, ‘ವಿದ್ಯಾರಣ್ಯ’ರ ಮೇಲಿನ ಅಭಿಮಾನದಿಂದ ಹೆಸರಿಟ್ಟ ಮೇಲೆ ಈಗಿನ ಮತ್ತು ಮುಂದಿನ ತಲೆಮಾರುಗಳ ಕಿವಿಗಳು ‘ವಿದ್ಯಾರಣ್ಯ’ ಎಂಬ ಹೆಸರನ್ನು ಆಗಾಗ ಕೇಳುತ್ತಿರಬೇಕುಕಣ್ಣುಗಳು ‘ವಿದ್ಯಾರಣ್ಯ’ ಎಂಬ ಹೆಸರನ್ನು ಆಗಾಗ ಓದುತ್ತಿರಬೇಕು. ಗೌರವದಿಂದ ಹೆಸರಿಟ್ಟಿದ್ದು ಸಾರ್ಥಕವಾಗಬೇಕು.

ವಿದ್ಯಾರಣ್ಯ-ವಿಕೆಕೆ’ ಕೇವಲ ಒಂದು ಉದಾಹರಣೆ ಅಷ್ಟೇ. ಆದರೆ ಈ ವಿಚಾರ ಅಮೆರಿಕನ್ನಡಿಗರಿಗಷ್ಟೇ ಅನ್ವಯವಾಗುವುದೇನಲ್ಲ. ನಾವು ಕನ್ನಡಿಗರೆಲ್ಲರೂಈ ರೀತಿ ಕನ್ನಡದಲ್ಲಿ ಹಾಸುಹೊಕ್ಕಿರುವ ಇಂಗ್ಲಿಷ್ ಹ್ರಸ್ವರೂಪಗಳನ್ನುಆಡುಮಾತಿನಲ್ಲಲ್ಲದಿದ್ದರೂ ಶಿಷ್ಟ ಬರಹಗಳಲ್ಲಿ ಒಮ್ಮೆಯಾದರೂ ವಿಸ್ತರಿಸಿ ಬರೆಯುವುದು ಒಳ್ಳೆಯದು. ಕೆ.ಆರ್.ಮಾರ್ಕೆಟ್ಎಚ್.ಡಿ.ಕೋಟೆಎಂ.ಜಿ.ರೋಡ್ಜೆಎಫ್‌ಕೆ ವಿಮಾನನಿಲ್ದಾಣ ಮುಂತಾದ ಸ್ಥಳನಾಮಗಳುಡಿವಿಜಿಸಿಪಿಕೆ ಮುಂತಾದ ಸಾಹಿತಿವರೇಣ್ಯರ ಹೆಸರುಗಳು... ನಮ್ಮ ಬರಹಗಳಲ್ಲಿ ಒಮ್ಮೆಯಾದರೂ ವಿಸ್ತೃತಗೊಂಡರೆ ಅಷ್ಟರ ಮಟ್ಟಿಗೆ ಅವುಗಳ ನಿಜವಾದ ಹಿರಿಮೆ-ಗರಿಮೆ ನಮ್ಮ ಮನಸ್ಸಿನಲ್ಲೊಮ್ಮೆಮೊಳಗಿದಂತೆ ಅಲ್ಲವೇಇದು ಸರಿ-ತಪ್ಪು ತೀರ್ಮಾನ ಅಲ್ಲ. ಸತ್ಸಂಪ್ರದಾಯ ಅಥವಾ best practiceನ ಒಂದು ಕಲಿಕೆ.
 ====
೩. ಪದೇ ಪದೇ ತಪ್ಪಾಗಿ ಕಾಣಿಸಿಕೊಳ್ಳುವ ಪದಗಳು:

ಅ) ಸದ್ಯ ಸರಿ. ಸಧ್ಯ ತಪ್ಪು. [‘ಜೋರಾಗಿ ಗಾಳಿ ಮಳೆ ಬಂದ್ರೂ ಕರೆಂಟ್ ಹೋಗ್ಲಿಲ್ಲ. ಸದ್ಯ!’ ಎನ್ನುವಾಗಿನ ಸದ್ಯವೂ, ‘ನಗರದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಯಿಂದಾಗಿ ಸದ್ಯ ‘ಕಂಡಲ್ಲಿ ಗುಂಡು’ ಆಜ್ಞೆ ಇದೆ’ ಎನ್ನುವಾಗಿನ ಸದ್ಯವೂ ‘ಸಧ್ಯ’ ಅಲ್ಲ.]
ಆ) ಗಾಢ ಸರಿ. ಗಾಡಘಾಡಘಾಢ ಇವೆಲ್ಲ ತಪ್ಪು.
ಇ) ಯಥೇಚ್ಛ (ಯಥಾ + ಇಚ್ಛ. ಗುಣಸಂಧಿ. ಬೇಕಾದಷ್ಟು ಎಂಬ ಅರ್ಥ) ಸರಿ. ಯತೇಚ್ಚಯಥೇಚ್ಚಯತೇಚ್ಛ ಇವೆಲ್ಲ ತಪ್ಪು.
ಈ) ವಿದ್ಯುಚ್ಛಕ್ತಿ (ವಿದ್ಯುತ್ + ಶಕ್ತಿ : ಛತ್ವ ಸಂಧಿ) ಸರಿ. ವಿದ್ಯುಶ್ಶಕ್ತಿವಿದ್ಯುಛಕ್ತಿವಿದ್ಯುತ್ಛಕ್ತಿ ಇವೆಲ್ಲ ತಪ್ಪು.
ಉ) ಪ್ರಶ್ನೆ ಸರಿ. ಪ್ರೆಶ್ನೆ ತಪ್ಪು.

                                     ಬರಹ-ಶ್ರೀವತ್ಸ ಜೋಶಿ.ವಾಶಿಂಗ್ಟನ್ ಡಿ.ಸಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries