ಮಂಜೇಶ್ವರ: ಹಿರಿಯ ಯಕ್ಷಗಾನ ಸಂಘಟಕ ಸತೀಶ ಅಡಪ ಸಂಕಬೈಲು ಅವರ ಸಂಚಾಲಕತ್ವದ ಯಕ್ಷಬಳಗ ಹೊಸಂಗಡಿ ಸಂಘವು ಕಳೆದ 27ವರ್ಷಗಳಿಂದ ವಾರ್ಷಿಕ ಅಷಾಡಮಾಸ ಸರಣಿ ಯಕ್ಷಗಾನ ಕೂಟಗಳನ್ನು ನಡೆಸುತ್ತಾ ಬರುತ್ತಿದ್ದು ಸಮಾರೋಪದಂದು ನಾಡಿನ ಹಿರಿಯ ಕಲಾವಿದರೋರ್ವರನ್ನು ಸನ್ಮಾನಿಸಿ ಗೌರವಿಸುತ್ತಾ ಬಂದಿದೆ. ಈ ಬಾರಿಯ 28ನೇ ವರ್ಷದ ಆಷಾಡ ಕೂಟ ಸಮಾರೋಪ ಸಮಾರಂಭ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆಯಲ್ಲಿ ಆ 24 ರಂದು ಶನಿವಾರ ಬೆಳಿಗ್ಗೆ 10ರಿಂದ ಜರಗಲಿದೆ. ಹಾಗೂ ಹಿರಿಯ ಹವ್ಯಾಸಿ ಕಲಾವಿದ ನಾರಾಯಣ ಪೂಜಾರಿ ಬೆಜ್ಜಂಗಳ ಅವರಿಗೆ ವಾರ್ಷಿಕ ಸನ್ಮಾನ ನಡೆಯಲಿದೆ.
ಸಮಾರೋಪದ ಅಂಗವಾಗಿ ಬೆಳಿಗ್ಗೆ 10ರಿಂದ ಸತ್ವ ಪರೀಕ್ಷೆ ಯಕ್ಷಗಾನ ತಾಳಮದ್ದಳೆ ಜರಗಲಿದ್ದು ನಾಡಿನ ಪ್ರಸಿದ್ದ ಕಲಾವಿದರು ಭಾಗವಹಿಸುವರು. ಹಿಮ್ಮೇಳದಲ್ಲಿ ಭಾಗವತರಾಗಿ ಸಿರಿಬಾಗಿಲು ರಾಮಕೃಷ್ಣ ಮಯ್ಯ, ರತ್ನಾಕರ ಆಳ್ವ ತಲಪಾಡಿ ಹಾಗೂ ಚೆಂಡೆ ಮದ್ದಳೆಯಲ್ಲಿ ರಾಜಾರಾಮ ಬಲ್ಲಾಳ ಹಾಗೂ ಶುಭ ಚರಣ ತಾಳ್ತಜೆ ಭಾಗವಹಿಸುವರು. ಪಾತ್ರವರ್ಗದಲ್ಲಿ ರಾಧಾಕೃಷ್ಣ ಕಲ್ಚಾರ್, ದಿನೇಶ ಶೆಟ್ಟಿ ಕಾವಳ ಕಟ್ಟೆ, ಸತೀಶ ಅಡಪ ಸಂಕಬೈಲು, ನಾಗರಾಜ ಪದಕಣ್ಣಾಯ, ವಿಠಲ ಭಟ್ ಮೊಗಸಾಲೆ, ರಾಮಕೃಷ್ಣ ಭಟ್ ಕೋಳ್ಯೂರು ಪಾತ್ರಗಳನ್ನು ನಿರ್ವಹಿಸುವರು. ಸಭಾಕಾರ್ಯಕ್ರಮದಲ್ಲಿ ಡಾ. ಜಯಪ್ರಕಾಶ ನಾರಾಯಣ ಅಧ್ಯಕ್ಷತೆ ವಹಿಸುವರು. ಡಾ. ರಾಜೇಶ ಬೆಜ್ಜಂಗಳ, ನಾರಾಯಣ ನಾೈಕ್ ನಡುಹಿತ್ಲು ಉಪಸ್ಥಿತರಿರುವರು. ಸತೀಶ ಅಡಪ ಸಂಕಬೈಲು ನಿರ್ವಹಿಸುವರು.


