ಪೆರ್ಲ: ಕೇರಳದ ಹಲವು ಜಿಲ್ಲೆಗಳಲ್ಲಿ ನೆರೆಹಾವಳಿಯಿಂದ ತೊಂದರೆಗೀಡಾದ ಜನತೆಗೆ ಸಹಾಯ ಹಸ್ತವಾಗಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲಾ ಎನ್.ಎಸ್.ಎಸ್. ತಂಡ ಸಾಮಗ್ರಿ ಸಂಗ್ರಹಿಸಿ ಜಿಲ್ಲಾ ತಂಡದೊಂದಿಗೆ ವಯನಾಡ್‍ಗೆ ಪ್ರಯಾಣ ಬೆಳಸಿತು.
ವಿದ್ಯಾರ್ಥಿಗಳು ಸುಮಾರು ಹತ್ತು ಸಾವಿರ ರೂ ಮೌಲ್ಯದ ವಸ್ತುಗಳನ್ನು ಹಲವು ಕಡೆಗಳಿಂದ ಸಂಗ್ರಹಿಸಿದ್ದರು. ವಿದ್ಯಾರ್ಥಿಗಳ ಸೇವಾ ಮನೋಭಾವಕ್ಕೆ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿ ಮನುಷ್ಯನ ಅತಿಯಾದ ಪ್ರಕೃತಿಯ ಶೋಷಣೆಯೇ ಇಂತಹ ದುರ್ಘಟನೆಗಳಿಗೆ ಕಾರಣ ಎಂದ ಇನ್ನಾದರೂ ನಾವು ತಿಳಿದುಕೊಳ್ಳಬೇಕು ಎಂದರು.
ಎನ್.ಎಸ್.ಎಸ್. ಯೋಜನಾಧಿಕಾರಿ ಮಹೇಶ್ ಏತಡ್ಕ ಮಾತನಾಡಿ ನಮ್ಮ ಅಭಿವೃದ್ಧಿ ಎಂದೂ ಪ್ರಕೃತಿ ಸ್ನೇಹಿಯಾಗಿರಬೇಕು. ಇಲ್ಲದಿದ್ದರೆ ಭೂ ಕುಸಿದಂತಹ ಘಟನೆಗಳು ಇನ್ನೂ ಪುನರಾವರ್ತಿಸಬಹುದು. ಮನೆ ಮಠ ಕಳೆದು ಕೊಂಡವರಿಗೆ ತಮಗಾಗುವ ಸಹಾಯ ಎನ್.ಎಸ್.ಎಸ್. ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಅಧ್ಯಾಪಕರಾದ ಸರಸ್ವತಿ ಪ್ರಸನ್ನ, ರಾಜೇಶ್ ಸಿ.ಎಚ್, ರಮಣಿ ಎಂ.ಎಸ್, ಗೋವಿಂದನ್ ನಂಬೂದಿರಿ, ವಾಣಿ ಕೆ, ಕೃಷ್ಣ ಕುಮಾರಿ, ಶ್ರೀವಿದ್ಯಾ, ಈಶ್ವರ ನಾಯಕ್, ಸುಪ್ರಿತ್, ಕೃಷ್ಣನ್ ನಂಬೂದಿರಿ, ಅರ್ಚನ, ಸಿಬ್ಬಂದಿಗಳಾದ ಸಂಕಪ್ಪ, ಹನೀಫ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶಾಹಾಮ, ಹರಿಣಾಕ್ಷಿ, ಶ್ರುತಿಕ, ಆಕಾಶ್, ಅಶ್ವಿನ್, ಅನನ್ಯ, ಕವಿತಾ, ರಿಜ್ವನಾ ಮುಂತಾದವರು ನೇತೃತ್ವ ವಹಿಸಿದರು.


