ಮಂಜೇಶ್ವರ: ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಸಿಂಹಮಾಸ ಶನಿವಾರ ಬಲಿವಾಡುಕೂಟ ಹಾಗೂ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಆ. 24 ರಂದು ಶನಿವಾರದಿಂದ ಮುಂದಿನ ನಾಲ್ಕು ಶನಿವಾರಗಳು ಜರಗಲಿದೆ.
24ರಂದು ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಯಕ್ಷಬಳಗ ಹೊಸಂಗಡಿ ತಂಡದ 28ನೇ ವರ್ಷದ ಆಷಾಡಮಾಸ ಕೂಟದ ಸಮಾರೋಪ ಸಮಾರಂಭ ಹಾಗೂ ಸತ್ವ ಪರೀಕ್ಷೆ ಯಕ್ಷಗಾನ ತಾಳ ಮದ್ದಳೆ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಬೆಜ್ಜಂಗಳ ನಾರಾಯಣ ಪೂಜಾರಿ ಇವರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಆ. 31 ರಂದು ಶವಾರ ಬಲಿವಾಡುಕೂಟ ಹಾಗೂ ವೇದ ಮೂರ್ತಿ ಹರಿನಾರಾಯಣ ಮಯ್ಯ ಬಜೆ ಕುಂಬಳೆ ಇವರಿಂದ ಶಿವ ಪುರಾಣ ಪ್ರವಚನ, ಸೆ. 7 ರಂದು ಶನಿವಾರ ಬಲಿವಾಡು ಕೂಟ ಹಾಗೂ ನಿನಾದ ಕ್ರಿಯೇಷನ್ಸ್ ಮಂಗಲ್ಪಾಡಿ ಇವರಿಂದ ಭಕ್ತಿಗಾನ ಲಹರಿ, ಸೆ. 14 ರಂದು ಶನಿವಾರ ಬಲಿವಾಡು ಕೂಟ ಹಾಗೂ ಯಕ್ಷ ಮಿತ್ರರು ಮೀಯಪದವು ತಂಡದಿಂದ ಯಕ್ಷಗಾನ ತಾಳಮದ್ದಳೆ ಶ್ರೀ ಕೃಷ್ಣ ಪರಂಧಾಮ ಜರಗಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

