ಕಾಸರಗೋಡು: ವಿಶ್ವ ಸೊಳ್ಳೆ ನಿಯಂತ್ರಣ ದಿನಾಚರಣೆ ಮೊಗ್ರಾಲ್ ಪುತ್ತೂರು ಕುಟುಂಬ ಆರೋಗ್ಯ ಕೇಂದ್ರ ವತಿಯಿಂದ ಆರೋಗ್ಯ ಇಲಾಖೆ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳು ಮಂಗಳವಾರ ನಡೆಯಿತು.
ಚೌಕಿ ಕೆ.ಕೆ.ಪುರಂ ನಲ್ಲಿ ನಡೆದ ಕಾರ್ಯಕ್ರಮ ಅಂಗವಾಗಿ ಸೊಳ್ಳೆ ನಿವಾರಣೆ, ಜನಜಾಗೃತಿ, ರಸಪ್ರಶ್ನೆ, ಭಿತ್ತಿಪತ್ರ ರಚನೆ ಇತ್ಯಾದಿಗಳು ನಡೆದುವು. ಕಾರ್ಯಕ್ರಮ ಅಂಗವಾಗಿ 150 ಮನೆಗಳಲ್ಲಿ ಸೊಳ್ಳೆ ನಿವಾರಣೆ ಚಟುವಟಿಕೆ ನಡೆಸಲಾಯಿತು. 1897 ಆಗಸ್ಟ್ 20ರಂದು ಮಲೇರಿಯಾ ರೋಗಕ್ಕೆ ಕಾರಣವಾಗುವ ಪ್ಲಾಸ್ ಮೋಡಿಯಂ ರೋಗಾಣು ಸೊಳ್ಳೆ ಕಡಿತ ಮೂಲಕ ಮನುಷ್ಯ ದೇಹವನ್ನು ಪ್ರವೇಶಿಸುತ್ತದೆ ಎಂದು ಪತ್ತೆ ಮಾಡಲಾಗಿತ್ತು. ಈ ಸಂಬಂಧ ಭಾರತದಲ್ಲಿ ಚಟುವಟಿಕೆ ನಡೆಸಿದ ಡಾ.ಸರ್ ರೊನಾಲ್ಡ್ ರೋಸ್ ಅವರು ಇದರ ಸಂಶೋಧಕರಾಗಿದ್ದರು. ಇವರ ಸಂಸ್ಮರಣೆ ಅಂಗವಾಗಿ ಸೊಳ್ಳೆ ನಿಯಂತ್ರಣ ದಿನಾಚರಣೆ ನಡೆಸಲಾಗುತ್ತಿದೆ.
ಈ ಸಂಬಂಧ ನಡೆದ ಸಮರಂಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಎಸ್.ಎಚ್.ಹಮೀದ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದರು. ಆರೋಗ್ಯ ಪರಿವೀಕ್ಷಕ ಬಿ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜ್ಯೂನಿಯರ್ ಹೆಲ್ತ್ ಇನ್ಸ್ ಪೆಕ್ಟರ್ ಎ.ಪಿ.ಸುಂದರನ್, ರಂಜೀವ್ ರಾಘವನ್, ಜೆ.ವಿ.ಎಚ್.ಎನ್.ವಿ.ರಾಜಿ, ಆಶಾ ಕಾರ್ಯಕರ್ತರೆಯರು, ನೌಕರಿ ಖಾತರಿ ಯೋಜನೆ ಕಾರ್ಮಿಕರು ಉಪಸ್ಥಿತರಿದ್ದರು.


