ಕಾಸರಗೋಡು: ನೌಕರಿ ವಲಯದ ದೌರ್ಜನ್ಯ, ವಂಚನೆ ಇತ್ಯಾದಿ ತಡೆಯುವ ಮತ್ತು ನೌಕರಿ ಸಂರಕ್ಷಣೆ, ವಿದೇಶದಲ್ಲಿ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ವಿದೇಶಾಂಗ ಇಲಾಖೆ , ನೋರ್ಕ ಇಲಾಖೆ ಜಂಟಿ ವತಿಯಿಂದ ಆ.29 ಹಾಗೂ 30ರಂದು ತಿರುವನಂತಪುರಂನಲ್ಲಿ ಸಂಬಂಧಪಟ್ಟವರ ಸಭೆ ನಡೆಯಲಿದೆ.
ಅಕ್ರಮ ನೇಮಕಾತಿ, ನಕಲಿ ವಿಸಾ ವಂಚನೆ, ಆನ್ ಲೈನ್ ಮೂಲಕ ನೌಕರಿ ಭರವಸೆ ನೀಡಿ ವಂಚಿಸುವುದು ಇತ್ಯಾದಿ ಚಟುವಟಿಕೆಗಳು ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಸಭೆ ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಕೇಂದ್ರ ವಿದೇಶಾಂಗ ಇಲಾಖೆ,ನೋರ್ಕ ಇಲಾಖೆ, ಗೃಹ ಖಾತೆ, ಎಫ್.ಆರ್.ಆರ್.ಒ., ತಿರುವನಂತಪುರಂ ರೀಜನಲ್ ಪಾಸ್ ಪೋರ್ಟ್ ಕಚೇರಿಗಳ ಸಿಬ್ಬಂದಿ, ವಿವಿಧ ಅಂಗೀಕೃತ ರಿಕ್ರೂಟಿಂಗ್ ಏಜೆನ್ಸಿ ಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುವರು.
ಇದರ ಅಂಗವಾಗಿ ಆಸಕ್ತರು ಈ ವಲಯದ ಯಾವುದೇ ಸಮಸ್ಯಗೆ ಸಂಬಂಧಿಸಿ ದೂರು ಸಲ್ಲಿಸಲು ಅಥವಾ ಅಧಿಕಾರಿಗಳ ಗಮನಕ್ಕೆ ವಿಚಾರ ತರುವ ಅವಕಾಶಗಳೂ ಇರುವುವು. ಇದಕ್ಕಾಗಿ ತಿರುವನಂತಪುರಂ ತೈಕೋಡ್ ನೋರ್ಕ ರೂಟ್ಸ್ ನಲ್ಲಿ ಚಟುವಟಿಕೆ ನಡೆಸುತ್ತಿರುವ ವಿದೇಶಾಂಗ ಇಲಾಖೆಯ ಪ್ರೊಟೆಕ್ಟರ್ ಆಫ್ ಎಮಿಗ್ರೆನ್ಸ್ ಕಚೇರಿಯಲ್ಲಿ ಆ.26ರ ಮುಂಚಿತವಾಗಿ ದೂರವಾಣಿ/ ಈ-ಮೇಲ್ ಮೂಲಕ ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ-0471-2336625.

