4 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ
ಕಾಸರಗೋಡು: ನುಳ್ಳಿಪ್ಪಾಡಿ ಕೋಟೆಕಣಿ ಅಡ್ಡರಸ್ತೆಯ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದಿಂದ 4 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಹೋತ್ಸವ ಆ.23 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಿಗ್ಗೆ 8.30 ಕ್ಕೆ ಅಣಂಗೂರು ಶ್ರೀ ಧೂಮಾವತೀ ದೈವಸ್ಥಾನದಿಂದ ಶೋಭಾಯಾತ್ರೆ ನಡೆಯಲಿದೆ. ಆ ಬಳಿಕ 9.30 ಕ್ಕೆ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲ ಮಕ್ಕಳಿಂದ ಭಜನಾಮೃತಂ, 10 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಹರೀಶ್ ಕುಮಾರ್ ನುಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸುವರು. ಡಾ.ಜನಾರ್ದನ ನಾಯ್ಕ್ ಸಿ.ಎಚ್. ಅವರು ದೀಪ ಪ್ರಜ್ವಲನೆಗೊಳಿಸುವರು. ಮುಖ್ಯ ಅತಿಥಿಯಾಗಿ ಮೀರಾ ಆಳ್ವ ಅವರು ಭಾಗವಹಿಸಲಿದ್ದಾರೆ. ಪವಿತ್ರನ್ ಕೆ.ಕೆ.ಪುರಂ ಅವರು ಧಾರ್ಮಿಕ ಭಾಷಣ ಮಾಡುವರು. ಶರಣ್ಯ ವಿ.ಕೆ, ಅರ್ಚನಾ ಕಿಶೋರ್ ಮೊದಲಾದವರು ಉಪಸ್ಥಿತರಿರುವರು. 11.30 ಕ್ಕೆ ಮೊಸರು ಕುಡಿಕೆ ನಡೆಯಲಿದೆ.
................................................................................................................
ಪೆರ್ಲ:ಪಡ್ರೆ ವಾಣೀನಗರ ಶ್ರೀಕೃಷ್ಣ ಭಜನಾ ಸಂಘ, ಶ್ರೀ ವಾಣೀ ಯುವಕ ಮಂಡಲ, ಶ್ರೀಕೃಷ್ಣ ಭಜನಾ ಸಂಘ ಸಂಯುಕ್ತ ಆಶ್ರಯದಲ್ಲಿ ಆ.23ರಂದು ಶ್ರೀಕೃಷ್ಣ ಜನ್ಮಾಷ್ಟಮಿ , ಭಜನಾ ಮಂದಿರದ 15ನೇ ವರ್ಷದ ಭಜನಾ ವಾರ್ಷಿಕೋತ್ಸವ ಧಾರ್ಮಿಕ, ಸಾಂಸ್ಕೃತಿಕ, ಹಾಗೂ ಭಜನಾ ಕಾರ್ಯಕ್ರಮಗಳೊಂದಿಗೆ ಜರುಗಲಿವೆ.
ಬೆಳಿಗ್ಗೆ 6.19ಕ್ಕೆ ದೀಪ ಜ್ವಾಲನೆ, ಭಜನೆ ಆರಂಭ, 7.30ರಿಂದ ವೇ.ಮೂ.ಶಂಕರ ನಾವಡ ಬಜಕೂಡ್ಲು ಅವರ ನೇತೃತ್ವದಲ್ಲಿ ಗಣಪತಿ ಹವನ, 8.45ರಿಂದ ನಾನಾ ಸಂಘಗಳ ಭಜನೆ, 9ರಿಂದ ಅಂಗನವಾಡಿ ಮಕ್ಕಳಿಗೆ ನಾಣ್ಯ, ಬಟಾಟೆ ಹೆಕ್ಕುವ ಸ್ಪರ್ಧೆ, 1ರಿಂದ 7ನೇ ತರಗತಿ ವರೆಗಿನ ಮಕ್ಕಳಿಗೆ ಸ್ಮರಣ ಶಕ್ತಿ, ನಾಣ್ಯ, ಬಟಾಟೆ ಹೆಕ್ಕುವ, ಹಗಲು ರಾತ್ರಿ ಸ್ಪರ್ಧೆ, 8ರಿಂದ 12ನೇ ತರಗತಿ ವರೆಗಿನ ಹುಡುಗರಿಗೆ ಲಿಂಬೆ ಚಮಚ ಓಟ, ಮಡಕೆ ಒಡೆಯುವ, ಕುಪ್ಪಿಗೆ ನೀರು ತುಂಬಿಸುವ, ಹುಡುಗಿಯರಿಗೆ ಲಿಂಬೆ ಚಮಚ, ಸಂಗೀತ ಕುರ್ಚಿ, ಕುಪ್ಪಿಗೆ ನೀರು ತುಂಬಿಸುವ ಸ್ಪರ್ಧೆ, ಸಾರ್ವಜನಿಕ ಪುರುಷರಿಗೆ ಮಡಕೆ ಒಡೆಯುವ, ಹಗ್ಗ ಜಗ್ಗಾಟ, ಅಡ್ಡ ಜಾರು ಕಂಬ, ಮಹಿಳೆಯರಿಗೆ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಲಿಂಬೆ ಚಮಚ ಓಟ ಸ್ಪರ್ಧೆಗಳು, ಬಹುಮಾನ ವಿತರಣೆ ನಡೆಯಲಿವೆ.
ರಾತ್ರಿ 9.30ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆ, ಮಹಾ ಮಂಗಳಾರತಿ, ಅಘ್ರ್ಯ ಪ್ರದಾನ, ಪ್ರಸಾದ ವಿತರಣೆ ನಡೆಯಲಿದೆ.
.............................................................................................................................
ಆ.24ರಂದು ಚೇರ್ಕಬೆ ದೇವಳದಲ್ಲಿ 5ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ
ಪೆರ್ಲ:ಚೇರ್ಕಬೆ ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ಶ್ರೀ ಶಾಸ್ತಾರ ಸುಬ್ರಹ್ಮಣ್ಯೇಶ್ವರ ಸೇವಾ ಟ್ರಸ್ಟ್ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ಸಂಯುಕ್ತ ಆಶ್ರಯದಲ್ಲಿ 5ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ವಿವಿಧ ಕಾರ್ಯಕ್ರಮಗಳೊಂದಿಗೆ ಬೆಳಗ್ಗೆ 10ಕ್ಕೆ ಆರಂಭವಾಗಲಿದೆ.
ಮಕ್ಕಳಿಗೆ, ಕೃಷ್ಣ ವೇಷ ಸ್ಪರ್ಧೆ (10 ವರ್ಷದ ಒಳಗೆ), ಭಕ್ತಿ ಗೀತೆ, ಕಪ್ಪೆ ಜಿಗಿತ, ಬಕೆಟ್ ಬಾಲ್, ಮಹಿಳೆಯರಿಗೆ ರಂಗವಲ್ಲಿ, ಲಿಂಬೆ ಚಮಚ, ಸೂಜಿ ನೂಲು ಓಟ, ಹಣತೆ ಉರಿಸುವುದು, ಪುರುಷರಿಗೆ ಅಡ್ಡಕಂಬದಲ್ಲಿ ದೀಪ ಉರಿಸುವುದು, ಇಟ್ಟಿಗೆ ಎತ್ತುವುದು, ಗೋಣಿ ಚೀಲ ಓಟ, ಸಾರ್ವಜನಿಕರಿಗೆ ಭಕ್ತಿಗೀತೆ, ಸಂಗೀತ ಕುರ್ಚಿ, ಮಡಕೆ ಒಡೆಯುವುದು, ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಲಿದೆ.
...............................................................................................................................
ಒಡ್ಯದಲ್ಲಿ ಆ.24ರಂದು ಶ್ರೀಕೃಷ್ಣ ಜನ್ಮಾಷ್ಟಮಿ
ಪೆರ್ಲ:ಒಡ್ಯ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ಆಶ್ರಯದಲ್ಲಿ ಒಡ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಆ.24ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಹಗ್ಗ ಜಗ್ಗಾಟ ಸ್ಪರ್ಧೆ ನಡೆಯಲಿದೆ.
..............................................................................................................................
ಆ. 25ರಂದು ಉಕ್ಕಿನಡ್ಕ ಶ್ರೀಅಯ್ಯಪ್ಪ ಭಜನಾ ಮಂದಿರದಲ್ಲಿ 10ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ
ಪೆರ್ಲ:ಉಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರ, ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ, ನಂದ ಬಾಲಗೋಕುಲ ಆಶ್ರಯದಲ್ಲಿ 10ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರುಕುಡಿಕೆ ಉತ್ಸವ ಆ.25ರಂದು ಉಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರ ಪರಿಸರದಲ್ಲಿ ಜರುಗಲಿದೆ.
ಬೆಳಗ್ಗೆ 9.30ಕ್ಕೆ ಅಶ್ವಥ್ಹಕಟ್ಟೆಯಿಂದ ಬಾಲಗೋಕುಲ ಮಕ್ಕಳ ಶೋಭಾಯಾತ್ರೆ ಹೊರಡಲಿದ್ದು 10ಕ್ಕೆ ಆರಂಭವಾಗುವ ಸಭಾ ಕಾರ್ಯಕ್ರಮವನ್ನು ಬಣ್ಪುತ್ತಡ್ಕ ಅಂಗನವಾಡಿ ಶಿಕ್ಷಕಿ ಕುಸುಮಾವತಿ ಸಪರ್ಂಗಳ ಉದ್ಘಾಟಿಸಲಿದ್ದಾರೆ.ಉಕ್ಕಿನಡ್ಕ ವಿ.ಎ.ಎಲ್.ಪಿ. ಶಾಲಾ ಶಿಕ್ಷಕ ಕಿರಣ ಶಂಕರ ಅಧ್ಯಕ್ಷತೆ ವಹಿಸುವರು.ಬಾಲಗೋಕುಲ ಕಾಸರಗೋಡು ತಾಲೂಕು ಶಿಕ್ಷಣ ಪ್ರಮುಖ್ ಪ್ರವೀಣ್ ಕುಮಾರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು.
ಬೆಳಿಗ್ಗೆ 11ರಿಂದ ಕೃಷ್ಣ ವೇಷ ಸ್ಪರ್ಧೆ, ಮೊಸರು ಕುಡಿಕೆ, ಮಡಕೆ ಒಡೆಯುವುದು, ಹಗ್ಗ ಜಗ್ಗಾಟ ಸ್ಪರ್ಧೆಗಳು, ಬಾಲಕರು, ಬಾಲಕಿಯರು, ಮಹಿಳೆಯರು, ಪುರುಷರ ವಿಭಾಗದಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ.
...........................................


