ಬದಿಯಡ್ಕ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಭಜನಾ ಸಂಘದ ಆಶ್ರಯದಲ್ಲಿ 32 ನೇ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆ. 23 ಶುಕ್ರವಾರ ಜರಗಲಿದೆ. ಅಂದು ಬೆಳಿಗ್ಗೆ 8.30 ಕ್ಕೆ ದೀಪ ಬೆಳಗಿಸಿ ಉದ್ಘಾಟನೆ, ಬಳಿಕ ಶ್ರೀ ಶಾರದಾಂಭಾ ಬಾಲಗೋಕುಲದಿಂದ ಕೃಷ್ಣರಾಧೆಯರ ಶೋಭಯಾತ್ರೆ, 9ರಿಂದ ವಿವಿಧ ಸ್ಪರ್ಧೆಗಳು, ಸಂಜೆ.4 ರಿಂದ ಧಾರ್ಮಿಕ ಸಭೆ ನಡೆಯಲಿದೆ. ಧಾರ್ಮಿಕ ಸಭೆಯಲ್ಲಿ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ರಾಘವನ್ ಕನಕತೋಡಿ ಅಧ್ಯಕ್ಷತೆ ವಹಿಸುವರು. ಸಹಕಾರ ಭಾರತಿ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಕತುಣಾಕರನ್ ನಂಬ್ಯಾರ್ ಧಾರ್ಮಿಕ ಭಾಷಣ ಮಾಡುವರು. ಡಾ.ವೇಣುಗೋಪಾಲ ಕಳೆಯತ್ತೋಡಿ ಶುಭಾಶಂಸನೆಗೈಯ್ಯುವರು. ಎಸ್ ಎಸ್ ಎಲ್ ಸಿ ಹಾಗೂ ಪ್ಲಸ್ ಟು ತರಗತಿಯಲ್ಲಿ ಉತ್ತಮ ಅಂಕ ಪಡೆದ ವಿಧ್ಯಾರ್ಥಿಗಳನ್ನು ಅಭಿನಂದಿಸಲಾಗುವುದು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪೂವ ಮೂಲ್ಯ ಪೊಡಿಪ್ಪಳ್ಳ , ಕಲ್ಯಾಣಿ ಅಮ್ಮ ಭಂಡಾರಮನೆ, ಡಾ.ಶ್ರೀಧರ ಏತಡ್ಕ ಎಂಬವರನ್ನು ಸನ್ಮಾನಿಸಲಾಗುವುದು.ಬೀ ಸಂದರ್ಭ ಬಹುಮಾನ ವಿತರಣೆ, ಭಜನೆ, ಮಂಗಳಾರತಿ, ಪ್ರಸಾದವಿತರಣೆ ನಡೆಯಲಿದೆ.

