ಬದಿಯಡ್ಕ: ಕಾಸರಗೋಡಿನ ಬ್ಯಾಂಕಿಂಗ್, ವ್ಯಾಪಾರ, ಸಹಕಾರಿ ಸಂಸ್ಥೆ ಮತ್ತು ವಿದ್ಯಾಸಂಸ್ಥೆಗಳ ಸ್ಥಾಪನೆಯಲ್ಲಿ ಅಪಾರ ಸೇವೆ ಸಲ್ಲಿಸಿದ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರೂ, ವ್ಯವಸ್ಥಾಪಕರೂ ಆಗಿದ್ದ ದಿವಂಗತ ದಿ.ಖಂಡಿಗೆ ಶಾಮ ಭಟ್ಟರ ಜನ್ಮ ಶತಮಾನೋತ್ಸವವನ್ನು ಸೆಪ್ಟೆಂಬರ್ 29 ರಂದು ಭಾನುವಾರ ಆಚರಿಸಲಾಗುವುದು. ಈ ಕಾರ್ಯಕ್ರಮದ ಪೂರ್ವಭಾವಿ ಸಭೆ ಆ. 31 ರಂದು ಶನಿವಾರ ಅಪರಾಹ್ಣ 3.30ಕ್ಕೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಈ ಸಭೆಗೆ ಊರ ಪರವೂರ ವಿದ್ಯಾಭಿಮಾನಿಗಳು, ಸಹಕಾರಿ ಬಂಧುಗಳು ಆಗಮಿಸಿ ಸೂಕ್ತ ಸಲಹೆಗಳನ್ನು ನೀಡಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಮಹಾಜನ ವಿದ್ಯಾಸಂಸ್ಥೆಗಳ ಪ್ರಕಟಣೆ ತಿಳಿಸಿದೆ.
ದಿ.ಖಂಡಿಗೆ ಶಾಮ ಭಟ್ಟರ ಜನ್ಮ ಶತಮಾನೋತ್ಸವ ಆಚರಣೆ-ಆ. 31 ರಂದು ಪೂರ್ವಭಾವಿ ಸಭೆ
0
ಆಗಸ್ಟ್ 27, 2019