HEALTH TIPS

370ನೇ ವಿಧಿ ರದ್ದತಿ: ಅರ್ಜಿಯಲ್ಲಿನ ದೋಷಗಳನ್ನು ಸರಿಪಡಿಸಿ ಎಂದ ನ್ಯಾಯಾಲಯ, ವಿಚಾರಣೆ ಮುಂದೂಡಿದ ಸುಪ್ರೀಂ

 
              ನವದೆಹಲಿ: ಭಾರೀ ಕುತೂಹಲ ಮೂಡಿಸಿದ  370 ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರದ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.  ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಮೋದಿ ಸರ್ಕಾರ ಹೊರಡಿಸಿದ ಆದೇಶದ ವಿರುದ್ಧ ಅರ್ಜಿದಾರರು ಸಲ್ಲಿಸಿರುವ ಅರ್ಜಿಯಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಲಬೇಕು ಎಂದು ನ್ಯಾಯಾಲಯ ಹೇಳಿದೆ.
   ಶುಕ್ರವಾರ ವಿಚಾರಣೆಯನ್ನು ಪ್ರಾರಂಭಿಸಿದಾಗ ಅರ್ಜಿದಾರ ಎಂ.ಎಲ್.ಶರ್ಮಾ ಅವರನ್ನು ಉದ್ದೇಶಿಸಿ  ಅವರ ಅರ್ಜಿಗೆ ಯಾವುದೇ ಅರ್ಥವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
   'ಇದು ಯಾವ ರೀತಿಯ ಅರ್ಜಿ ಇದನ್ನು ವಜಾಗೊಳಿಸಬಹುದಿತ್ತು ಆದರೆ ಇದರೊಡನೆ ಇನ್ನೂ ಐದು ಮನವಿಗಳಿದೆ ಹಾಗಾಗಿ ಇದನ್ನು ಪರಿಗಣಿಸುತ್ತಿದ್ದೇವೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. 
      ಸಿಜೆಐ ರಂಜನ್ ಗೊಗೊಯ್ ಶರ್ಮಾ ಅವರ ಅರ್ಜಿ ವಿಚಾರಣೆ ನಡೆಸಲು ಅರ್ಧ ಗಂಟೆ ಕಾಲ ತೆಗೆದುಕೊಂಡಿದ್ದಾರೆ.ಆದರೆ ಈ ಸಂಬಂಧ ಏನನ್ನೂ ಂಆಡಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
     ಕಣಿವೆಯಲ್ಲಿನ ಮಾಧ್ಯಮ ನಿಬರ್ಂಧಗಳ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಲಯವು, 'ಸಂಪರ್ಕಿತ ಇತರ ವಿಷಯಗಳ ಜೊತೆಗೆ ಮಾಧ್ಯಮ ನಿಬರ್ಂಧಗಳ ಕುರಿತು ನಾವು ಗಮನಿಸುತ್ತೇವೆ' ಎಂದು ಹೇಳಿದರು
      ನ್ಯಾಯಾಲಯ ಮುಂದಿನ ವಿಚಾರಣೆಗಾಗಿ ಯಾವುದೇ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಿಲ್ಲ "ಕಣಿವೆಯಲ್ಲಿ "ಲ್ಯಾಂಡ್‍ಲೈನ್ ಸಂಪರ್ಕಗಳನ್ನು ಪುನಃಸ್ಥಾಪಿಸಲಾಗುತ್ತಿದೆ ಎಂದು ನಾವು ಕಂಡುಕೊಂಡಿದ್ದೇವೆ. ಇಂದು ಜಮ್ಮು ಕಾಶ್ಮೀರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಿಂದ ಕರೆ ಬಂದಿದೆ. ಮಾಧ್ಯಮಗಳ ಮೇಲಿನ ನಿಬರ್ಂಧವನ್ನು ತೆಗೆದುಹಾಕುವ ವಿಷಯದಲ್ಲಿ ನಾವು ಸ್ವಲ್ಪ ಸಮಯವನ್ನು ನೀಡಲು ಬಯಸುತ್ತೇವೆ"ಎಂದು ಹೇಳಿದರು.
     ಕಾಶ್ಮೀರದಲ್ಲಿ  ದಿನದಿಂದ ದಿನಕ್ಕೆ ಪರಿಸ್ಥಿತಿ ಸುಧಾರಿಸುತ್ತಿದೆ, ಕ್ರಮೇಣ ನಿಬರ್ಂಧಗಳನ್ನು ತೆಗೆದುಹಾಕಲಾಗುತ್ತಿದೆ" ಎಂದು ರಾಜ್ಯಕ್ಕೆ ಮಾಧ್ಯಮ ನಿಬರ್ಂಧಗಳನ್ನು ತೆಗೆದುಹಾಕಬೇಕೆಂದು ಕೋರಿ ಮತ್ತೊಂದು ಅರ್ಜಿಯ ವಿಚಾರಣೆಯಲ್ಲಿ ಹೇಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries