ಕಾಸರಗೋಡು: ನಗರದ ಇತಿಹಾಸ ಪ್ರಸಿದ್ಧವಾದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸೆ.2 ರಿಂದ 6 ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ 64 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಜರಗಲಿದೆ.
ಸೆ.2 ರಂದು ಬೆಳಗ್ಗೆ 9 ಕ್ಕೆ ನಾಗರಕಟ್ಟೆ ಶ್ರೀ ಶಾರದಾ ಭಜನಾಶ್ರಮದಿಂದ ವಾದ್ಯಘೋಷಗಳೊಂದಿಗೆ ತಂದು ಶ್ರೀ ಗಣೇಶ ವಿಗ್ರಹವನ್ನು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪ್ರಾಂಗಣದಲ್ಲಿ ಪ್ರತಿಷ್ಠೆ ನಡೆಯಲಿದೆ. ಮಧ್ಯಾಹ್ನ 12 ಕ್ಕೆ ಧ್ವಜಾರೋಹಣ, 1 ಕ್ಕೆ ಪೂಜೆ, ಸಂಜೆ 5 ರಿಂದ ಭಜನೆ, 6.30 ಕ್ಕೆ ಸತ್ಯವಿನಾಯಕ ಪೂಜೆ, ರಾತ್ರಿ 9 ಕ್ಕೆ ಮಹಾಪೂಜೆ, ಸೆ.3 ರಂದು 8.30 ಕ್ಕೆ ಶ್ರೀ ಮಹಾಗಣಪತ್ಯಥರ್ವಶೀರ್ಷ ಸಹಸ್ರಮೋದಕ ಯಾಗ, ರಾತ್ರಿ 7 ಕ್ಕೆ ಭಕ್ತಿಗಾನ ಮೇಳ, ಸೆ.4 ರಂದು ರಾತ್ರಿ 7 ಕ್ಕೆ ಕಣ್ಣೂರು ಕಳಿವೆಟ್ಟಂ ಅರ್ಪಿಸುವ `ತಿರಯಾಟ್ಟಂ' ನಡೆಯುವುದು.
ಸೆ.5 ರಂದು ಸಂಜೆ 6.30 ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು, ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಎಂ.ಟಿ.ದಿನೇಶ್ ಅಧ್ಯಕ್ಷತೆ ವಹಿಸುವರು. ಮೂಲಂ ತಿರುನಾಳ್ ಪಿ.ಜಿ.ಶಶಿ ಕುಮಾರ ವರ್ಮ ತಂಬುರಾನ್ ಮುಖ್ಯ ಭಾಷಣ ಮಾಡುವರು. ರಾತ್ರಿ 8.30 ಕ್ಕೆ ಮಹಾಪೂಜೆ, ಹೂವಿನ ಪೂಜೆ, ರಂಗ ಪೂಜೆ, ಸೆ.6 ರಂದು ಸಂಜೆ 4.30 ಕ್ಕೆ ಸಮಾರೋಮ ಸಮಾರಂಭ ನಡೆಯಲಿದೆ. ಡಾ| ಪ್ರಸಾದ್ ಮೆನೋನ್ ಅಧ್ಯಕ್ಷತೆ ವಹಿಸುವರು. ಡಾ|ಉಷಾ ಮೆನೋನ್ ಬಹುಮಾನ ವಿತರಿಸುವರು. 6.30 ಕ್ಕೆ ಧ್ವಜಾವತರಣ, ಮಹಾಪೂಜೆ, ಶ್ರೀ ಮಹಾಗಣಪತಿಯ ವಿಗ್ರಹ ವಿಸರ್ಜನಾ ಮೆರವಣಿಗೆ ಜರಗಲಿದೆ.


