ಬದಿಯಡ್ಕ: ಬಾಲಗೋಕುಲ ಶ್ರೀ ಕೃಷ್ಣ ಸಮಿತಿಯ 8 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಸಭಾ ಕಾರ್ಯಕ್ರಮವನ್ನು ಉದ್ಯಮಿ ಕೆ.ವಿ.ಅಭಿಲಾಷ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ದಾಮೋದರ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದರು. ಕೆ.ಗುರು ಪ್ರಸಾದ್ ರೈ ಸ್ವಾಗತಿಸಿ, ಸುಜಾತ ಮೋಹನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಬಾಲಗೋಕುಲ ಮಕ್ಕಳು ಪ್ರಾರ್ಥನೆ ಹಾಡಿದರು. ಜಯರಾಮ್ ಚೆಟ್ಟಿಯಾರ್ ಬದಿಯಡ್ಕ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕವಿತಾ ಕಿಶೋರ್ ವಂದಿಸಿದರು. ಶ್ರೀಕೃಷ್ಣ ವೇಷಧಾರಿಗಳ ಶೋಭಾಯಾತ್ರೆ ನಡೆಯಿತು.


