ಮಂಜೇಶ್ವರ: ನಾಲ್ಕು ದಿನಗಳಕಾಲ ಪೊಸೋಟ್ ಮಳ್ಹರ್ ಕ್ಯಾಂಪಸಿನಲ್ಲಿ ನಡೆದ ಖಾಝಿ ಸಯ್ಯಿದ್ ಮುಹಮ್ಮದ್ ಉಮರುಲ್ ಫಾರೂಖ್ ಅಲ್-ಬುಖಾರಿಯವರ ನಾಲ್ಕನೇ ಉರೂಸ್ ಮುಬಾರಕ್ ಸಮಾರಂಭ ಭಾನುವಾರ ಸಂಪನ್ನಗೊಂಡಿತು. ಕರ್ನಾಟಕ ಹಾಗೂ ಕೇರಳದಿಂದ ಆಗಮಿಸಿದ ಸಾವಿರಾರು ಜನರಿಗೆ ಅನ್ನದಾನ ನೀಡಲಾಯಿತು.
ಉರೂಸ್ ಮುಬಾರಕ್ ಸಮಾರೋಪ ಮಹಾ ಸಮ್ಮೇಳನ ಸಯ್ಯಿದ್ ಅಲಿ ಬಾಫಖಿ ತಂಙಳ್ ಕೊಯಿಲಾಂಡಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು. ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹೀಂ ಖಲೀಲುಲ್ ಬುಖಾರಿಯವರ ಅದ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭವನ್ನು ತಾಜುಶ್ಶರೀಅ ಎಂ ಅಲಿಕುಂಞ ಉಸ್ತಾದ್ ಶಿರಿಯ ಉದ್ಘಾಟಿಸಿದರು. ಮೌಲಾನಾ ಪೆರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಬಳಿಕ ಮಂಗಳೂರು ಭಾಗದಿಂದ ಸಂದಲ್ ಮೆರವಣಿಗೆಯೊಂದಿಗೆ ಉರೂಸ್ ಸಮಾರಂಭಕ್ಕೆ ಆಗಮಿಸಿದ ಆಹಾರ ಸಾಮಾಗ್ರಿಗಳನ್ನು ಸ್ವೀಕರಿಸಲಾಯಿತು. ಸಂದಲ್ ಮೆರವಣಿಗೆಯಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಆಗಮಿಸಿದ್ದರು.
ಡಾ. ಮುಹಮ್ಮದ್ ಕುಂಞ ಸಖಾಫಿ ಕೊಲ್ಲಂ ಸಂಸ್ಮರಣಾ ಭಾಷಣ ಮಾಡಿದರು. ಮಲ್ ಹರ್ ಸಂಸ್ಥೆಯ ರೂವಾರಿ ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ, ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಎ.ಪಿ ಅಬ್ದುಲ್ಲ ಮುಸ್ಲಿಯಾರ್ ಮಾಣಿಕ್ಕೋತ್, ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್, ಸಯ್ಯಿದ್ ಹಬೀಬುರಹ್ಮಾನ್ ಅಲ್ ಬುಖಾರಿ, ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ, ಸಯ್ಯಿದ್ ಸುಹೈಲ್ ಅಸ್ಸಖಾಫ್ ತಂಙಳ್ ಮಡಕ್ಕರೆ, ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಮುಹಿಮ್ಮಾತ್, ಸಯ್ಯಿದ್ ಶಿಹಾಬುದ್ದೀನ್ ಅಲ್ ಮಶ್ಹೂರ್ ತಲಕ್ಕಿ ಮುಹಮ್ಮದ್ ಸ್ವಾಲಿಹ್ ಸಅದಿ ತೃಕರಿಪ್ಪುರ್, ಬಿ.ಎಸ್ ಅಬ್ದುಲ್ಲ ಕುಂಞÂ ಫೈಝಿ, ಪಳ್ಳಂಗೋಡ್ ಅಬ್ದುಲ್ ಖಾದಿರ್ ಮದನಿ, ಮೊದಲಾದ ಪ್ರಮುಖ ವಿದ್ವಾಂಸರು, ಸಾಮಾಜಿಕ, ಸಾಂಸ್ಕøತಿಕ ನೇತಾರರು ಸಮಾರಂಭದಲ್ಲಿ ಪಾಲ್ಗೊಂಡರು.

