ಮಂಜೇಶ್ವರ: ಮೀಯಪದವಿನ ಮಾಸ್ಟರ್ಸ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್‍ನ 8ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಮೀಯಪದವು ಶಾಲಾ ಮೈದಾನದಲ್ಲಿ ಜರಗಿತು. ಕಾರ್ಯಕ್ರಮವನ್ನು ಮೀಯಪದವು ಆಶಾ ಕ್ಲಿನಿಕ್‍ನ ವೈದ್ಯರಾದ ಡಾ.ಎಸ್.ಎನ್ ಭಟ್ ಇವರು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶ್ರೀ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಹಾಗೂ ಕ್ಲಬ್‍ನ ಗೌರವಾಧ್ಯಕ್ಷ ಪುಷ್ಪರಾಜ್ ಶೆಟ್ಟಿ ಶುಭ ಹಾರೈಸಿದರು. ಕ್ಲಬ್ ಸದಸ್ಯ ರಘುವೀರ್ ರಾವ್ ಸ್ವಾಗತಿಸಿ, ವಾರ್ಷಿಕ ವರದಿ ಮಂಡಿಸಿದರು. ಕ್ಲಬ್ ಸದಸ್ಯ ಕಿರಣ್ ಕುಮಾರ್ .ಸಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕಟ್ಟೆ ಫ್ರೆಂಡ್ಸ್ ಮುಡಿಪು ಇವರ ನಾಸಿಕ್ ಬ್ಯಾಂಡ್ ಆಕರ್ಷಣೆಯೊಂದಿಗೆ ಶ್ರೀಕೃಷ್ಣ ವೇಷ ಮೆರೆವಣಿಗೆ ಮೀಯಪದವು ವಠಾರದಲ್ಲಿ ಜರಗಿತು. ಬಳಿಕ ಶ್ರೀಕೃಷ್ಣ ವೇಷ ಸ್ಪರ್ಧೆ, ಮಹಾಭಾರತ ರಸಪ್ರಶ್ನೆ ಸ್ಪರ್ಧೆ, ಭಕ್ತಿ ಗೀತೆ ಸ್ಪರ್ಧೆ ಹಾಗೂ ಹಲವು ಆಟೋಟ ಸ್ಪರ್ಧೆಗಳು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೈದಾನದಲ್ಲಿ ಜರಗಿತು.
ಮೀಯಪದವಿನ ಮಾಸ್ಟರ್ಸ್ ವಾರ್ಷಿಕೋತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ
0
ಆಗಸ್ಟ್ 26, 2019