HEALTH TIPS

ಪೆರ್ಲ ನೇತಾಜಿ ಸಾವ9ಜನಿಕ ಗ್ರಂಥಾಲಯದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಕಾವ್ಯ ಲಹರಿ ಸ್ಪರ್ಧೆ-2019 ಸಂಪನ್ನ-ಸಾಹಿತ್ಯ ರಚನೆಗಳು ಚರ್ಚೆಗೊಳಗಾದಾಗ ಸಮಾಜ ಪರಿವರ್ತನೆಯ ಹಾದಿ ಸುಗಮ-ಸುಧಾಕರ ಮಾಸ್ತರ್

     
       ಪೆಲ9: ಅಂದು ಸ್ವಾತಂತ್ರ ಸಂಗ್ರಾಮಕ್ಕೆ ಪ್ರೇರಣಾ ಶಕ್ತಿಯಾದ  ಸಾಹಿತ್ಯ ಇಂದು ಸಮಾಜದ  ಭಾತೃತ್ವಕ್ಕೆ ಪೂರಕವಾದ ಶಕ್ತಿಯಾಗಿ ಸೆಟೆದು ನಿಲ್ಲಬೇಕಿದೆ. ಸಂವಿಧಾನಕ್ಕೆ ಗೌರವ ನೀಡಿ ಈ ಮಣ್ಣಿನಲ್ಲಿ ಬದುಕುವುದೇ ದೇಶಪ್ರೇಮ.ಸಾಹಿತ್ಯಗಾರರ ರಚನೆಗಳು ಪ್ರಸ್ತುತ ಜರುಗುವ ಚಚಾ9 ವಿಷಯಗಳೇ ಪ್ರಧಾನ ವಸ್ತುವಾದಾಗ ಸಮಾಜ ಚಿಂತಿಸಿ ತೀರ್ಮಾನಿಸುತ್ತದೆ. ತನ್ಮೂಲಕ ಮೌಲ್ಯಧಾರಿತ ಸಾಹಿತ್ಯ ಪರಂಪರೆ ಬೆಳೆದು ಬರುತ್ತದೆ. ಸಮಾಜ ಸುಧಾರಕರ ಕೈಂಕರ್ಯದ ಫಲವಾಗಿ  ವಿವಿಧತೆಯಲ್ಲಿ ಏಕತೆಯನ್ನು ಕಾಣುವ  ಭಾರತ ನಮ್ಮ ಮುಂದಿದೆ. ಅದರ ಜೀವಂತಿಕೆ ಸದಾ ಹರಿಯುತ್ತಿರಲಿ,ಆ ಮೂಲಕ ಸುಭದ್ರ ಸಮಾಜ ನಿಮಿ9ಸೋಣ ಎಂದು ಪೆಲ9 ನೇತಾಜಿ ಸಾವ9ಜನಿಕ ಗ್ರಂಥಾಲಯ 73ನೇ  ಸ್ವಾತಂತ್ರೋತ್ಸವ ಅಂಗವಾಗಿ ಆಯೋಜಿಸಿದ ವಿಭಿನ್ನ ಕಾಯ9ಕ್ರಮ 'ರಾಷ್ಟ್ರೀಯ ಭಾವೈಕ್ಯತಾ ಕಾವ್ಯ ಲಹರಿ -2019'ನ್ನು  ಎಣ್ಮಕಜೆ ಗ್ರಂಥಾಲಯಗಳ ನೇತೃತ್ವ ಸಮಿತಿ ಅಧ್ಯಕ್ಷ ಸುಧಾಕರ ಮಾಸ್ತರ್ ಕಾಟುಕುಕ್ಕೆ ಉದ್ಘಾಟಿಸಿ ಮಾತಾನಾಡಿದರು.
        ಕಾಯ9ಕ್ರಮದ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಕವಿತೆಯಲ್ಲಿ ಪ್ರತಿಮೆ, ರೂಪಕ, ಅಲಂಕಾರಗಳನ್ನು ಒಳಗೊಂಡ ಭಾವ ಕೇಂದ್ರಿತ ಐಕ್ಯತೆಯಾದಾಗ ಕವಿತೆಯ ಮೌಲ್ಯವನ್ನು ಶ್ರೇಷ್ಠ ಮಟ್ಟಕ್ಕೆ  ಏರುತ್ತದೆ. ಸಾಮಾಜಿಕ ಪರಿವರ್ತನೆಯೇ ಕವಿತೆಯ ಮೂಲ ಆಶಯವಾಗಿದ್ದು, ಅದರಿಂದ ಹಿತವನ್ನು ಉಂಟುಮಾಡುವುದೇ ಸಾವ9ಕಾಲಿಕ ಸತ್ಯವಾಗಿದೆ.  ಜೊತೆಗೆ ಅದು ಭಾವ ಸ್ಪುರಣದಿಂದ ಮಾಧುರ್ಯದ ಹೃದಯಗಳನ್ನು ಉಂಟು ಮಾಡುತ್ತದೆ. ಆದ್ದರಿಂದ ಕವಿಗಳು ದುಡಿಯುವ ಕೈಗಳ ಚೇತನವಾಗುವಲ್ಲಿಂದ ಗಡಿ ಕಾಯುವ ಯೋಧರ ವರೆಗೂ ದೇಶಪ್ರೇಮದ ಕವಿತೆಗಳ ಮಹಾಸೃಷ್ಟಿಯಾಗುತ್ತಿದ್ದರೆ ಮುಂದಿನ ಜನಾಂಗಕ್ಕೆ  ನೆಲ ಜನ ಸಂಬಂಧದ ಹೊಸ  ದಿಶೆಯಾಗಬಹುದು. ಸ್ವಾತಂತ್ರ ದಿನದ ಮಹತ್ವವನ್ನು ಅಥ9ಪೂಣ9ವಾಗಿ ಆಚರಿಸುತ್ತಿರುವ ಈ ಗ್ರಂಥಾಲಯದ ನಡೆ ಪ್ರಶಂಸನೀಯ ಎಂದು ಕವಿತೆಗಳ ಬಗ್ಗೆ ವಿಮಶಿ9ಸಿ ಅವರು ಮಾತನಾಡಿದರು. ಒಂದು ಆಶಯ ಹಲವು ಕವಿತೆಗಳು ಎಂಬ ಸವಾಲನ್ನು ಸ್ವೀಕರಿಸಿ ದ.ಕ ಕನ್ನಡ ಕಾಸರಗೋಡು ಜಿಲ್ಲೆಯ ಹಲವಾರು ಕವಿಗಳು ಸ್ಪಧಾ9ಕಣದಲ್ಲಿ ಭಾಗವಹಿಸಿದರು.
      ಶ್ರೀನಿವಾಸ ಪೆರಿಕ್ಕಾನ ಸ್ವಗ9ರವರ 'ಅರಿ' ಎಂಬ ಕವನ ಪ್ರಥಮ ಸ್ಥಾನ ಪಡೆಯಿತು. ನ್ಯಾಯವಾದಿ ಪರಿಮಳ ರಾವ್ ಮಂಗಳೂರುರವರ
'ತೆರೆ ಸರಿಯಲಿ' ದ್ವಿತೀಯ ಸ್ಥಾನ ಹಾಗೂ ದಯಾನಂದ ರೈ ಕಳ್ವಾಜೆಯವರ 'ಸ್ವಾತಂತ್ರ್ಯವೆಂದರೆ..' ಕವನ ತೃತೀಯ ಸ್ಥಾನ ಪಡೆಯಿತು.
     ವಿಶೇಷ ಕವನ ಬಹುಮಾನ ಪ್ರೇಮಾ ಉದಯಕುಮಾರ್ ಸುಳ್ಯರವರ 'ಐಕ್ಯತೆ ಹರಿಯಲಿ' ಕವನಕ್ಕೆ ಸಿಕ್ಕಿತ್ತು. ಪುರುಷೋತ್ತಮ ಭಟ್ ರವರ 'ಆರದಿರಲಿ', ನಾರಾಯಣ ಕೆ ಕುಂಬ್ರ ಪುತ್ತೂರುರವರ 'ಐತಿಹಾಸಿಕ ಶುಭ ಘಳಿಗೆ', ಪ್ರಮೀಳಾ ಚುಳ್ಳಿಕಾನರವರ 'ಇರಲಿ ಭಾವೈಕ್ಯತೆ', ರಿತೇಶ್ ಕಿರಣ್ ಕಾಟುಕುಕ್ಕೆರವರ 'ದಿಟ್ಟ ಹೆಜ್ಜೆ', ನಿಮ9ಲ ಶೇಷಪ್ಪ ಖಂಡಿಗೆಯವರ 'ಭಾರತೀಯರು' ಸಂದೀಪ್ ಬದಿಯಡ್ಕರವರ 'ಮಳೆ' ಹಾಗೂ ಸಚಿತಾ ರೈ ಪೆಲ9ರವರ 'ಸ್ವಾತಂತ್ರ' ಕವನಗಳು ತೀಪು9ಗಾರರ ಮೆಚ್ಚುಗೆ ಪ್ರಶಸ್ತಿಗೆ ಭಾಜನವಾಯಿತು.  ಸೂಕ್ತವಾದ ಮಾನದಂಡಗಳಲ್ಲಿ ಅಳೆದು ತೂಗಿ ತೀಪು9 ನೀಡುವಲ್ಲಿ  ಕವಿ  ಮಧುರಕಾನನ ಗಣಪತಿ ಭಟ್, ಕಾದಂಬರಿಗಾತಿ9 ಕವಿ ರಾಜಶ್ರೀ. ಟಿ. ರೈ, ಹಾಗೂ ಶಿಕ್ಷಕ ಸುಧಾಕರ ಕಾಟುಕುಕ್ಕೆ ಸಹಕರಿಸಿದರು. ಹಿರಿಯ ಕವಿ ಹರೀಶ್ ಪೆಲ9, ಎಣ್ಮಕಜೆ ಪಂಚಾಯತು ಕಾಯ9ದಶಿ9 ಲತೀಫ್, ಚೇತನಾ ಕುಂಬಳೆ, ಸುಭಾಶ್ ಪೆಲ9, ಆನಂದ ರೈ ಅಡ್ಕಸ್ಥಳ ಉಪಸ್ಥಿತರಿದ್ದರು. ಗ್ರಂಥಾಲಯ ಅಧ್ಯಕ್ಷ ರಾಮಕೃಷ್ಣ ರೈ ಕುದ್ವ ಅಧ್ಯಕ್ಷತೆ ವಹಿಸಿದ್ದರು. ಕಾಯ9ದಶಿ9 ಉದಯ ಸಾರಂಗ ಸ್ವಾಗತಿಸಿ, ಉಪಾಧ್ಯಕ್ಷ ಸಂಜೀವ ಮಾಸ್ತರ್ ಸಿ.ಯಚ್. ವಂದಿಸಿದರು.
    ಅಭಿಮತ: 
      "ಪದಗಳ ಜೋಡಣೆಯ ಮೂಲಕ ಕಾವ್ಯ ಕಟ್ಟುವ ಶೈಲಿಯೇ ಸೊಗಸು. ಅದರ ವಾಚಿಸುವ ಗೇಯತೆಯ ರಸ ಸ್ವಾಧನೆಯ ಮೂಲಕ ಕಾವ್ಯದ ವಸ್ತು ಮನಮುಟ್ಟುತ್ತದೆ.ಗುಣಮಟ್ಟದ ಕವಿತೆಗಳ  ನಿರೀಕ್ಷೆ ಮತ್ತು ಉದಯೋನ್ಮುಖ ಕವಿಗಳನ್ನು ಪೋತ್ಸಾಹಿಸುವ ಉದ್ದೇಶದಿಂದ ಕಾವ್ಯ ವಾಚನ ಸ್ಪಧ9ಯನ್ನು ಹಮ್ಮಿಂಕೊಂಡೆವು. ರಾಷ್ಟ್ರೀಯ ಭಾವೈಕ್ಯತೆಯೆಂಬ ಒಂದು ದೇಶ, ಒಂದು ಆಶಯದಲ್ಲಿ ಹಲವಾರು ಸೃಜನಾತ್ಮಕ ವಿಭಿನ್ನ ಕವಿತೆಗಳನ್ನು ನಾಡಿನ ಕವಿಗಳು ಮಂಡಿಸಿದಾಗ ಶ್ರೇಷ್ಠ ಕವಿ ಪರಂಪರೆ ಮತ್ತು ಸ್ಪಧ9ಯಾದರೂ ಕವಿತೆಯ ಅರಿವಿನ ಸೌಹಾಧ9ಯುತ ಕಾಯ9ಕ್ರಮವಾಗಿ ರೂಪುಗೊಂಡಿತು ಉತ್ತಮ ಸ್ಪಂದನೆ ಲಭಿಸಿದೆ".

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries