ಮಂಜೇಶ್ವರ: ಮೂಡಂಬೈಲು ಸರ್ಕಾರಿ ಶಾಲೆಯಿಂದ ಮುಖ್ಯೋಪಾಧ್ಯರಾಗಿ ಮುಂಭಡ್ತಿ ಹೊಂದಿರುವ ಅಧ್ಯಾಪಕರಿಗೆ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು. ಈ ಶಾಲೆಯಲ್ಲಿ ತಮ್ಮ ವೃತ್ತಿ ಜೀವನದ ಹಲವು ವರ್ಷಗಳನ್ನು ಶಾಲೆಯ ಅಭಿವೃದ್ಧಿಗಾಗಿ ಮುಡಿಪಾಗಿಟ್ಟ ಪದ್ಮನಾಭ ಹಾಗೂ ಸುಖೇಶ್ ಮುಂಭಡ್ತಿ ಹೊಂದಿದ್ದಾರೆ. ಅವರನ್ನು ಶಾಲಾ ಶಿಕ್ಷಕ ಹಾಗೂ ಸಿಬಂದಿ ವರ್ಗದವರಿಂದ ಶಾಲು ಹೊದಿಸಿ ಸ್ಮರಣಿಕೆ ಹಾಗೂ ಫಲಪುಷ್ಪಗಳನ್ನು ನೀಡಿ ಅಭಿನಂದಿಸಲಾಯಿತು. ನಿವೃತ್ತ ಅಧ್ಯಾಪಕ ಶಿವರಾಮ ಪದಕಣ್ಣಾಯ ಅಭಿನಂದಿಸಿದರು. ರಕ್ಷಕ-ಶಿಕ್ಷಕ ಸಂಘ, ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಜೋರ್ಜ್ ಕ್ರಾಸ್ತ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪದ್ಮನಾಭ ಅವರ ಕುರಿತು ಮೋಹಿನಿ ಟೀಚರ್, ಸುಖೇಶ್ ಅವರ ವೃತ್ತಿಜೀವನದ ಕುರಿತು ಶಿಕ್ಷಕ ಹಸನ್ ಪರಿಚಯಿಸಿದರು. ಪ್ರಶಾಂತ ಶರ್ಮ ಕಾರ್ಯಕ್ರಮ ನಿರೂಪಿಸಿ, ಶಿವಪ್ರಸಾದ್ ವಂದಿಸಿದರು.
ಬೀಳ್ಕೊಡುಗೆ ಸಮಾರಂಭ
0
ಆಗಸ್ಟ್ 26, 2019