ಮಂಜೇಶ್ವರ: ಇಲ್ಲಿನ ಎಸ್.ಎ.ಟಿ. ಪ್ರೌಢ ಶಾಲೆಯಲ್ಲಿ ಸಂಸ್ಕøತ ದಿನಾಚರಣೆ ಸಂಭ್ರಮದಲ್ಲಿ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯ ಮುರಳೀಕೃಷ್ಣ ಅವರು ದೀಪ ಬೆಳಗಿಸಿ ಸಂಸ್ಕøತ ಭಾಷೆಯ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ಎಸ್.ಆರ್.ಜಿ. ಸಂಚಾಲಕ ನಾರಾಯಣ ಹೆಗಡೆ, ಸಿಬ್ಬಂದಿ ಕಾರ್ಯದರ್ಶಿ ಈಶ್ವರ ಮಾಸ್ತರ್, ಕಲಾ ಅಧ್ಯಾಪಕ ಜಯಪ್ರಕಾಶ್ ಶೆಟ್ಟಿ ಬೇಳ,ನಾಗೇಶ ಮಾಸ್ಟರ್, ಶ್ಯಾಮ್‍ಕೃಷ್ಣ ಮಾಸ್ತರ್ ಶುಭ ಹಾರೈಸಿದರು. ವಿದ್ಯಾರ್ಥಿಗಳಿಂದ ಸಂಸ್ಕøತ ಪುಸ್ತಕ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಿಂದ ರಾಮಾಯಣ ವಾಚನ ಪ್ರವಚನ, ಭಾಷಣ, ಸಮೂಹ ಗಾನ ಇತ್ಯಾದಿ ಕಾರ್ಯಕ್ರಮಗಳು ನಡೆಯಿತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಳೆದ ವರ್ಷದ ರಾಮಾಯಣ ಪರೀಕ್ಷೆಯಲ್ಲಿ ಮಂಜೇಶ್ವರ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಚೈತ್ರಾ ಅವರನ್ನು ಸಮ್ಮಾನಿಸಲಾಯಿತು. ವಿದ್ಯಾರ್ಥಿನಿ ಪೂಜಾ ಸ್ವಾಗತಿಸಿ, ರಕ್ಷಿತಾ ವಂದಿಸಿದರು. ಶಮಿತಾ ಕಾರ್ಯಕ್ರಮವನ್ನು ನಿರ್ವಹಿಸಿದರು.


