HEALTH TIPS

ಬದಿಯಡ್ಕದಲ್ಲಿ ರಾಮಾಯಣ ವಾರಾಚರಣೆ ಆರಂಭ-ಅವತಾರ ಪುರುಷರ ಮೆಲುಕು ಬದುಕಿನ ಸುಸೂತ್ರತೆಗೆ ಬೆಳಕಿಂಡಿ-ಶಾರದಾ ಎಸ್.ಭಟ್ ಕಾಡಮನೆ


    ಬದಿಯಡ್ಕ: ಪರಂಪರೆಯ ಮಾಹಿತಿ ಕೊರತೆಯು ಭಾರೀ ಅಪಾಯಕಾರಿಯಾದುದು. ವ್ಯಕ್ತಿ ಶಕ್ತಿಯಾಗಿ ರೂಪುಗೊಳ್ಳುವಲ್ಲಿ ಸಮುದಾಯ, ಧರ್ಮ, ರಾಷ್ಟ್ರಪ್ರಜ್ಞೆಗಳು ಬೆಳಕಿಂಡಿಯಾಗಿ ನೆರವಾಗುತ್ತದೆ. ಅವತಾರ ಪುರುಷರ ಜೀವನಗಾಥೆಗಳ ನಿರಂತರ ಮೆಲುಕು ಬದುಕಿನ ಸುಲಲಿತ ನಿರ್ವಹಣೆಗೆ ನೆರವಾಗುತ್ತದೆ ಎಂದು ಶಿಕ್ಷಕಿ, ಸಾಹಿತಿ ಶಾರದಾ ಎಸ್.ಭಟ್ ಕಾಡಮನೆ ಅವರು ತಿಳಿಸಿದರು.
    ರಾಮಾಯಣ ಮಾಸಾಚರಣೆ ಸಮಿತಿ ಬದಿಯಡ್ಕ ಇದರ ನೇತೃತ್ವದಲ್ಲಿ ಆಯೋಜಿಸಲಾದ ರಾಮಾಯಣ ವಾರಾಚರಣೆಯನ್ನು ಶನಿವಾರ ಅಪರಾಹ್ನ ಬದಿಯಡ್ಕದ ಶ್ರೀರಾಮ ಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
    ಸಂಸ್ಕøತಿಯ ಬೇರುಗಳನ್ನು ಗಟ್ಟಿಗೊಳಿಸುವ ಕಾರ್ಯಚಟುವಟಿಕೆಗಳು ನಿತ್ಯ ನಿರಂತರವಾಗಿ ನಡೆಯುತ್ತಿರಬೇಕು ಎಂದ ಅವರು ಸಮಗ್ರ ಪಾರಂಪರಿಕ ಶಿಕ್ಷಣ, ಮಾರ್ಗದರ್ಶನಗಳು ಸಮಾಜದ ಸುಸ್ಥಿರತೆಗೆ ಕಾರಣವಾಗುತ್ತದೆ ಎಂದರು.
     ಯೋಗಗುರು ಸೂರ್ಯನಾರಾಯಣ ವಳಮಲೆ ಅವರು ರಾಮತಾರಕ ಮಂತ್ರದ ಮೂಲಕ ಈ ಸಂದರ್ಭ ಚಾಲನೆ ನೀಡಿದರು.ವಿದ್ಯಾಭ್ಯಾಸ ಇಲಾಖೆಯ ನಿವೃತ್ತ ಅಧೀಕ್ಷಕ ಕೇಶವಪ್ರಸಾದ್ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು. ಅಂತರಾಷ್ಟ್ರೀಯ ಯೋಗ ಶಿಕ್ಷಕ ವಿಜಯ ಗಣೇಶ್ ಕೋರಿಕ್ಕಾರು ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಯೋಗ ಶಿಕ್ಷಣ, ನಿತ್ಯ ಜೀವನದ ಬಳಕೆಯ ಬಗ್ಗೆ ಮಾಹಿತಿ ನೀಡಿದರು.
   ಸಮಾರಂಭದಲ್ಲಿ ರಾಷ್ಟ್ರೀಯ ಯೋಗ ತಂಡದ ಸದಸ್ಯೆ ಮತ್ತು ಬಹುಮಾನಿತೆ ಹಾಗೂ ಕೇರಳ ಯೋಗ ತಂಡದ ಸದಸ್ಯೆ ಕು.ಐಶ್ವರ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಲಕ್ಷ್ಮಣ ಪ್ರಭು ಕರಿಂಬಿಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಕು.ಐಸ್ವರ್ಯ ಮತ್ತು ತಂಡದವರಿಂದ ವೈವಿಧ್ಯಮಯ ಯೋಗ, ನೃತ್ಯ ಯೋಗಗಳ ಪ್ರದರ್ಶನ ನಡೆಯಿತು. ಯೋಗಗುರು ಸೂರ್ಯನಾರಾಯಣ ವಳಮಲೆ ಹಾಗೂ ಪ್ರಭಾವತಿ ಕೆದಿಲಾಯ ಪುಂಡೂರು ಸಹಕರಿಸಿದರು.
    ಭಾನುವಾರ ನಡೆದ ಎರಡನೇ ದಿನದ ಕಾರ್ಯಕ್ರಮವನ್ನು ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಉದ್ಘಾಟಿಸಿದರು. ಹಿರಿಯ ಧಾರ್ಮಿಕ ಮುಂದಾಳು, ಉದ್ಯಮಿ ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕಿ ಎಚ್.ಸರಸ್ವತಿ ಉಪಸ್ಥಿತರಿದ್ದರು. ಬಳಿಕ ವಿದುಷಿಃ ವಾಣೀ ಪ್ರಸಾದ್ ಕಬೆಕ್ಕೋಡು ಇವರ ಶಿಷ್ಯೆ ಅಮೃತೇಶ್ವರಿ ಚಾಲತ್ತಡ್ಕ ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಿತು. ಲಕ್ಷ್ಮಣ ಪ್ರಭು ಕರಿಂಬಿಲ, ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಮೊದಲಾದವರು ಸಹಕರಿಸಿದರು.
    ಇಂದು(ಸೋಮವಾರ) ಅಪರಾಹ್ನ 3ಕ್ಕೆ ನಡೆಯಲಿರುವ ಮೂರನೇ ದಿನದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಜಯಲಕ್ಷ್ಮೀ ಮವ್ವಾರು ಅಧ್ಯಕ್ಷತೆ ವಹಿಸುವರು. ನಿವೃತ್ತ ಉಪಜಿಲ್ಲಾ ವಿದ್ಯಾಧಿಕಾರಿ ಕೆ.ಕೈಲಾಸಮೂರ್ತಿ ಉದ್ಘಾಟಿಸುವರು. ಅಂತರಾಷ್ಟ್ರೀಯ ಚಿತ್ರ ಕಲಾವಿದ ಪಿ.ಎಸ್.ಪುಣಿಚಿತ್ತಾಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಸಮಾರಂಭದಲ್ಲಿ ರಂಗಸಿರಿ ಸಾಂಸ್ಕøತಿಕ ವೇದಿಕೆ ಬದಿಯಡ್ಕ ಇವರಿಂದ ರಾಮನಾಮ ಗಾನಾಮೃತ ಕಾರ್ಯಕ್ರಮವು ಡಾ.ಸ್ನೇಹಾ ಪ್ರಕಾಶ್ ಪೆರ್ಮುಖ ಇವರ ನಿರ್ದೇಶನದಲ್ಲಿ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries