ಮುಳ್ಳೇರಿಯ: ಕೇರಳ ತುಳು ಅಕಾಡೆಮಿ ಸದಸ್ಯ, ರಂಗ ಕಲಾವಿದ ರವೀಂದ್ರ ರೈ ಮಲ್ಲಾವರ ಅವರು ಆಟಿ ಅಮಾವಾಸ್ಯೆಯ ಪ್ರಯುಕ್ತ ತಮ್ಮ ಯಶಸ್ವಿ ಸಂಸ್ಥೆಯಲ್ಲಿ ಕಷಾಯ ವಿತರಣೆ ನಡೆಸಿದರು. ಕಳೆದ ಹಲವು ವರ್ಷಗಳಿಂದ ಉಚಿತವಾಗಿ ಕಷಾಯ ವಿತರಿಸುತ್ತಿರುವ ಇವರು, ಸಾಮಾಜಿಕ, ಸಾಂಸ್ಕøತಿಕ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆಗಳ ಮೂಲಕ ಈಗಾಗಲೇ ಗಮನ ಸೆಳೆದು ಜನಮನ್ನಣೆಗೆ ಪಾತ್ರರಾಗಿದ್ದಾರೆ. ಪಾರಂಪರಿಕ ಜೀವನ ಕ್ರಮಗಳು, ಆಚರಣೆಗಳ ಬಗ್ಗೆ ಆಸಕ್ತರಾಗಿರುವ ಇವರು, ಪ್ರಕೃತಿಯೊಂದಿಗಿನ ಹೆಜ್ಜೆ ನೆಮ್ಮದಿ ನೀಡುತ್ತದೆ. ಹಿರಿಯ ತಲೆಮಾರುಗಳು ಅನುಸರಿಸಿಕೊಂಡು ಬಂದಿರುವ ಆಚರಣೆಗಳ ಹಿಂದಿನ ನಿಖರ ವೈಜ್ಞಾನಿಕತೆ ನಮ್ಮ ಅರಿವಿಗೆ ನಿಲುಕದಿರುವುದು ದುರ್ದೈವ. ಆದರೆ ನಿರ್ಲಕ್ಷ್ಯ ಸಲ್ಲದು ಎಂದು ತಿಳಿಸುತ್ತಾರೆ. ತೌಳವ ನಂಬಿಕೆಗಳ ಬೇರುಗಳು ವಿಸ್ತಾರವಾಗಿದ್ದು, ಹೊಸ ತಲೆಮಾರಿಗೆ ಅಂತಹ ಅರಿವನ್ನು ವಿಸ್ತರಿಸುವಲ್ಲಿ ಕೈಲಾದ ಪ್ರಯತ್ನ ತನ್ನದು ಎಂದು ತಿಳಿಸಿದ್ದಾರೆ.
ತುಳು ಅಕಾಡೆಮಿ ಸದಸ್ಯನಿಂದ ಆಟಿದ ಕಷಾಯ ವಿತರಣೆ
0
ಆಗಸ್ಟ್ 09, 2019