ಕಾಸರಗೋಡು: ಕಣ್ಣೂರು ವಿವಿಯ ಚಾಲ ಕ್ಯಾಂಪಸ್ ನಲ್ಲಿರುವ ಕನ್ನಡ ವಿಭಾಗದ ಆಶ್ರಯದಲ್ಲಿ ಪ್ರಸ್ತುತ ವರ್ಷ ಆರಂಭಗೊಳ್ಳಲಿರುವ ಒಂದು ವರ್ಷದ ತುಳು ಭಾಷಾ ಡಿಪ್ಲೊಮಾ ಪದವಿ ಪ್ರವೇಶಾತಿಗೆ ಇಂದು ಕೊನೆಯ ದಿನವಾಗಿದೆ. ಆಸಕ್ತರು 250 ರೂಗಳ ಅರ್ಜಿ ಶುಲ್ಕ ಪಾವತಿಸಿ ಇಂದು ಸಂಜೆಯ 3ರ ಮೊದಲು ಪ್ರವೇಶಾತಿ ಪಡೆಯಬಹುದು.
ಪ್ರತಿವಾರದ ಶನಿವಾರ ತರಗತಿಗಳು ನಡೆಯಲಿದ್ದು, 4600 ರೂ. ಡಿಪ್ಲೊಮಾ ತರಗತಿಯ ಒಟ್ಟು ಶುಲ್ಕವಾಗಿರುತ್ತದೆ. ಆಸಕ್ತರು ಡಾ.ರಾಜೇಶ್ ಬೆಜ್ಜಂಗಳ ನಿರ್ದೇಶಕರು ಕನ್ನಡ ವಿಭಾಗ, ಭಾರತೀಯ ಭಾಷಾ ಅಧ್ಯಯನಾಂಗ ಕಣ್ಣೂರು ವಿವಿ ಆವರಣ.ಚಾಲ.ವಿದ್ಯಾನಗರ. ಕಾಸರಗೋಡು. 9448732414 ಸಂಖ್ಯೆ ಸಂಪರ್ಕಿಸಬಹುದು.


