ಉಪ್ಪಳ: ಕೇರಳ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಪೈವಳಿಕೆ ನಗರ ಸರಕಾರಿ ಹಯರ್ ಸೆಕೆಂಡರಿ ಶಾಲೆಯಲ್ಲಿ ವಿಶ್ವ ಹದಿಹರೆಯ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.
ಹಿರಿಯ ಶಿಕ್ಷಕರಾದ ರವೀಂದ್ರನಾಥ್ ಕೆ ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿ ಮೋಲಿ ಥೋಮಸ್ ಮತ್ತು ಪ್ರಸನ್ನ ವಿದ್ಯಾರ್ಥಿಗಳಿಗೆ ತರಗತಿ ನಡೆಸಿದರು. ಐಸಿಡಿಎಸ್ ಸೂಪರ್‍ವೈಸರ್ ಅಜಿತ ವಿದ್ಯಾರ್ಥಿಗಳ ವಿಶೇಷಾಂಕವನ್ನು ಬಿಡುಗಡೆಗೊಳಿಸಿದರು. ದಿನಾಚರಣೆಯ ಅಂಗವಾಗಿ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕನ್ನಡ ಕಳಾರಚನೆಯಲ್ಲಿ ನಿಧಿ ಎ ಪ್ರಥಮ, ಹರ್ಷಲತ ಎಸ್ ದ್ವಿತೀಯ, ಮಲಯಾಳ ಕಥಾರಚನೆಯಲ್ಲಿ ಕದೀಜತ್ ಅಮೀಮ ಪ್ರಥಮ, ಶಾನಿಮ ದ್ವಿತೀಯ ಸ್ಥಾನಗಳಿಸಿದ್ದಾರೆ. ಶಾಲಾ ಕೌನ್ಸೆಲಿಂಗ್ ಟೀಚರ್ ಮಮತ ನೇತೃತ್ವ ನೀಡಿದರು. ಶಿಂಜಿ ಉಪಸ್ಥಿತರಿದ್ದರು.

