ಮುಳ್ಳೇರಿಯ: ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮತ್ತು ಸ್ವ-ಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜÉ ಶುಕ್ರವಾರ ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಬಳವಂತಡ್ಕ ಶ್ರೀ ವಿನಾಯಕ ನವಜೀವನ ಸಮಿತಿ ಇವರಿಂದ ಭಜನೆ, ಅನಂತರ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಇವರ ಮಾರ್ಗದರ್ಶನದಲ್ಲಿ ಮಂಜುನಾಥ ಉಡುಪ ಇವರ ಕಾರ್ಮಿಕತ್ವದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ ನಡೆಯಿತು.


