ಉಪ್ಪಳ: ಪಟೇಲ್ ಕೆ.ರಾಮಯ್ಯ ಬಲ್ಲಾಳ್ ಮತ್ತು ಲಕ್ಷ್ಮೀ ಅಮ್ಮ ಅವರ ಸ್ಮರಣಾರ್ಥ ಅವರ ಪುತ್ರ ರಾಜ್ಯಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರರಾದ ವಿಶ್ರಾಂತ ಅಧ್ಯಾಪಕ, ಸಿ.ರಾಘವ ಬಲ್ಲಾಳ್ ಅವರು ಪೈವಳಿಕೆಯಲ್ಲಿ ನಿರ್ಮಿಸಿದ ನೂತನ ಪುಸ್ತಕ ಭಂಡಾರ ಮತ್ತು ವಾಚನಾಲಯದ ಉದ್ಘಾಟನಾ ಸಮಾರಂಭ ಇಂದು(ಆ.25) ಬೆಳಿಗ್ಗೆ 10 ಗಂಟೆಗೆ ಪೈವಳಿಕೆ ನಗರದ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಠಾರದಲ್ಲಿ ನಡೆಯಲಿದೆ.
ಪುಸ್ತಕ ಭಂಡಾರದ ಉದ್ಘಾಟನೆಯನ್ನು ಪೈವಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ನಿರ್ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ತಿರುವನಂತಪುರದ ಕೇರಳ ವಿಶ್ವವಿದ್ಯಾಲಯದ ವಿಶ್ರಾಂತ ಅಧ್ಯಾಪಕ ಡಾ.ಎಂ.ರಾಮ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಪೈವಳಿಕೆ ಗ್ರಾಮ ಪಂಚಾಯತ್‍ನ ಉಪಾಧ್ಯಕ್ಷೆ ಸುನೀತ ವಲ್ಟಿ ಡಿ'ಸೋಜ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಪ್ರಸಾದ್ ರೈ ಕಯ್ಯಾರು, ಪೈವಳಿಕೆ ಗ್ರಾಮ ಪಂಚಾಯತು ಸದಸ್ಯೆ ರಾಬಿಯ, ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಎಸ್. ನಾರಾಯಣ ಭಟ್, ಕಾರ್ಯದರ್ಶಿ ಅಹಮ್ಮದ್ ಹುಸೇನ್ ಪಿ.ಕೆ., ವಿಶ್ರಾಂತ ಪ್ರಾಂಶುಪಾಲ ಪೆÇ್ರ.ಪಿ.ಎನ್. ಮೂಡಿತ್ತಾಯ, ಪೈವಳಿಕೆ ನಗರ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯ ಇಬ್ರಾಹಿಂ ಬಿ. ಅತಿಥಿಗಳಾಗಿ ಭಾಗವಹಿಸುವರು. ಸಿ.ರಾಘವ ಬಲ್ಲಾಳ್, ಉಷಾದೇವಿ ಸಿ.ಆರ್, ವಿಶ್ರಾಂತ ಮುಖ್ಯೋಪಾಧ್ಯಾಯಿನಿ ಶ್ರೀಕುಮಾರಿ ಟೀಚರ್, ಎ.ವಿ.ರಾಧಾಕೃಷ್ಣ ಬಲ್ಲಾಳ್, ಶ್ರಾವ್ಯಶ್ರೀ ಬಲ್ಲಾಳ್, ಡಾ.ರತ್ನಾಕರ ಮಲ್ಲಮೂಲೆ, ಪಿ.ರಾಮಚಂದ್ರ ಭಟ್ ಧರ್ಮತ್ತಡ್ಕ ಮೊದಲದವರು ಉಪಸ್ಥಿತರಿರುವರು.

