ಕಾಸರಗೋಡು: ಕೋಟೆಕಣಿಯ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲದ ಆಶ್ರಯದಲ್ಲಿ 4 ನೇ ವರ್ಷದ ಜನ್ಮಾಷ್ಟಮಿ ಮಹೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಶುಕ್ರವಾರ ನಡೆಯಿತು.
ಮಹೋತ್ಸವದ ಅಂಗವಾಗಿ ಅಣಂಗೂರು ಶ್ರೀ ಧೂಮಾವತೀ ದೈವಸ್ಥಾನದಿಂದ ವರ್ಣರಂಜಿತ ಶೋಭಾಯಾತ್ರೆ ನಡೆಯಿತು. ಈ ಸಂಬಂಧವಾಗಿ ಆಯೋಜಿಸಿದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಬಾಲಗೋಕುಲ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ನುಳ್ಳಿಪ್ಪಾಡಿ ಅಧ್ಯಕ್ಷತೆ ವಹಿಸಿದರು. ಜನರಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜನಾರ್ದನ ನಾಯ್ಕ್ ಸಿ.ಎಚ್. ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಾಲಗೋಕಲದಿಂದ ಎಳೆಯ ಮಕ್ಕಳನ್ನು ಸತ್ಪ್ರಜೆಯನ್ನಾಗಿ ರೂಪಿಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆ. ಶ್ರೀ ಕೃಷ್ಣನ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶ ಸೇವೆಯಲ್ಲಿ ತೊಡಗಬೇಕೆಂದರು.
ಮಾತೃ ಮಂಡಳಿ ಮಂಗಳೂರು ಗ್ರಾಮಾಂತರ ಅಧ್ಯಕ್ಷೆ ಮೀರಾ ಆಳ್ವ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಸನಾತನ ಧರ್ಮದ ರಕ್ಷಣೆಗಾಗಿ ಬಾಲಗೋಕುಲಗಳು ದುಡಿಯುತ್ತಿರುವುದು ಶ್ಲಾಘನೀಯ ಎಂದರು.
ರಾ.ಸ್ವ.ಸೇ.ಸಂಘದ ಕಾಸರಗೋಡು ಗ್ರಾಮಾಂತರ ತಾಲೂಕ್ ಕಾರ್ಯವಾಹ ಪವಿತ್ರನ್ ಕೆ.ಕೆ.ಪುರಂ ಧಾರ್ಮಿಕ ಭಾಷಣ ಮಾಡಿ ಮಕ್ಕಳಲ್ಲಿ ನೈತಿಕ ಮೌಲ್ಯಗಳು, ದೇವ ನಾಮ ಸಂಕೀರ್ತನೆ ಮಕ್ಕಳ ಮನೋಭಾವ ಅಭಿವೃದ್ಧಿಪಡಿಸುತ್ತದೆ. ಯೋಗದಿಂದ ಆರೋಗ್ಯ ಲಭಿಸುತ್ತದೆ ಎಂದರು. ಬಾಲಗೋಕುಲ ಇಂದು ವಿಸ್ತಾರವಾಗಿ ಬೆಳೆಯುತ್ತಿರುವುದು ಸಂತೋಷದ ವಿಷಯ ಎಂದರು.
ಶ್ರೀ ಮಲ್ಲಿಕಾರ್ಜುನ ಬಾಲಗೋಕುಲ ಮಕ್ಕಳಿಂದ ಭಜನಾಮೃತಂ, ಪ್ರಾರ್ಥನೆ ನಡೆಯಿತು. ಬಾಲಗೋಕುಲ ಶಿಕ್ಷಕಿ ಶರಣ್ಯ ವಿ.ಕೆ. ಸ್ವಾಗತಿಸಿ, ಶ್ರೀ ಮಲ್ಲಿಕಾರ್ಜುನ ಬಾಲಗೋಕುಲ ಸಮಿತಿ ಕಾರ್ಯದರ್ಶಿ ಅರ್ಚನಾ ಕಿಶೋರ್ ವಂದಿಸಿದರು. ಮಹೋತ್ಸವ ಸಂಬಂಧ ವಿವಿಧ ಸ್ಪರ್ಧೆಗಳು ಹಾಗು ಮೊಸರು ಕುಡಿಕೆ ಸ್ಪರ್ಧೆ ಜರಗಿತು.

