ಕಾಸರಗೋಡು: ಮಳೆಯ ತೀವ್ರ ಬಿರುಸು ಕಡಿಮೆಯಾಗುತ್ತಿದ್ದಂತೆ ಪುನರ್ವಸತಿ ಕೇಂದ್ರಗಳಲ್ಲಿ ಆಸರೆ ಪಡೆದವರು ನೆಮ್ಮದಿಯಿಂದ ಸ್ವಂತ ಮನೆಗೆ ಮರಳಿದ್ದಾರೆ. ಈಗ ಹೊಸದುರ್ಗ, ವೆಳ್ಳರಿಕುಂಡ್ ತಾಲೂಕುಗಳಲ್ಲಿ 20 ಶಿಬಿರಗಳು ಕಾರ್ಯನಿರತವಾಗಿದೆ. ಇಲ್ಲಿ 779 ಕುಟುಂಬಗಳ 2465 ಮಂದಿ ಆಸರೆ ಪಡೆದಿದ್ದರು. ಹೊಸದುರ್ಗ ತಾಲೂಕಿನ ಚೆರುವತ್ತೂರು, ಸೌತ್ ತ್ರಿಕರಿಪುರ ಗ್ರಾಮದ ತಲಾ 3, ಕಾಂಞಂಗಾಡ್, ಕ್ಲಾಯಕೊಡ್, ಪೇರಾಲ್ ಗ್ರಾಮಗಳಲ್ಲಿ ತಲಾ 2, ನೀಲೇಶ್ವರ, ಅಜಾನೂರು, ಕಯ್ಯೂರು ಗ್ರಾಮಗಳಲ್ಲಿ ತಲಾ ಒಂದು ಶಿಬಿರಗಳು ಚಟುವಟಿಕೆ ನಡಸಿದ್ದುವು. ವೆಳ್ಳರಿಕುಂಡ್ ತಾಲೂಕಿಲ್ಲಿ ಪರಪ್ಪ ಗ್ರಾಮದಲ್ಲಿ ಪನತ್ತಡಿ, ಚಿತ್ತಾರಿಕಲ್, ಕಳ್ಳಾರ್ ಗ್ರಾಮಗಳಲ್ಲಿ ತಲಾ ಒಂದು ಶಿಬಿರಗಳು ಜಿಲ್ಲೆಯಲ್ಲಿ ಚಟುವಟಿಕೆ ನಡೆಸಿದ್ದುವು. ಒಟ್ಟು 31 ಶಿಬಿರಗಳು ಈ ಬಾರಿ ಚಟುವಟಿಕೆ ನಡೆಸಿದ್ದುವು.
ಸಹಾಯದ ಮಹಾಪೂರ : ಈ ಸಲದ ಬಿರುಸಿನ ಮಳೆ ಜಿಲ್ಲೆಗೆ ತಂದಿದ್ದ ಅಪಾರ ನಷ್ಟದಲ್ಲಿ ತತ್ತರಿಸಿ ಹೋದ ಜನತೆಯ ಕಣ್ಣೀರೊರೆಸಲು ಜಿಲ್ಲಾಡಳಿತೆ ನಡೆಸಿದ ಕೊಡುಗೆಗಳ ಸಂಗ್ರಹಾಲಯಗಳಿಗೆ (ಕಲೆಕ್ಷನ್ ಸೆಂಟರ್ ಗಳಿಗೆ) ಸಹೃದಯರ ಕೊಡುಗೆಗಳ ಮಹಾಪೂರವೇ ಹರಿದುಬರುತ್ತಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದ ತಂಡ ನಡೆಸುತ್ತಿರುವ ಅವಿರತ ಯತ್ನಕ್ಕೆ ಸಮಾಜದ ಎಲ್ಲ ಸ್ತರಗಳ ಜನತೆ ಸ್ಪಂದಿಸುತ್ತಿದ್ದಾರೆ. ಕುಡಿಯುವ ನೀರಿನಿಂದ ಹಣ್ಣಿನರಸ ವರೆಗೆ, ಅಡುಗೆ ತೈಲದಿಂದ ಪಾತ್ರೆ ಶುಚಿಗೊಳಿಸುವ ದ್ರವದ ವರೆಗೆ, ಅಕ್ಕಿಯಿಂದ ತೊಡಗಿ ಸಂಬಾರ ದಿನಸಿಗಳ ವರೆಗೆ, ಮಕ್ಕಳ ಆಹಾರದಿಂದ ತೊಡಗಿ ಔಷಧದ ವರೆಗೆ, ಸ್ನಾನದ ಸಾಬೂನಿನಿಂದ ತೊಡಗಿ ಬಟ್ಟೆ ಒಗೆಯುವ ಪುಡಿ ವರೆಗೆ, ಸ್ಯಾನಿಟರಿ ಪ್ಯಾಡ್‍ನಿಂದ ಆರಂಭಗೊಂಡು ಉಡುಪುಗಳ ವರೆಗೆ, ಹಾಸುಗೆಯಂದ ಹೊದಿಕೆವರೆಗೆ ನಿತ್ಯ ಉಪಯೋಗಿ ಸಾಮಾಗ್ರಿಗಳ ಪ್ರವಾಹ ಹರಿದು ಬರುತ್ತಿದೆ.
ಹೊಸದುರ್ಗ ತಾಲೂಕು ಕಚೇರಿ, ಪಡನ್ನಕ್ಕಾಡ್ ಕೃಷಿ ಕಾಲೇಜುಗಳಲ್ಲಿ ಕಲೆಕ್ಷನ್ ಸೆಂಟರ್ ಚಟುವಟಿಕೆ ನಡೆಸುತ್ತಿವೆ. ಫ್ರೆಂಡ್ಸ್ ಕಾಯಂಕುಳಂ ಪೆರಿಯ, ಕಾಸರಗೋಡಿನು ಒರಿಡಂ ಈ ವಾಕಮರಚೋಟ್ಟಿಲ್ ವಾಟ್ಸ್ ಆಪ್ ಗುಂಪು, ಯುವಶಕ್ತಿ ಮಡಿಕೈ, ಐಂಙõÉೂಂನ ಸಾಂತ್ವನಂ ಪುರುಷ ಸಹಾಯ ಸಂಘ, ರಿಷಿರಾಂ ರಮಣನ್, ಮನ್ನಿಪ್ಪಾಡಿಯ ಕೆ.ರಂಜಿತ್, ಕಾಸರಗೋಡು ಮೋಟಾರು ವಾಹನ ಇಲಾಖೆ ಸಹಿತ ಸಂಸ್ಥೆಗಳು ಉದಾರ ಕೊಡುಗೆಗಳನ್ನು ಹಸ್ತಾಂತರಿಸಿವೆ. ಕೆಲವು ಸಹೃದಯರು ನಿಯಂತ್ರಣ ಕೊಠಡಿಗೆ ಕರೆ ಮಾಡಿ ನಿರಂತರ ಸಹಾಯದ ಭರವಸೆ ನೀಡುತ್ತಿದ್ದಾರೆ. ಮಾಹಿತಿಗೆ ಹೊಸದುರ್ಗ ತಾಲೂಕು ಜ್ಯೂನಿಯರ್ ಸುಪರಿಂಟೆಂಡೆಂಟ್ ಎನ್.ಕೆ.ಝೂಬೈರ್ : 9447520163, 0467-2204042.
ಇದೇ ವೇಳೆ ಸಂತ್ರಸ್ತರಿಗೆ ತೀವ್ರ ಅಗತ್ಯವಿರುವ ಕೆಲವು ಸಾಮಾಗ್ರಿಗಳು ಇಂತಿವೆ. ಒಂದು ಸಾವಿರ ಬಾಟಲಿ ಫಿನಾಯಿಲ್, ಹಾರೆ ಒಂದು ನೂರು, ನೂರು ಶುಚೀಕರಣದ ಬ್ರಷ್, ಕುಮ್ಮಾಯ 3 ಸಾವಿರ, 1800 ಬಾಲ್ದಿ, ಪಾಟೆ 1700, 500 ಹಿಡಿಸೂಡಿ, ಒಂದು ಸಾವಿರ ನೆಲ ಒರೆಸುವ ಬಟ್ಟೆ, ಡೆಟ್ಟಾಲ್ 1350, 4 ಸಾವಿರ ಗ್ಲುಕೋಸ್ ಪ್ಯಾಕೆಟ್, 200 ಜತೆ ಗಂಬೂಟು, ಬೈರಾಸ್ 3 ಸಾವಿರ, ಬ್ಲೀಚಿಂಗ್ ಪೌಡರ್ 3 ಸಾವಿರ ಪ್ಯಾಕೆಟ್, ಕ್ಲೀನಿಂಗ್ ಲೋಷನ್ 2 ಸಾವಿರ, ಕಾಲೊರೆಸುವ ಮ್ಯಾಟ್ 4800, ಹೊದಿಕೆಗಳು 4800 ಗಳ ಅಗತ್ಯ ತೀವ್ರವಾಗಿದೆ. ಸಹೃದಯರು, ಸಂಘಟನೆಗಳು ಈ ಪರಿಕರಗಳನ್ನು ಒದಗಿಸಿದಲ್ಲಿ ಈ ಸಂದರ್ಭ ಜನೋಪಯೋಗಿಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಿನಂತಿಸಿದ್ದಾರೆ.
ಶಾಲೆಗಳ ಪುನರಾರಂಭ : ಮಳೆಯ ಬಿರುಸು ಕಡಿಮೆಗೊಂಡಿರುವ ಹಿನ್ನೆಲೆಯಲ್ಲಿ ನಿನ್ನೆ(ಆ.13)ಜಿಲ್ಲೆಯಲ್ಲಿ ಶಾಲೆಗಳು ಪುನರಾರಂಭಗೊಂಡಿದೆ.


