ಕಾಸರಗೋಡು: ಜವಾಹರ್ ನವೋದಯ ರಾಷ್ಟ್ರೀಯ ಅತ್ಲೆಟಿಕ್ ಮೀಟ್ ಪೆರಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಆರಂಭಗೊಂಡಿತು.
ವಿದ್ಯಾಲಯದ ಹೈದರಾಬಾದ್ ವಲಯ ಸಹಾಯಕ ಕಮೀಷನರ್ ಎಂ.ದ್ರಾವಿಡಮಣಿ ಉದ್ಘಾಟಿಸಿದರು. ಸಹಾಯಕ ಕಮೀಷನರ್ ಉಮಾ ಮಹೇಶ್ವರ ರಾವ್ ಪ್ರತಿಜ್ಞೆ ಪಠಿಸಿದರು. ಶಾಸಕ ಕೆ.ಕುಂಞÂರಾಮನ್ ಪಂದ್ಯಾಟಗಳಿಗೆ ಹಸುರು ನಿಶಾನೆ ತೋರಿದರು. ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಎಸ್.ನಾಯರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕೆ.ಕೃಷ್ಣನ್, ನಗರಸಭೆ ಮಾಜಿ ಅಧ್ಯಕ್ಷ ವೇಣುಗೋಪಾಲ ನಂಬ್ಯಾರ್, ಪಿ.ಟಿ.ಸಿ.ಸದಸ್ಯ ಎ.ಕೆ.ರಾಜೇಂದ್ರನ್, ಅಲುಮ್ನಿ ಅಸೋಸಿಯೇಶನ್ ಅಧ್ಯಕ್ಷ ಪಿ.ವಿ.ರಘುನಾಥನ್, ಪ್ರಚಾರ ಸಮಿತಿ ಅಧ್ಯಕ್ಷ ಪ್ರಮೋದ್ ಪೆರಿಯ ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲ ಕೆ.ಎಂ.ವಿಜಯಕೃಷ್ಣನ್ ಸ್ವಾಗತಿಸಿ, ದಕ್ಷಿಣ ಕನ್ನಡ ಜವಾಹರ್ ನವೋದಯ ಪ್ರಾಂಶುಪಾಲ ವಿ.ಶ್ರೀನಿವಾಸನ್ ವಂದಿಸಿದರು.


