ಕಾಸರಗೋಡು: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವವು ಅಗಸ್ಟ್ 23 ರಂದು ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದಂಗವಾಗಿ 23 ರಂದು ಬೆಳಗ್ಗೆ 8.30 ರಿಂದ ಡಾ.ಉದಯ ಕುಮಾರ್ ಕಾಸರಗೋಡು ಅವರಿಂದ ಸ್ಯಾಕ್ಸೋಫೆÇೀನ್‍ವಾದನ ನಡೆಯಲಿದೆ. 9.15ಕ್ಕೆ ಅಷ್ಟಮಿ ಉತ್ಸವದಂಗವಾಗಿ ನಡೆಯಲಿರುವ ಬೌದ್ಧಿಕ ಸ್ಪರ್ಧೆಗಳ ಉದ್ಘಾಟನೆಯನ್ನು ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀಪತಿ ಅಡಿಗ ಕೂಡ್ಲು ನಡೆಸುವರು.
ಬಳಿಕ ಮಕ್ಕಳಿಗಾಗಿ ಭಗವದ್ಗೀತೆ ಕಂಠಪಾಠ, ಭಕ್ತಿಗಾನ, ಚಿತ್ರ ರಚನೆ, ಮುದ್ದು ಕೃಷ್ಣ ವೇಷ ಸ್ಪರ್ಧೆ ಹಾಗೂ ಛದ್ಮವೇಷ ಸ್ಪರ್ಧೆ ನಡೆಯಲಿದೆ. ಸಂಜೆ 6.30ಕ್ಕೆ ಸಮಾರೋಪ ಸಭೆ ನಡೆಯಲಿದೆ. ದೇವಸ್ಥಾನದ ಅನುವಂಶಿಕ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಅಧ್ಯಕ್ಷತೆ ವಹಿಸಲಿರುವರು. ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಆಶೀರ್ವಚನ ನೀಡಲಿರುವರು. ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಂದಾಳು ರಾಮ್ ಪ್ರಸಾದ್ ಕಾಸರಗೋಡು ಭಾಗವಹಿಸಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಿರುವರು. ಸುರೇಶ್ ಮಣಿಯಾಣಿ ಕೂಡ್ಲು, ಕೆ.ಜಗದೀಶ ಕೂಡ್ಲು, ವೇಣುಗೋಪಾಲ ಮಾಸ್ತರ್ ಉಪಸ್ಥಿತರಿರುವರು.
ಬಳಿಕ ಶ್ರೀಕೃಷ್ಣ ಅಡಿಗ ಕೂಡ್ಲು ಅವರ ನೇತೃತ್ವದಲ್ಲಿ 35ನೇ ಸಾರ್ವಜನಿಕ ಸತ್ಯನಾರಾಯಣ ಪೂಜೆ ನಡೆಯಲಿದೆ. ರಾತ್ರಿ ಚಂದ್ರೋದಯಕ್ಕೆ ಸರಿಯಾಗಿ ಶ್ರೀ ದೇವರಿಗೆ ಕ್ಷೀರಾಭಿಷೇಕ ಮತ್ತು ಮಹಾಪೂಜೆ ನಡೆಯಲಿದೆ.


