ಮಂಜೇಶ್ವರ: ಮಂಜೇಶ್ವರ ಅವರ್ ಲೇಡಿ ಆಫ್ ಮೆರ್ಸಿ ಚರ್ಚ್ ಮೇಲಿನ ದಾಳಿ ಹಾಗೂ ಕ್ರೈಸ್ತ ಸಮುದಾಯದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಪ್ರತಿಭಟಿಸಿ ಕಾಸರಗೋಡು ವಲಯ ಕೆಥೋಲಿಕ್ ಸಭಾ ನೇತೃತ್ವದಲ್ಲಿ ಇಂದು(ಆಗಸ್ಟ್ 25) ಮಂಜೇಶ್ವರದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಸಂಜೆ 3ಕ್ಕೆ ಮಂಜೇಶ್ವರ ಬ್ಲಾಕ್ ಪಂಚಾಯತಿ ಕಚೇರಿ ಪರಿಸರದಿಂದ ಪ್ರತಿಭಟನಾ ಜಾಥಾ ಹೊರಡಲಿದ್ದು, ಮಂಜೇಶ್ವರ ಚರ್ಚ್ ಮುಂಭಾಗದ ರಸ್ತೆಯಲ್ಲಿ ಸಾಗಿ ಹೊಸಂಗಡಿ ಜಂಕ್ಷನ್‍ನಲ್ಲಿ ಕೊನೆಗೊಳ್ಳಲಿದೆ. ಬಳಿಕ ನಡೆಯುವ ಪ್ರತಿಭಟನಾ ಸಭೆಯಲ್ಲಿ ಧರ್ಮಗುರುಗಳು, ಧಾರ್ಮಿಕ ಮುಖಂಡರು ಉಪಸ್ಥಿತರಿರುವರು.
ಈ ಕುರಿತು ಚರ್ಚಿಸಲು ಮಂಜೇಶ್ವರ ಚರ್ಚ್ ವಠಾರದಲ್ಲಿ ನಡೆದ ತುರ್ತು ಸಭೆಲ್ಲಿ ಕಾಸರಗೋಡು ವಲಯ ಪ್ರಧಾನ ಧರ್ಮಗುರು ಫಾದರ್ ಜೋನ್ ವಾಸ್, ಮಂಜೇಶ್ವರ ಚರ್ಚ್ ಧರ್ಮಗುರು ಫಾದರ್ ವಿನ್ಸೆಂಟ್ ಸಲ್ದಾನ್ಹಾ, ಬ್ರ.ಜೋಸೆಫ್ ಕ್ರಾಸ್ತಾ, ನ್ಯಾಯವಾದಿ ಥೋಮಸ್ ಡಿ'ಸೋಜ, ಕೆಥೋಲಿಕ್ ಸಭಾ ವಲಯ ಅಧ್ಯಕ್ಷ ರಾಜು ಸ್ಟೀಫನ್ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು.

