ಕುಂಬಳೆ: ಶಡ್ರಂಪಾಡಿ ಶ್ರೀ ಗೋಪಾಲಕೃಷ್ಣ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ವೈ.ಶ್ಯಾಮಪ್ರಸಾದ್ ಎಯ್ಯೂರು ಮೂಲೆ ಅವರ ಅಧ್ಯಕ್ಷತೆಯಲ್ಲಿ ಜನಾರ್ದನ ಆಚಾರ್ಯ ಪರಕ್ಕಿಲ ಅವರು ಉದ್ಘಾಟಿಸಿದರು. ಅವಿನಾಶ ಕಾರಂತ ಸ್ವಾಗತಿಸಿ, ಎಚ್.ಸೂರ್ಯನಾರಾಯಣ ಹೊಸಮನೆ ವಂದಿಸಿದರು.
ವಿವಿಧ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಮಹಾಪೂಜೆ,ಮಂಗಳಾರತಿ, ಪ್ರಸಾದ ವಿತರಣೆ, ಭೋಜನ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಉದ್ಯಮಿ ಜಯಪ್ರಕಾಶ್ ರೈ ಕಾರಿಂಜ ಅಧ್ಯಕ್ಷತೆ ವಹಿಸಿದರು. ವೇದಮೂರ್ತಿ ಹರಿನಾರಾಯಣ ಮಯ್ಯ ಕುಂಬಳೆ
ಧಾರ್ಮಿಕ ಭಾಷಣ ಮಾಡಿದರು. ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು. ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಅವಿನಾಶ ಕಾರಂತ ಸ್ವಾಗತಿಸಿ, ಮಹಾಬಲೇಶ್ವರ ಭಟ್ ಆರೋಳಿ ವಂದಿಸಿದರು. ಅಪ್ಪಣ್ಣ ಸೀತಾಂಗೋಳಿ ಕಾರ್ಯಕ್ರಮ ನಿರೂಪಿಸಿದರು.


