ಕಾಸರಗೋಡು: ನೆರೆ ಹಾವಳಿಯಿಂದ ಅಯೋಮಯವಾಗಿರುವ ಪ್ರದೇಶಗಳಲ್ಲಿ ಪುನರ್ವಸತಿ ಮತ್ತು ಶುಚೀಕರಣ ಯ ಜ್ಞ ಚಟುವಟಿಕೆಗಳಲ್ಲಿ ನೆಹರೂ ಯುವ ಕೇಂದ್ರ ವ್ಯಾಪ್ತಿಯ ಕ್ಲಬ್ ಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕೇಂದ್ರದ ಜಿಲ್ಲಾ ಯೂತ್ ಸಂಚಾಲಕ ಎಂ.ಅನಿಲ್ ಕುಮಾರ್ ಆಗ್ರಹಿಸಿದರು.
ಸಂತ್ರಸ್ತರಿಗಾಗಿ ಸಂಗ್ರಹಿಸಲಾಗುತ್ತಿರುವ ನಿತ್ಯೋಪಯೋಗಿ ಸಾಮಾಗ್ರಿಗಳನ್ನು ಜಿಲ್ಲಾಡಳಿತದ ಕಲೆಕ್ಷನ್ ಸೆಂಟರ್ ಗಳಿಗೆ ತಲಪಿಸಬೇಕು. ಜಲವೃತವಾಗಿದ್ದ ಪ್ರದೇಶಗಳ ನಿವಾಸಗಳನ್ನು ಶುಚಿಗೊಳಿಸಬೇಕು. ಸಾರ್ವಜನಿಕ ಪ್ರದೇಶಗಳಿಗೆ ಈ ನಿಟ್ಟಿನಲ್ಲಿ ಆದ್ಯತೆ ನೀಡಬೇಕು. ಶುಚೀಕರಣ ನಡೆಸಿರುವ ಬಗ್ಗೆ, ಆಯಾ ಕುಟುಂಬಗಳ ಬಗ್ಗೆ ಆ.20ರ ಮುಮಚಿತವಾಗಿ ಸಿವಿಲ್ ಸ್ಟೇಷನ್ ನಲ್ಲಿರುವ ನೆಹರೂ ಯುವ ಕೇಂದ್ರಕ್ಕೆ ವರದಿ ಸಲ್ಲಿಸಬೇಕು. ಮಾದರಿ ರೂಪದಲ್ಲಿ ಶುಚೀಕರಣನಡೆಸಿದ ಸಂಘಟನೆಗಳಿಗೆ ಮತ್ತು ವ್ಯಕ್ತಿಗಳಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದರು.
ಶುಚೀಕರಣ ಯ ಜ್ಞ ಮತ್ತ ಸ್ವಚ್ಛ ಭಾರತ ಅಭಿಯಾನ ಕುರಿತು ಮಾಹಿತಿ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಯೂತ್ ಕ್ಲಬ್ ಗಳ ಸಭೆ ಇಂದು (ಆ.14) ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದವರು ನುಡಿದರು. ಈಗಗಲೇ ಪರಿಹಾರ ಚಟುವಟಿಕೆಗಳಿಗಾಗಿ ದುಡಿದವರು ಮತ್ತು ಶುಚೀಕರಣ, ಪರಿಹಾರ ಒದಗಿಸುವಿಕೆ ಇತ್ಯಾದಿಗಳಲ್ಲಿ ಆಸಕ್ತರಾದ ಕ್ಲಬ್ ಗಳ ಪ್ರತಿನಿಧಿಗಳು ಭಗವಹಿಸುವಂತೆ ಅವರು ತಿಳಿಸಿದ್ದಾರೆ.

