ಮುಳ್ಳೇರಿಯ: ಕೇರಳದ ಹಲವು ಜಿಲ್ಲೆಗಳಲ್ಲಿ ನೆರೆಹಾವಳಿಯಿಂದ ತೊಂದರೆಗೀಡಾದ ಜನತೆಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲು ರಾಷ್ಟ್ರೀಯ ಸೇವಾ ಯೋಜನೆಯ ಕುಂಬಳೆ ಕ್ಲಸ್ಟರ್ ವತಿಯಿಂದ ವಿವಿಧ ಸಾಮಗ್ರಿಗಳ ಶೇಖರಣೆಯನ್ನು ಆರಂಭಿಸಲಾಯಿತು.
ಬೋವಿಕ್ಕಾನ ಪೇಟೆಯಲ್ಲಿ ನಡೆದ ಕಾರ್ಯಕ್ರಮವನ್ನು ಮುಳಿಯಾರ್ ಗ್ರಾಮ ಪಂಚಾಯತಿ ಸದಸ್ಯೆ ಅನೀಸಾ ಮನ್ಸೂರ್ ಔಷದಿಗಳನ್ನು ಶಾಹಿದ್ ಮುಳಿಯಾರ್ ಅವರಿಗೆ ನೀಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಪ್ರಕೃತಿ ವಿಕೋಪಕ್ಕೆ ಕಂಗೆಟ್ಟಿರುವ ಕೇರಳದ ಜನತೆಗೆ ಸಹಾಯ ಹಸ್ತವನ್ನು ನೀಡುತ್ತಿರುವ ಎನ್‍ಎಸ್‍ಎಸ್‍ನ ಕಾರ್ಯವನ್ನು ಶ್ಲಾಘಿಸಿದರು. ಈ ರೀತಿಯ ಕಾರ್ಯಕ್ರಮಗಳು ಜನರಿಗೆ ಉತ್ತಮ ಸಂದೇಶ ಸಾರುತ್ತದೆ. ಪರಿಸರ ಸ್ನೇಹಿ ಬದುಕು ನಮ್ಮದಾಗಬೇಕು. ಪರಿಸರ ನಾಶವೇ ಇಂತಹ ದುರಂತಗಳಿಗೆ ಕಾರಣ ಎಂದು ಇನ್ನಾದರೂ ನಾವು ತಿಳಿಕೊಳ್ಳಬೇಕಿದೆ ಎಂದು ಹೇಳಿದರು.
ಷರೀಫ್ ಕೊಡವಂಜಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು. ಬಿ.ಅಶ್ರಫ್, ಬಿ.ಸಿ.ಕುಮಾರನ್, ಮುಸ್ತಫಾ ಬಿಸ್ಮಿಲ್ಲಾ, ಗಂಗಾದರನ್, ಬಿ.ಎಂ.ಹಾರಿಫ್, ಹನೀಫ ಬೋವಿಕ್ಕಾನ, ಎನ್.ಎಸ್.ಎಸ್. ಯೋಜನಾಧಿಕಾರಿ ಮಧುಸೂದನನ್, ಮಹೇಶ ಏತಡ್ಕ ಮುಂತಾದವರು ಮಾತನಾಡಿದರು.
ಆದೂರು ಶಾಲಾ ಅಧ್ಯಾಪಕ ಶಾಹುಲ್ ಹಮೀದ್ ಸ್ವಾಗತಿಸಿ, ಸಜೀವನ್ ವಂದಿಸಿದರು. ಯೋಜನಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಬೋವಿಕ್ಕಾನ ಪೇಟೆಯಲ್ಲಿ ವಿವಿಧ ತರದ ಸಾಮಗ್ರಿಗಳನ್ನು ಶೇಖರಿಸಿದರು. ಜನರು ಉತ್ತಮ ರೀತಿಯಲ್ಲಿ ಸ್ಪಂದಿಸಿದರು. 50 ಸಾವಿರ ರೂಪಾಯಿಗಳ ಸಾಮಾಗ್ರಿಗಳನ್ನು ಸಂಗ್ರಹಿಸಲಾಯಿತು.


