ಪೆರ್ಲ: ಪೆರ್ಲದ ನೇತಾಜಿ ಸಾವ9ಜನಿಕ ಗ್ರಂಥಾಲಯವು ರಾಷ್ಟ್ರದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತಾ ಕಾವ್ಯ ಲಹರಿ-2019 ಎಂಬ ವಿನೂತನ ಕಾರ್ಯಕ್ರಮವನ್ನು ಇಂದು ಅಪರಾಹ್ನ 2 ರಿಂದ ಎಣ್ಮಕಜೆ ಗ್ರಾ.ಪಂ. ಸಭಾಂಗಣದಲ್ಲಿ ಆಯೋಜಿಸಿದೆ.
ಕಾರ್ಯಕ್ರಮದಲ್ಲಿ ಗ್ರಂಥಾಲಯದ ಅಧ್ಯಕ್ಷ ರಾಮಕೃಷ್ಣ ಕುದ್ವ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಹುಸೈನ್ ಮಾಸ್ತರ್ ಪಿ.ಕೆ.ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಾಹಿತಿ ಮಧುರಕಾನನ ಗಣಪತಿ ಭಟ್, ಸಾಹಿತಿ, ಸಂಶೋಧಕಿ ರಾಜಶ್ರೀ ಟಿ.ರೈ ಪೆರ್ಲ, ಹಿರಿಯ ಸಾಹಿತಿ ಹರೀಶ್ ಪೆರ್ಲ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಗ್ರಂಥಾಲಯದ ಕಾರ್ಯದರ್ಶಿ ಶಿಕ್ಷಕ, ರಂಗ ನಿರ್ದೇಶಕ ಉದಯ ಸಾರಂಗ್, ಗ್ರಂಥಾಲಯದ ಉಪಾಧ್ಯಕ್ಷ ಸಂಜೀವ ಮಾಸ್ತರ್ ಸಿ.ಎಚ್. ಮೊದಲಾದವರು ಉಪಸ್ಥಿತರಿರುವರು
ಈ ಸಂದರ್ಭ ಒಂದು ದೇಶ, ಒಂದು ಆಶಯ, ಹಲವು ಕವಿತೆಗಳು ಎಂಬ ಆಶಯದೊಂದಿಗೆ ಸ್ವರಚಿತ ಕವನ ಸ್ಪರ್ಧೆ ಏರ್ಪಡಿಸಲಾಗಿದೆ.

