ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಸಂಗೀತ ಪರೀಕ್ಷೆಯ ವಿದ್ವತ್ ಪೂರ್ವ ವಿಭಾಗದಲ್ಲಿ ಹೇಮಶ್ರೀ ಕಾಕುಂಜೆ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಸಂಗೀತ ಪರೀಕ್ಷೆಯ ವಯಲಿನ್ ವಾದನ ಜೂನಿಯರ್ ವಿಭಾಗದಲ್ಲಿ ಸ್ಫೂರ್ತಿ ಭಟ್ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ.
ಮಯೂರ, ಯಶಸ್ವಿನಿ.ಕೆ ಮತ್ತು ಅನನ್ಯ.ಕೆ ಇವರು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಸಂಗೀತ ಪರೀಕ್ಷೆ ವೋಕಲ್ ಜೂನಿಯರ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ಆರಾದನಾ ಸಂಗೀತ ಶಾಲೆ ನೀರ್ಚಾಲು ಇದರ ಶಿಕ್ಷಕಿಯಾದ ವಿದುಷಿ ವಿಜಯಾ ಪ್ರಕಾಶ್ ಬೆದ್ರಡಿ ಕಲ್ಲಕಟ್ಟ ಇವರಲ್ಲಿ ಸಂಗೀತಾಭ್ಯಾಸ ಮಾಡುತ್ತಿದ್ದಾರೆ.
ಮೃಗಂಗ ವಾದನದಲ್ಲಿ ಡಿಸ್ಟಿಂಕ್ಷನ್
ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಸಂಗೀತ ಪರೀಕ್ಷೆಯ ಮೃದಂಗ ವಾದನ ಸೀನಿಯರ್ ವಿಭಾಗದಲ್ಲಿ ಅಕ್ಷರ ಕೆ.ಎಚ್. ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿರುತ್ತಾನೆ.ಇವನು ವಿದ್ವಾನ್ ಕಾಂಚನ ಈಶ್ವರ ಭಟ್ ಇವರ ಶಿಷ್ಯ.



