ಮಂಜೇಶ್ವರ: ಆನೆಕಲ್ಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೇರಳ ಕೃಷಿ ವಿದ್ಯಾಲಯ ವಿಸ್ತರಣಾ ತರಬೇತಿ ಕೇಂದ್ರ ವರ್ಕಾಡಿ ಇದರ ಜಂಟಿ ಆಶ್ರಯದಲ್ಲಿ ಶನಿವಾರ ಅಪರಾಹ್ನ ಶಾಲಾ ಪರಿಸರದಲ್ಲಿ ಕೃಷಿಕರ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಅಶ್ರಫ್ ಎ.ಎಂ. ಆನೆಕಲ್ಲು ವಹಿಸಿದ್ದರು. ಕೇರಳ ಕೃಷಿ ವಿಶ್ವವಿದ್ಯಾನಿಲಯ ವರ್ಕಾಡಿಯ ಸಹಾಯಕ ಪ್ರಾಧ್ಯಾಪಕ ಆರ್.ಜಯರಾಜ್ ಔಪಚಾರಿಕವಾಗಿ ಉದ್ಘಾಟಿಸಿ ಕೃಷಿಯ ಪ್ರಾಮುಖ್ಯತೆ, ಕೃಷಿಯ ಆರ್ಥಿಕ ಮಟ್ಟ, ಕೃಷಿ- ಕಲೆ- ವಿಜ್ಞಾನದ ಬೆಳವಣಿಗೆ ಮತ್ತು ಪ್ರಾಣಿಗಳ ಬೆಳವಣಿಗೆಗಳ ಪರಸ್ಪರ ಸಂಬಂಧ ಬೆಳೆಯ ನಾಲ್ಕು ವಿಧಗಳು, ಕಾಂಪೋಸ್ಟ್ ಗೊಬ್ಬರ, ಬಯೋಗ್ಯಾಸ್, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳ ತಯಾರಿ ಮುಂತಾದವುಗಳ ಕುರಿತು ಪ್ರಾಜೆಕ್ಟರ್ ನ ಸಹಾಯದಿಂದ ಉಪನ್ಯಾಸ ನೀಡಿದರು.
ಕೇರಳ ಕೃಷಿ ವಿಶ್ವವಿದ್ಯಾನಿಲಯ ವರ್ಕಾಡಿಯ ಪ್ರಾಧ್ಯಾಪಕ ಸಿಸಿ ತೋಮಸ್, ಅಧಿಕಾರಿ ಚೈತ್ರ ಅವರು ವಿದ್ಯಾರ್ಥಿಗಳಿಗೆ ಒಗಟು ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ತರಕಾರಿ ಗಿಡಗಳನ್ನು ಬಹುಮಾನವಾಗಿ ವಿತರಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ತರಕಾರಿ ಬೀಜಗಳನ್ನು ಮತ್ತು ಸಿಹಿ ತಿಂಡಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಕೃಷಿಕರಾದ ಸೇಸು ನಾಯ್ಕ ಕತ್ತರಿಗೋಡಿ ಮತ್ತು ಮಹಮ್ಮದ್ ಬಗಂಬಿಲ ಇವರನ್ನು ಶಾಲು ಹೊದಿಸಿ ಸನ್ಮಾನಿಸಿಸಲಾಯಿತು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಮುಖ್ಯ ಶಿಕ್ಷಕಿ ರೇಣುಕಾ.ವಿ ಸ್ವಾಗತಿಸಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ರವಿಶಂಕರ್ ಎಸ್ ವಂದಿಸಿದರು. ಹರೀಶ ವಿ ಕಾರ್ಯಕ್ರಮವನ್ನು ನಿರೂಪಿಸಿದರು.



