ಕಾಸರಗೋಡು: ಕಾಸರಗೋಡು ಜಿಲ್ಲಾ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ವಿಜ್ರಂಭಣೆಯಿಂದ ಜರಗಲಿದೆ. ವಿದ್ಯಾನಗರದ ನಗರಸಭೆ ಕ್ರೀಡಾಂಗಣದಲ್ಲಿ ಆ.15ರಂದು ಬೆಳಗ್ಗೆ 8 ಗಂಟೆಗೆ ನಡೆಯುವ ಸಮಾರಂಭದಲ್ಲಿ ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಧ್ವಜಾರೋಹಣ ನಡೆಸಿ, ವಿವಿಧ ಪಡೆಗಳು ನಡೆಸುವ ಪಥಸಂಚಲನ ವಂದನೆ ಸ್ವೀಕರಿಸುವರು. ಸ್ವಾತಂತ್ರ್ಯ ಹೋರಾಟಗಾರರು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿ, ಸಾರ್ವಜನಿಕರು ಮೊದಲಾದವರು ಭಾಗವಹಿಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಿನಂತಿಸಿದ್ದಾರೆ. ಜಿಲ್ಲೆಯ ಸರಕಾರಿ ಸಿಬ್ಬಂದಿ ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅವರು ಆದೇಶಿಸಿದರು.
ಇಂದು ಸ್ವಾತಂತ್ರ್ಯೋತ್ಸವ ಆಚರಣೆ
0
ಆಗಸ್ಟ್ 15, 2019