ಕುಂಬಳೆ: ಶ್ರೀರಾಮಚಂದ್ರಾಪುರ ಮಠದ ಮುಳ್ಳೇರಿಯ ಹವ್ಯಕ ಮಂಡಲ ಸಭೆ ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ ಇತ್ತೀಚೆಗೆ ಜರಗಿತು. ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ಯೋಜನೆ, ನೆರೆಪರಿಹಾರ ನಿಧಿಗಳಿಗೆ ದೇಣಿಗೆ ಸಮರ್ಪಣೆ ಮಾಡಲಾಯಿತು. ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್ ಸರ್ಪಮಲೆ ಪ್ರಾಸ್ತಾವಿಕವಾಗಿ ಮಾತನಾಡಿ, ಗತಸಭೆಯ ವರದಿಯನ್ನು ನೀಡಿದರು. ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ ಆಯವ್ಯಯ ವರದಿ ಹಾಗೂ ವಲಯ ಪದಾಧಿಕಾರಿಗಳು ಆಯಾ ವಲಯ ವರದಿಗಳನ್ನಿತ್ತರು. ಬಳಿಕ ಮಹಾ ಮಂಡಲದ ಸುತ್ತೋಲೆಗಳ ಬಗ್ಗೆ ವಿವರಣೆ, ಸಮಾಲೋಚನೆ ನಡೆಯಿತು. ಮಂಡಲ ಮಾತೃ ಪ್ರಧಾನೆ ಕುಸುಮಾ ಪೆರ್ಮುಖ `ಗೋಮಾತೆಗಾಗಿ ಶ್ರೀಮಾತೆ - ಮಾತೃತ್ವಮ್ ' ಯೋಜನೆಯ ಕಾರ್ಯವಿಧಾನಗಳ ಬಗ್ಗೆ ಮಾಹಿತಿಗಳನ್ನು ನೀಡಿದರು.
ಡಾ. ಡಿ.ಪಿ. ಭಟ್, ಮಹೇಶ್ ಸರಳಿ, ಕೇಶವಪ್ರಸಾದ ಎಡಕ್ಕಾನ, ಕುಸುಮ ಪೆರ್ಮುಖ, ಗೀತಾಲಕ್ಷ್ಮಿ, ದೇವಕಿ ಪನ್ನೆ, ವೈ. ಕೆ. ಗೋವಿಂದಭಟ್ ತಮ್ಮ ವಿಭಾಗಗಳ ವರದಿಗಳನ್ನು ನೀಡಿದರು. ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ ಹಾಗೂ ಬೆಂಗಳೂರು ಗಿರಿನಗರ ರಾಮಾಶ್ರಮದಲ್ಲಿ ಜರಗುತ್ತಿರುವ ರಾಮಾಯಣ ಚಾತುರ್ಮಾಸ್ಯ ಅಂಗವಾಗಿ ಮತ್ತು ಸೆ.11, 12ರಂದು ಜರಗಲಿರುವ ಮುಳ್ಳೇರಿಯ ಮಂಡಲ ಭಿಕ್ಷಾಸೇವೆಯ ಕುರಿತು ಸಮಾಲೋಚನೆ ನಡೆಸಲಾಯಿತು. ಮುಜುಂಗಾವು ಶ್ರೀ ಭಾರತೀ ನೇತ್ರಚಿಕಿತ್ಸಾಲಯದ ಕುರಿತು ಕೃಷ್ಣ ಮೋಹನ ಎಡನಾಡು ಮಾಹಿತಿಗಳನ್ನು ನೀಡಿದರು.
ಪೆÇ್ರ ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಸನ ತಂತ್ರದ ಕಳೆದ ಮೂರು ವರ್ಷಗಳ ಪುನರವಲೋಕನಗೈದು ಮಂಡಲದ ಕಾರ್ಯಗಳಲ್ಲಿ ಸಹಕರಿಸಿ ಶ್ರೀ ಮಠದ ಪ್ರಶಂಸೆಗೆ ಅರ್ಹವಾಗಲು ಸಹಕರಿಸಿದ ಮಂಡಲ, ವಲಯ ಪದಾಧಿಕಾರಿಗಳು, ಗುರಿಕ್ಕಾರರು, ಕಾರ್ಯಕರ್ತರೆಲ್ಲರಿಗೂ ಶ್ರೀ ಗುರುಗಳ ಆಶೀರ್ವಾದ, ಶ್ರೀರಾಮಾನುಗ್ರಹ ಸದಾ ಇರಲಿ ಎಂದು ಹಾರೈಸಿದರು. ಗೋವಿಂದ ಬಳ್ಳಮೂಲೆ, ಶ್ರೀಕೃಷ್ಣ ಭಟ್ ಮೀನಗದ್ದೆ, ವಲಯ ಪದಾಧಿಕಾರಿಗಳು ಉಪಸ್ಥಿತರಿದ್ದರು.


